ಏಕ್ ಲವ್ ಯಾ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಏಂಟ್ರಿ ಕೋಡ್ತಿದಾರೆ ರಕ್ಷಿತಾ ಅವರ ತಮ್ಮ ರಾಣಾನ. ಈ ಚಿತ್ರದ ಟೀಸರ್ ಪ್ರೇಮಿಗಳ ದಿನದಂದು ರಿಲೀಸ್ ಆಗಿ, ಮೆಚ್ಚುಗೆಗೆ ಪಾತ್ರವಾಗಿತ್ತು. ಏಕ್ ಲವ್ ಯಾ ಚಿತ್ರದ ರೇಕಾರ್ಡಿಂಗ್ ಭರದಿಂದ ಸಾಗಿದ್ದು ಆಡಿಯೋ ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಚಿಂತನೆ ನಡೆಸ್ತಿದಾರೆ ನಿದೇಶಕರು. ಈ ಚಿತ್ರಕ್ಕೆ ವಿಜಯ್ ಪ್ರಕಾಶ್, ಅರ್ಮಾನ್ ಮಲಿಕ್, ಅರಿಜಿತ್ ಸಿಂಗ್, ಕೈಲಾಶ್ ಖೇರ್, ಶ್ರೇಯಾ ಘೋಶಾಲ್ನಂತಹ ದಿಗ್ಗಜರ ಜೊತೆ ಪ್ರೇಮ್ ಕೂಡ ಹಾಡಲಿದ್ದಾರೆ. ರಾಣಾ ಪಾಲಿಗೆ ಚೊಚ್ಚಲ ಚಿತ್ರವಾಗಿದ್ದು, ರಕ್ಷಿತಾ ಫಿಲ್ಮ್ ಫ್ಯಾಕ್ಟರಿಯ ಬ್ಯಾನರಿ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರದಲ್ಲಿ ರಚಿತಾ ರಾಮ್, ರಿಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಎರಡು ಹಾಡುಗಳ ಶೂಟಿಂಗ್ ಬಾಕಿಯಿದ್ದು, ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ.
ಏಕ್ ಲವ್ ಯಾ ಆಡಿಯೋ ರಿಲೀಸ್..!

Please follow and like us: