ಎಲ್ಲರಿಗೂ ಉತ್ತೇಜನ ನೀಡುತ್ತಿರುವ ಬಾಲಕಿ

ವಾಷಿಂಗ್ಟನ್: ಕೊರೋನಾ ಲಾಕ್ ಡೌನ್ ಕಾರಣದಿಂದ ಅನೇಕ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಬಹಳ ನೋವು ಅನುಭವಿಸುತ್ತಿರುತ್ತಾರೆ. ಹೊರಗೆ ಓಡಾಡಲು ಸಾಧ್ಯವಾಗುವುದಿಲ್ಲ, ತಮ್ಮ ಪ್ರೀತಿಪಾತ್ರರನ್ನು ನೋಡಲು ಆಗುವುದಿಲ್ಲ ಎಂದು ನೊಂದುಕೊಳ್ಳುತ್ತಿರುವರಿಗೆ ಖುಷಿಪಡಿಸಲು ಪಝಲ್, ಕಲರ್ ಪುಸ್ತಕ, ಕಲರ್ ಪೆನ್ಸಿಲ್ ಗಳನ್ನು ಪ್ಯಾಕ್ ಮಾಡಿ ಕಳುಹಿಸುತ್ತಿದ್ದಾರೆ ಹಿತಾ ಗುಪ್ತಾ. ಭಾರತೀಯ ಮೂಲದ ೧೫ ವರ್ಷದ ಹಿತಾ ಗುಪ್ತ ಅಮೆರಿಕದಲ್ಲಿ ನರ್ಸಿಂಗ್ ಹೋಂಗಳಲ್ಲಿರುವ ನೂರಾರು ಹಿರಿಯರು ಮತ್ತು ಮಕ್ಕಳಿಗೆ ಗಿಫ್ಟ್ ಪ್ಯಾಕ್ ಮತ್ತು ಅವರಲ್ಲಿ ಉತ್ತೇಜನ ತುಂಬಿಸುವ ನೋಟ್ ಗಳನ್ನು ಬರೆದು ಕಳುಹಿಸುತ್ತಿದ್ದಾಳೆ. ಬ್ರೈಟನಿಂಗ್ ಎ ಡೆ ಎಂಬ ಎನ್ ಜಿಒ ಮೂಲಕ ಕೋವಿಡ್ ೧೯ ನಿರ್ಬಂಧ ಹಿನ್ನೆಲೆಯಲ್ಲಿ ನರ್ಸಿಂಗ್ ಹೋಂ, ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ಪ್ರೀತಿ, ಆಶಾಭಾವನೆ, ಸಂತೋಷಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಕಲಿ ಬೀಜ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಕೇಸ್ ..!

Fri Apr 24 , 2020
ನಕಲಿ ಬೀಜಗಳನ್ನು ಮಾರಾಟ ಮಾಡುವುದು ರೈತರ ಬದುಕನ್ನು ಸಾಯಿಸುವಂತಹ ಅಪರಾಧವಾಗಿದೆ. ಇಂತಹ ನಕಲಿ ಬೀಜ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಾವೇರಿ ಜಿಲ್ಲಾ ಕೃಷಿ ಅಧಿಕಾರಿಗಳ ತಂಡ ಸುಮಾರು 6ಕೋಟಿ ರೂಪಾಯಿ.ಮೌಲ್ಯದ ಅಕ್ರಮ ನಕಲಿ ಬಿಡಿ ಬೀಜಗಳ ದಾಸ್ತಾನು ವಶಪಡಿಸಿಕೊಂಡಿದೆ. ಕಳಪೆ ನಕಲಿ ಬೀಜ ಮಾರಾಟ ಮಾಡುವವರು ಬದುಕಿದ್ದಂತಹ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ‌.ಇಂತಹ ಕೃತ್ಯವನ್ನು ಯಾರು ಸಹಿಸುವುದಿಲ್ಲ. […]

Advertisement

Wordpress Social Share Plugin powered by Ultimatelysocial