ಕನ್ನಡದಲ್ಲಿ ಟ್ವೀಟ್ ಮಾಡಿದ ಕೇರಳ ಸಿಎಂ

ಕೇರಳ: ಇಂದು ಜಗತ್ತಿಗೆ ಅನುಭವ ಮಂಟಪ ಮೂಲಕ ಪ್ರಜಾಪ್ರಭುತ್ವದ ಪರಿಚಯ ಮಾಡಿಕೊಟ್ಟ ಜಗಜ್ಯೋತಿ ಬಸವಣ್ಣನವರ ಜಯಂತಿ ಸಂಭ್ರಮ. ಈಗಾಗಲೇ ಬಸವಣ್ಣನವರ ಜಯಂತಿಗೆ ಪ್ರಧಾನಿ ಮೋದಿ ಸೇರಿದಂತೆ ನಾಡಿನ ಹಲವು ಗಣ್ಯರು ಜನತೆಗೆ ಶುಭ ಕೋರಿ ಬಸವಣ್ಣನವರನ್ನು ಸ್ಮರಿಸಿದ್ದಾರೆ. ಇದೀಗ ಪಕ್ಕದ ರಾಜ್ಯ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಸವಣ್ಣನವರನ್ನು ವಚನದ ಮೂಲಕ ಸ್ಮರಿಸಿದ್ದಾರೆ.
ವಿಶೇಷ ಅಂದ್ರೆ ಕನ್ನಡದಲ್ಲಿ ಟ್ವೀಟ್ ಮಾಡೋ ಮೂಲಕ ಕ್ರಾಂತಿಯೋಗಿಗೆ ನೆರೆ ರಾಜ್ಯದ ಮುಖ್ಯಮಂತ್ರಿಗಳು ನಮನ ಸಲ್ಲಿಸಿದ್ದಾರೆ. ಅಲ್ಲದೇ, ಬಸವಣ್ಣನವರ ಪ್ರಖ್ಯಾತ ವಚನದ ಸಾಲುಗಳನ್ನೂ ಟ್ವೀಟ್‌ನಲ್ಲಿ ಪಿಣರಾಯಿ ಉಲ್ಲೇಖಿಸಿದ್ದಾರೆ. ಇದಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡುವುದರ ಮೂಲಕ ಬಸವಣ್ಣನವರನ್ನು ಸ್ಮರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬಸವಣ್ಣ ಅವರ ತತ್ವ-ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು

Sun Apr 26 , 2020
ಬೆಂಗಳೂರು: ಮಾನವತಾವಾದಿ, ಜಗಜ್ಯೋತಿ, ವಿಶ್ವಗುರು ಬಸವಣ್ಣ ಅವರ ತತ್ವ-ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಏಕತೆಯನ್ನು ಸಾಧಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಕರೆ ನೀಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸವಣ್ಣ ಅವರು 900 ವರ್ಷಗಳ ಹಿಂದೆ ವರ್ಗ, ವರ್ಣ, ಜಾತಿ, ಧರ್ಮ, ಲಿಂಗಭೇದಗಳಿಂದ ಮುಕ್ತರಾಗಿ ಮಾನವ ಏಕತೆಯನ್ನು ಸಾಧಿಸಬೇಕು ಎನ್ನುವ ಸಂದೇಶವನ್ನು ಸಾರಿದ್ದಾರೆ. ಅದಕ್ಕಾಗಿ ಅಪರಿಮಿತವಾಗಿ ಹೋರಾಟವನ್ನ ಮಾಡಿದ್ದಾರೆ. ಇಡೀ ಪ್ರಪಂಚದ ಯಾವುದೇ ದೇಶದಲ್ಲಿ ದುಡಿಯುವ ವರ್ಗಕ್ಕಾಗಿ, ಕಾಯಕ ಜೀವಿಗಳಿಗಾಗಿ, ನೊಂದವರ […]

Advertisement

Wordpress Social Share Plugin powered by Ultimatelysocial