ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 23 ಹೊಸ ಸೈನಿಕ ಶಾಲೆ ಸ್ಥಾಪನೆಗೆ ‘ಗ್ರೀನ್ ಸಿಗ್ನಲ್’

ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಸ್ವಯಂ ಸೇವಾ ಸಂಸ್ಥೆಗಳು, ಖಾಸಗಿ ಶಾಲೆಗಳು ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನೂರು ಹೊಸ ಸೈನಿಕ ಶಾಲೆಗಳ ಆರಂಭಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ.

ಇದೀಗ ಇದಕ್ಕೆ ಪೂರಕವಾಗಿ ಸಹಭಾಗಿತ್ವ ಮಾದರಿಯಲ್ಲಿ 23 ಹೊಸ ಸೈನಿಕ ಶಾಲೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಆರಂಭಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದು, ರಕ್ಷಣಾ ಸಚಿವಾಲಯ ಶನಿವಾರದಂದು ಈ ಕುರಿತು ಮಾಹಿತಿ ನೀಡಿದೆ.

 

ಸೈನಿಕ ಶಾಲೆಗಳ ಸಂಘದ ವತಿಯಿಂದ ಸಹಭಾಗಿತ್ವ ಮಾದರಿಯಲ್ಲಿ ಈಗಾಗಲೇ 19 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಮತ್ತೆ 23 ಹೊಸ ಸೈನಿಕ ಶಾಲೆಗಳ ಆರಂಭಕ್ಕೆ ಅನುಮೋದನೆ ನೀಡಿರುವ ಕಾರಣ ಇವುಗಳ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಹಳೆ ಮಾದರಿಯಂತೆ ಪ್ರಸ್ತುತ 33 ಸೈನಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ

Please follow and like us:

tmadmin

Leave a Reply

Your email address will not be published. Required fields are marked *

Next Post

ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ 'ಯಶೋಭೂಮಿ' ಉದ್ಘಾಟನೆಗೆ ಕ್ಷಣಗಣನೆ: ಏನಿದರ ವಿಶೇಷತೆ

Sun Sep 17 , 2023
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ನವದೆಹಲಿಯಲ್ಲಿ ನಿರ್ಮಿಸಲಾಗಿರುವ ವಿಶ್ವ ಅತಿ ದೊಡ್ಡ ಇಂಟರ್‌ನ್ಯಾಷನಲ್‌ ಕನ್ವೆನ್ಶನ್‌ ಆಯಂಡ್‌ ಎಕ್ಸ್‌ಪೋ ಸೆಂಟರ್‌ ‘ಯಶೋಭೂಮಿ’ ಉದ್ಘಾಟಿಸಲಿದ್ದಾರೆ. ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ದ್ವಾರಕಾದಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ ‘ಯಶೋಭೂಮಿ’ಯ (ಐಐಸಿಸಿ) ಮೊದಲ ಭಾಗ ಲೋಕಾರ್ಪಣೆ ಮಾಡಲಿದ್ದಾರೆ. ಈ ಬೃಹತ್ ಸಮಾವೇಶ ಕೇಂದ್ರ ಇತ್ತೀಚೆಗೆ ಜಿ20 ಸಮಾವೇಶ ನಡೆದ ಭಾರತ್​ ಮಂಟಪಕ್ಕಿಂತಲೂ ವಿಸ್ತಾರವಾಗಿದೆ. […]

Advertisement

Wordpress Social Share Plugin powered by Ultimatelysocial