ಅಶ್ಲೀಲ ವಿಡಿಯೋ ನೋಡರೇ ಎಚ್ಚರ..!

ಮುಂಬೈ: ಲಾಕ್‌ಡೌನ್‌ನಲ್ಲಿ ಜನ ಮೊರೆ ಹೋಗಿರೋದು ಮನರಂಜನೆಗೆ. ಇದಕ್ಕಾಗಿ ಕೆಲವರು ಟಿವಿಗಳನ್ನು ನೋಡುತ್ತಿದ್ದರೆ, ಇನ್ನೊಂದಷ್ಟು ಜನ ಮೊಬೈಲ್, ಇಂಟರ್‌ನೆಟ್‌ನಲ್ಲಿ ಮುಳುಗಿ ಹೋಗಿದ್ದಾರೆ. ಮತ್ತೊಂದಷ್ಟು ಜನ ಈ ಇಂಟರ್‌ನೆಟ್‌ನಲ್ಲೂ ಹುಡುಕಾಡ್ತಿರೋದು ಯಾವುದಕ್ಕೆ ಗೊತ್ತಾ..? ಅಶ್ಲೀಲ ವಿಡಿಯೋಗಳಿಗಾಗಿ. ಲಾಕ್‌ಡೌನ್ ವೇಳೆ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆಯಂತೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿರೋ ಸೈಬರ್ ಖದೀಮರು, ಸುಲಿಗೆ ಮಾಡೋಕೆ ನಿಂತಿದ್ದಾರೆ. ಅಶ್ಲೀಲ ವಿಡಿಯೋಗಳ ಮೂಲಕ ಜನರ ಮೊಬೈಲ್ ಹಾಗೂ ಸಿಸ್ಟಮ್‌ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಆಮೆಲೆ ಅವರಿಂದ ಸುಲಿಗೆ ಮಾಡುತ್ತಿರು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು  ಮಹಾರಾಷ್ಟ್ರ ಸೈಬರ್ ಸೆಲ್ ಮಾಹಿತಿ ನೀಡಿದೆ. ಹ್ಯಾಕರ್‌ಗಳು ಇ-ಮೇಲ್ ಮುಖಾಂತರ ದುಡ್ಡು ಕಳಿಸಿ ಎಂದು ಬೇಡಿಕೆ ಇಡುತ್ತಿದ್ದಾರೆ. ಅದರಲ್ಲೂ ಬಿಟ್ ಕಾಯಿನ್‌ಗಳಲ್ಲೇ ಹಣ ಕೊಡಬೇಕು ಅನ್ನೋ ಡಿಮ್ಯಾಂಡ್ ಮಾಡ್ತಿದ್ದಾರೆ. ಇಲ್ಲದಿದ್ರೆ ನಿಮ್ಮ ಬಗ್ಗೆ ಹ್ಯಾಕ್ ಮಾಡಿರುವ ಮಾಹಿತಿಯನ್ನು ಬಹಿರಂಗ ಪಡಿಸುತ್ತೇವೆ ಅಂತ ಜನರನ್ನು ಹೆದರಿಸುತ್ತಿದ್ದಾರೆ ಎಂದು ಸೈಬರ್ ಸೆಲ್ ಹೇಳಿದೆ.  ಮಹಾರಾಷ್ಟ್ರ ಸೈಬರ್‌ನ ಎಸ್‌ಪಿ ಡಾ. ಬಾಲ್‌ಸಿಂಗ್ ರಜಪೂತ್ ಮಾತನಾಡಿ ಇಂಥಹ ಸಂದೇಶಗಳು ಬರುವುದು ಸಾಮಾನ್ಯ. ಈ ಹಿಂದೆ ನೂರಾರು ದೂರುಗಳು ಬಂದಿವೆ. ಇದಕ್ಕೆ ಯಾರು ಭಯಪಡೋದು ಬೇಡ ಎಂದು ಹೇಳಿದ್ದಾರೆ. ಅಲ್ಲದೆ ನಿಮ್ಮ ಇಮೇಲ್ ಐಡಿ ಹಾಗೂ ರಿಕವರಿ ಇಮೇಲ್ ಐಡಿಗಳ ಪಾಸ್‌ವರ್ಡ್ಗಳನ್ನು ಬದಲಾಯಿಸಿ. ೨ ಫ್ಯಾಕ್ಟರ್ ಅಥೆಂಟಿಕೇಷನ್‌ನ ಆ್ಯಕ್ಟಿವೇಟ್ ಮಾಡಿ. ನಿಮ್ಮ ಖಾತೆಗಳನ್ನು ಹಾಗೂ ನಿಮ್ಮನ್ನೂ ಸುರಕ್ಷಿತವಾಗಿಸಿಕೊಳ್ಳಿ ಎಂದು  ಮಹಾರಾಷ್ಟ್ರ ಸೈಬರ್ ಸೆಲ್ ಜನರಿಗೆ ಎಚ್ಚರಿಕೆ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಚಿರಂಜೀವಿ ಚಿತ್ರದಿಂದ ಕಾಜಲ್ ಔಟ್..!

Sat May 2 , 2020
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ ಆಚಾರ್ಯ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಈ ಸಿನಿಮಾದ ಮೇಲೆ ಚಿರಂಜೀವಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಾಯಕಿಯಾಗಿ ಕಾಜಲ್ ಅಗರ್‌ವಾಲ್ ನಟಿಸೋದು ಫಿಕ್ಸ್ ಆಗಿತ್ತು. ಆದರೆ ಕಾಜಲ್ ಈ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನೋ ಸುದ್ದಿ ಹೊರಬಿದ್ದಿದೆ.  ನಟಿ ಕಾಜಲ್ ಅಗರ್‌ವಾಲ್ ಚಿರಂಜೀವಿ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿತ್ತು. ಆದರೆ ಈಗ ಕಾಜಲ್‌ಗೆ ಬೇರೊಂದು ಬಿಗ್ ಬಜೆಟ್ ಸಿನಿಮಾಗೆ ಸಹಿ […]

Advertisement

Wordpress Social Share Plugin powered by Ultimatelysocial