ಎಲ್ ಪಿ ಜಿ ಗ್ರಾಹಕರಿಗೆ ಸಿಹಿಸುದ್ದಿ

ಭಾರತ್ ಪೆಟ್ರೋಲಿಯಂ ಕರ‍್ಪೊರೇಶನ್ ಲಿಮಿಟೆಡ್, ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಬಿಪಿಸಿಎಲ್ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಮೂಲಕ ಎಲ್ಪಿಜಿ ಬುಕ್ ಮಾಡಲು ಸಾಧ್ಯವಾಗುತ್ತದೆ. ದೇಶಾದ್ಯಂತ ಇರುವ ಗ್ರಾಹಕರು ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಎಲ್ಲಿಂದಲಾದರೂ ಬುಕ್ ಮಾಡಬಹುದು ಎಂದು ಬಿಪಿಸಿಎಲ್ ತಿಳಿಸಿದೆ. ಕಂಪನಿಯ ಪ್ರಕಾರ, ವಾಟ್ಸಾಪ್ ನಲ್ಲಿ ಬಿಪಿಸಿಎಲ್ ಸ್ಮರ‍್ಟ್ಲೈನ್ ಸಂಖ್ಯೆ ೧೮೦೦೨೨೪೩೪೪ ಇದರ ಮೂಲಕ ಬುಕ್ ಮಾಡಬಹುದೆಂದು ಬಿಪಿಸಿಎಲ್ ಅಧಿಕಾರಿ ಅರುಣ್ ಸಿಂಗ್ ಹೇಳಿದ್ದಾರೆ. ಎಲ್ಪಿಜಿ ಬುಕಿಂಗ್ ಮಾಡುವುದು ಇದರಿಂದ ಗ್ರಾಹಕರಿಗೆ ಸುಲಭವಾಗಲಿದೆ. ವಾಟ್ಸಾಪ್ ಈಗ ಜನರಲ್ಲಿ ಬಹಳ ಸಾಮಾನ್ಯವಾಗಿದೆ. ಯುವಕರು ಅಥವಾ ವಯಸ್ಸಾದವರು ಎಲ್ಲರೂ ಇದನ್ನು ಬಳಸುತ್ತಾರೆ ಮತ್ತು ಈ ಹೊಸ ಪ್ರಾರಂಭದೊಂದಿಗೆ ನಾವು ನಮ್ಮ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಬಹುದು ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವೆಡ್ಡಿಂಗ್‌ ಆನಿವರ್ಸರಿ  ಬೆಳ್ಳಿ ಹಬ್ಬಕ್ಕೆ ಜನ ಜಾತ್ರೆ..!

Wed May 27 , 2020
ಉತ್ತರ ಪ್ರದೇಶದ : ಉತ್ತರ ಪ್ರದೇಶದ ಅಲಿಗಢದಲ್ಲಿ ಕೊರೊನಾ ವೈರಸ್ ಕಂಟೈನ್‌ಮೆಂಟ್‌ ಝೋನ್ ಒಂದರಲ್ಲಿ ಸಂಭ್ರಮವೋ ಸಂಭ್ರಮ. ಸಾಮಾನ್ಯವಾಗಿ ಈ ವಲಯದಲ್ಲಿ ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಆದ್ರೆ, ವ್ಯಕ್ತಿಯೊಬ್ಬ ತನ್ನ 25ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಇದೀಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಕಾನೂನು ಪಾಲಿಸದೆ, ಸಾಮಾಜಿಕ ಅಂತರ ಪಾಲಿಸದೆ 15ಕ್ಕೂ ಹೆಚ್ಚು ಜನರನ್ನು ಸೇರಿಸಿ ಬೇಜವಾಬ್ದಾರಿತನ ಮೆರೆದಿದ್ದಾನೆ. ವಿವಾಹ ವಾರ್ಷಿಕೋತ್ಸವದ ಬೆಳ್ಳಿ ಹಬ್ಬ ಆಚರಿಸಿದ […]

Advertisement

Wordpress Social Share Plugin powered by Ultimatelysocial