ಆಪ್ತಮಿತ್ರ ಆ್ಯಪ್‌ಗೆ ಚಾಲನೆ

ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಕೇಂದರ ಸರ್ಕಾರ ಆರೋಗ್ಯ ಸೇತು ಆ್ಯಪ್ ಬಿಡುಗಡೆ ಮಾಡಿತ್ತು. ಅದೇ ರೀತಿ ಇದೀಗ ರಾಜ್ಯ ಸರ್ಕಾರ ಆಪ್ತಮಿತ್ರ ಅನ್ನೋ ಆ್ಯಪ್ ಬಿಡುಗಡೆ ಮಾಡಿದೆ. ಇಂದು ಆಪ್ತಮಿತ್ರ ಆ್ಯಪ್‌ಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕೊರೊನಾ ಸೋಂಕಿನ ಲಕ್ಷಣವುಳ್ಳವರು, ಈ ಆಪ್ತಮಿತ್ರ ಸಹಾಯವಾಣಿ ೧೪೪೧೦ ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ. ರಾಜ್ಯದ ಎಲ್ಲಾ ನಿವಾಸಿಗಳಿಗೆ, ವಿಶೇಷವಾಗಿ ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಅನಾರೋಗ್ಯ, ತೀವ್ರ ಉಸಿರಾಟದ ಸೋಂಕು ಅಥವಾ ಕೊರೊನಾ ಸೋಂಕಿಗೆ ಒಳಗಾಗುವಂಥ ಹೆಚ್ಚಿನ ಅಪಾಯ ಹೊಂದಿರುವವರನ್ನು ಗುರುತಿಸುವುದು ಆ್ಯಪ್‌ನ ಮೂಲ ಉದ್ದೇಶ ಹೊಂದಿದೆ. ಕಡಿಮೆ ಅಪಾಯವಿರುವ ಅಂದರೆ ಕೊರೊನಾ ತರಹದ ಕೆಲವು ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಅವರಿಗೆ ಕೌಂಟರ್ ನಲ್ಲಿ ದೊರೆಯುವ ಔಷಧಿಗಳನ್ನು ಟೆಲಿಮೆಡಿಸಿನ್ ಬೆಂಬಲದೊಂದಿಗೆ ಒದಗಿಸುವುದು ಮತ್ತು ಸ್ವಯಂ-ದಿಗ್ಬಂಧನಕ್ಕೆ ಒಳಪಡುವ ಬಗ್ಗೆ ಸಮಾಲೋಚಿಸಿ, ಸೂಚಿಸುವುದು. ಕಡಿಮೆ ಅಪಾಯದ ಎಲ್ಲಾ ಪ್ರಕರಣಗಳು ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಅವರನ್ನು ಹಿಂಬಾಲಿಸುವುದು .ಮಧ್ಯಮದಿಂದ ಹೆಚ್ಚಿನ ಹಂತದವರೆಗೆ ಕೊರೊನಾ ಅಪಾಯವನ್ನು ನಿರ್ಧರಿಸುವುದು ಹಾಗೂ ಶಂಕಿತರರನ್ನು ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಜ್ವರದ ಕ್ಲಿನಿಕ್ ಅಥವಾ ಕೊರೊನಾ ಸ್ಕ್ರೀನಿಂಗ್ ಕೇಂದ್ರಗಳಿಗೆ ಕಳುಹಿಸುವುದು.

Please follow and like us:

Leave a Reply

Your email address will not be published. Required fields are marked *

Next Post

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ

Wed Apr 22 , 2020
ಪಾದರಾಯಪುರ ಗಲಭೆ ಪ್ರಕರಣದ ಆರೋಪಿಗಳನ್ನು ಈಗಾಗಲೇ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಸಮಾಜದ ಸ್ವಾಸ್ಥ್ಯ ಕದಡುವ ಗೂಂಡಾಗಳ ವರ್ತನೆಗೆ ಕಡಿವಾಣ ಹಾಕಲು ಹೊಸ ಕಾಯ್ದೆ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಜನರನ್ನು ರಕ್ಷಣೆ ಮಾಡಲು ಹಗಲು ರಾತ್ರಿ ಎನ್ನದೆ ಪೊಲೀಸರು,ವೈದ್ಯರು ಕರ್ತವ್ಯದಲ್ಲಿ ತೊಡಗಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. […]

Advertisement

Wordpress Social Share Plugin powered by Ultimatelysocial