ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಆನ್ ಲೈನ್ ಶಿಕ್ಷಣ ಇದೀಗ ಒಂದು ಗೀಳಾಗಿದೆ. ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ವಿರೋಧವಿದೆ. ಹೀಗಿದ್ದೂ ಜೂನ್ 8ರ ಸೋಮವಾರ ಆನ್ ಲೈನ್ ಶಿಕ್ಷಣದ ಬಗ್ಗೆ ಸಭೆ ನಡೆಸಿ ಚರ್ಚೆ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಮಹತ್ವದ ನಿರ್ಧಾರ ಜೂನ್ 8ರಂದು ಆನ್ ಲೈನ್ ಶಿಕ್ಷಣದ ಬಗ್ಗೆ ಹೊರ ಬರಲಿದೆ. ರಾಜ್ಯದಲ್ಲಿ ಶಾಲೆಗಳು ಯಾವಾಗ ತೆರೆಯಲಿದೆ ಎಂಬುದೇ ಗೊಂದಲದ ಗೂಡಾಗಿದೆ. ಈ ನಡುವೆ ಆನ್ ಲೈನ್ ಮೂಲಕ ಅನೇಕ ಶಾಲಾ-ಕಾಲೇಜುಗಳು ಮಕ್ಕಳಿಗೆ ತರಗತಿ ಆರಂಭಿಸಿದ್ದವು. ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡ್ತಾ ಇದ್ದವು. ಆದ್ರೇ ಇದನ್ನೇ ಗೀಳಾಗಿಸಿಕೊಂಡು ತರಗತಿ ಆರಂಭಿಸಬಾರದೇಕೆ ಎಂಬ ನಿಲುವನ್ನು ಅನೇಕ ಶಾಲೆಗಳು ತಾಳಿದ್ದವು. ಆದ್ರೇ ಆನ್ ಲೈನ್ ಶಿಕ್ಷಣದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವ ಬಗ್ಗೆ ಜೂನ್ 8ರಂದು ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಆನ್ ಲೈನ್ ಶಿಕ್ಷಣ ಒಂದು ಗೀಳಾಗಿದೆ

Please follow and like us: