ಆಂಧ್ರದಲ್ಲಿ ವಿಷ ಅನಿಲ ಸೋರಿಕೆ, 10ಕ್ಕೇರಿದ ಸಾವಿನ ಸಂಖ್ಯೆ..!

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬಹುರಾಷ್ಟ್ರೀಯ ಕಂಪೆನಿಯ ರಾಸಾಯನಿಕ ಸ್ಥಾವರದಿಂದ ವಿಷಕಾರಿ ಅನಿಲ ಸೋರಿಕೆಯಾಗಿರುವ ಪರಿಣಾಮ ಮಕ್ಕಳು ಸಹಿತ 10 ಮಂದಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.
ಸುಮಾರು 200 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಯಂಬುಲೆನ್ಸ್, ಅಗ್ನಿಶಾಮಕ ದಳದ ಯಂತ್ರಗಳು ಹಾಗೂ ಪೊಲೀಸರು ರಾಸಾಯನಿಕ ಸ್ಥಾವರದತ್ತ ಧಾವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಆರ್‌ಆರ್ ವೆಂಕಟಪುರAನಲ್ಲಿರುವ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಪ್ರೈ ಲಿ.ನ ಬಳಿ ಮನೆಗಳಿದ್ದು, ಇಲ್ಲಿನ ನಿವಾಸಿಗಳ ಕಣ್ಣುಗಳಲ್ಲಿ ಉರಿ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಸ್ಥಳೀಯರನ್ನು ತಕ್ಷಣವೇ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೋಪಾಲಪಟ್ಟಣಂನಲ್ಲಿನ ಎಲ್‌ಜಿ ಪಾಲಿಮರ್ಸ್ನಲ್ಲಿ ಅನಿಲ ಸೋರಿಕೆಯನ್ನು ಪತ್ತೆ ಹಚ್ಚಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮುನ್ನಚ್ಚರಿಕಾ ಕ್ರಮವಾಗಿ ಅನಿಲಸ್ಥಾವರದ ಸುತ್ತಮುತ್ತಲಿನ ನಿವಾಸಿಗಳಿಗೆ ಮನೆಯಿಂದ ಹೊರ ಬರದಂತೆ ಸೂಚಿಸಲಾಗಿದೆ ಎಂದು ಗ್ರೇಟರ್ ವಿಶಾಖಪಟ್ಟಣ ಮುನ್ಸಿಪಲ್ ಕಾರ್ಪೊರೇಶನ್ ಟ್ವೀಟ್ ಮಾಡಿದೆ.
ಈ ಕುರಿತು ಇಂದು ಬೆಳಗ್ಗೆ ಗೃಹ ಸಚಿವಾಲಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡ ಪ್ರಧಾನಿ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಂಡರು. ಅಲ್ಲಿ ಸದ್ಯ ಪರಿಸ್ಥಿತಿಯನ್ನು ನಿಗಾವಹಿಸಲಾಗುತ್ತಿದೆ. ಗೃಹ ಸಚಿವ ಅಮಿತಾ ಶಾ ಕೂಡ ಘಟನೆ ತೀರಾ ದುರದೃಷ್ಟಕರ ಎಂದಿದ್ದಾರೆ. ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ ಅಲ್ಲಿನ ಪರಿಸ್ಥಿತಿ ಬಗ್ಗೆ ವಿಚಾರಿಸಿದರು. ಎಲ್ಲಾ ರೀತಿಯ ನೆರವು ಮತ್ತು ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು. ವಿಶಾಖಪಟ್ಟಣಂನ ಫ್ಯಾಕ್ಟರಿಯ ಸುತ್ತಮುತ್ತ ನಿವಾಸಿಗಳ ಸುರಕ್ಷತೆಗೆ ನಾನು ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಮೋದಿ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಭಿಮಾನಿಗಳಿಗೆ ಬಿಗ್ ಆಫರ್ ಪರಿಣಿತಿ ಚೋಪ್ರಾ

Thu May 7 , 2020
ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಬಡವರಿಗೆ ಸಹಾಯ ಮಾಡಿದವರಿಗೆ ತಮ್ಮ ಜೊತೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯೋ ಚಾನ್ಸ್ ಸಿಗುತ್ತೆ ಎಂದಿದ್ದಾರೆ. ಹೌದು. ಇಡೀ ದೇಶವೇ ಕೊರೊನಾ ವೈರಸ್ ಹಾವಳಿಗೆ ತತ್ತರಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಟಿ ಪರಿಣಿತಿ ಚೋಪ್ರಾ ಅಬಿಮಾನಿಗಳಿಗೆ ಒಂದು ಸ್ಪೆಷಲ್ ಅವಕಾಶ ನೀಡಿದ್ದಾರೆ. ಯಾರು ಬಡವರಿಗೆ, ದಿನಗೂಲಿ ನೌಕರರಿಗೆ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡತ್ತಾರೋ ಅವರೊಂದಿಗೆ ಪರಿಣಿತಿ ಚೋಪ್ರಾ […]

Advertisement

Wordpress Social Share Plugin powered by Ultimatelysocial