ಜಿಲ್ಲೆಯಲ್ಲಿ ಸೋಂಕು ಅಂಟಿಸಿಕೊಂಡ 45 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರತಿದಿನ ಕೊರೋನಾ ಪಾಸಿಟಿವ್ ಸುದ್ದಿ ಕೇಳಿ ಉಡುಪಿ ಜಿಲ್ಲೆಯ ಜನತೆಗೆ ಬೇಸೆತ್ತಿ ಹೋಗಿದ್ದರೆ.ಆದರೆ ಈಗ ಸ್ವಲ್ಪ ಸಮಾದನದ ಸುದ್ದಿ ಕೇಳಿ ಬಂದಿದೆ. 34 ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇವರಲ್ಲಿ 18 ಮಕ್ಕಳು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಡುಪಿಯ ಡಾ. ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಯಿಂದ 18 ಮಕ್ಕಳೂ ಸೇರಿ ಒಟ್ಟು 45 ಜನರು ಶನಿವಾರ ಬಿಡುಗಡೆಯಾಗಿದ್ದಾರೆ. ಜಿಲ್ಲಾಧಿಕಾರಿ ಜಿ. ಜಗದೀಶ ಚಾಕಲೇಟ್ ಮತ್ತು ಉಡುಗೊರೆಗಳನ್ನು ಕೊಟ್ಟು ಬೀಳ್ಕೊಟ್ಟರು.