ಟಾಟಾ ಏರ್‌ಲೈನ್ಸ್ ಹಾಗೂ ‘ಏರ್ ಇಂಡಿಯಾ’ ಹೆಸರು ಬಂದಿದ್ದು ಹೀಗೆ…

ನವದೆಹಲಿ: 75 ವರ್ಷಗಳಿಗೂ ಹಿಂದೆ ಟಾಟಾ ಸಮೂಹದ ನೌಕರರಿಂದ ಅಭಿಪ್ರಾಯ ಸಂಗ್ರಹಿಸಿ, ನಾಲ್ಕು ಹೆಸರುಗಳ ಪೈಕಿ ಒಂದನ್ನು ಅಂತಿಮಗೊಳಿಸಿ, ಆ ಹೆಸರನ್ನು ದೇಶದ ಮೊದಲ ವಿಮಾನಯಾನ ಕಂಪನಿಗೆ ಇರಿಸಲಾಯಿತು. ಆ ಹೆಸರು ‘ಏರ್ ಇಂಡಿಯಾ’.

 

ಏರ್ ಇಂಡಿಯಾ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಟಾಟಾ ಸಮೂಹವು, ಈ ವಿಮಾನಯಾನ ಕಂಪನಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಹಂಚಿಕೊಂಡಿದೆ.

1946ರಲ್ಲಿ ಟಾಟಾ ಏರ್‌ಲೈನ್ಸ್, ಟಾಟಾ ಸನ್ಸ್‌ನ ಒಂದು ವಿಭಾಗವಾಗಿ ಇದ್ದುದು ಒಂದು ಪ್ರತ್ಯೇಕ ಕಂಪನಿಯಾಯಿತು. ಆಗ ಇದಕ್ಕೆ ಒಂದು ಹೆಸರು ಹುಡುಕಬೇಕಿತ್ತು. ‘ಇಂಡಿಯನ್ ಏರ್‌ಲೈನ್ಸ್, ಪ್ಯಾನ್-ಇಂಡಿಯನ್ ಏರ್‌ಲೈನ್ಸ್, ಟ್ರಾನ್ಸ್‌-ಇಂಡಿಯನ್‌ ಏರ್‌ಲೈನ್ಸ್‌ ಮತ್ತು ಏರ್‌ ಇಂಡಿಯಾ ಹೆಸರುಗಳ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕಿತ್ತು’ ಎಂದು ಟಾಟಾ ಸಮೂಹ ಹೇಳಿದೆ.

ಟಾಟಾ ಸಮೂಹಕ್ಕೆ ಸೇರಿದ ಬಾಂಬೆ ಹೌಸ್‌ನಲ್ಲಿ, ಅಭಿಪ್ರಾಯ ಸಂಗ್ರಹಿಸುವ ಮೂಲಕ ಒಂದು ಹೆಸರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಟಾಟಾ ಕಂಪನಿಯ ನೌಕರರ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಮತಪತ್ರಗಳ ಮೇಲೆ ಮೊದಲ ಹಾಗೂ ಎರಡನೆಯ ಆಯ್ಕೆಯನ್ನು ತಿಳಿಸುವಂತೆ ಹೇಳಲಾಯಿತು.

ಏರ್‌ ಇಂಡಿಯಾ ಹೆಸರಿಗೆ ಹೆಚ್ಚು ಮತಗಳು ಬಂದಿದ್ದವು. ಈ ಮೂಲಕ ಏರ್‌ ಇಂಡಿಯಾ ಹೆಸರನ್ನು ಅಂತಿಮಗೊಳಿಸಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಜಿನಿಯರಿಂಗ್ ವಿದ್ಯಾರ್ಥಿನೊಬ್ಬ, ಬ್ಯಾಟ್ ಆಯಂಡ್ ಬಾಲ್ ಮೂಲಕ ಟೇಬಲ್ ಟೆನಿಸ್ ಆಡಿದ ಇವರು ರಾಜ್ಯದ ಹೊಸ ದಾಖಲೆ ಸೃಷ್ಟಿಸಿದ್ದರೆ.

Mon Feb 7 , 2022
ತುಮಕೂರು: ಬ್ಯಾಂಡ್ ಆಯಂಡ್ ಬಾಲ್ ಮೂಲಕ ಟೇಬಲ್ ಟೆನಿಸ್ ನ್ನು ಅತೀ ವೇಗವಾಗಿ ಆಡಿದ ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಸ್‌ಐಟಿ) ಇಂಜಿನಿಯರಿಂಗ್ ವಿದ್ಯಾರ್ಥಿ ಈಶ್ವರ್ ಎನ್ ಅವರು ಹೊಸ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ.   ಈಶ್ವರ್ ಅವರು ಸ್ಪೇನ್‌ನ ಯುಂಕೋಸ್‌ನ ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೊಡ್ರಿಗಸ್ ಅವರ ಹಿಂದಿನ 6 ನಿಮಿಷ 24.69 ಸೆಕೆಂಡುಗಳ ದಾಖಲೆ ಮುರಿದು 6 ನಿಮಿಷ 16.53 ಸೆಕೆಂಡುಗಳಲ್ಲಿ ಅತ್ಯಂತ ವೇಗದ ಆಟವಾಡಿ […]

Advertisement

Wordpress Social Share Plugin powered by Ultimatelysocial