ಬೆಂಗಳೂರು: ಭಾರತದ ಮೂರನೇ ಅತಿದೊಡ್ಡ ದ್ವಿಚಕ್ರ ತಯಾರಕ ಕಂಪನಿ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಉದ್ಯೋಗಿಗಳಿಗೆ ತಾತ್ಕಾಲಿಕ ಸಂಬಳ ಕಡಿತವನ್ನು ಘೋಷಿಸಿದೆ. ಕೊರನಾವೈರಸ್ ದೆಸೆಯಿಂದ ಲಾಕ್ಡೌನ್ ಆಗಿ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ಸಂಸ್ಥೆಗೆ ತಕ್ಕಮಟ್ಟಿನ ನಷ್ಟ ಉಂಟಾಗಿದೆ. ವೇಣು ಶ್ರೀನಿವಾಸನ್ ನೇತೃತ್ವದ ಕಂಪನಿಯು ತನ್ನ ಎಕ್ಸಿಕ್ಯೂಟಿವ್ ಸ್ತರದ ಉದ್ಯೋಗಿಗಳ ಸಂಬಳವನ್ನು ಮಾತ್ರ ಕಡಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಅಕ್ಟೋಬರ್ ತಿಂಗಳ ತನಕ ಸಂಬಳ ಕಡಿತ ಜಾರಿಯಲ್ಲಿರುತ್ತದೆ. ಮೇ ತಿಂಗಳಿನಿAದ ಅಕ್ಟೋಬರ್ ೨೦೨೦ರ ತನಕ ಇದು ಜಾರಿಯಲ್ಲಿರಲಿದೆ. ವರ್ಕ್ ಮನ್ , ಡ್ರೈವರ್, ಮೆಕ್ಯಾನಿಕ್ ಸೇರಿದಂತೆ ಎಂಟ್ರಿ ಲೆವಲ್ ಉದ್ಯೋಗಿಗಳ ಸಂಬಳ ಕಡಿತಗೊಳಿಸದಿರಲು ಸಂಸ್ಥೆ ನಿರ್ಧರಿಸಿದೆ ಎಂದು ಟಿವಿಎಸ್ ಮೋಟರ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಜ್ಯೂನಿಯರ್ ಎಕ್ಸಿಕ್ಯೂಟಿವ್ ಶೇ ೫ರಷ್ಟು ಹಿರಿಯ ಕಾರ್ಯಕಾರಿ ಸಿಬ್ಬಂದಿಗೆ ಶೇ ೧೫ ರಿಂದ ೨೦ರಷ್ಟು ಸಂಬಳ ಕಡಿತಗೊಳ್ಳಲಿದೆ. ಮೇ ೬ರಿಂದಲೇ ಟಿವಿಎಸ್ ವಾಹನ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಿವೆ.
ಉದ್ಯೋಗಿಗಳ ಸಂಬಳ ಕಡಿತಗೊಳಿಸಿದ ಟಿವಿಎಸ್

Please follow and like us: