ಕಮೀಷನರ್ ಕಾರ್ಯ ವೈಖರಿಗೆ ಡಿಜಿ ಅಸಮಾಧಾನ

ಬೆಂಗಳೂರು:  ಕಮೀಷನರ್ ಕಾರ್ಯ ವೈಖರಿ ವಿರುದ್ದ ಡಿಜಿ ಪ್ರವೀಣ್ ಸೂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.‌ನಗರದಲ್ಲಿ ವಾಹನಗಳ ಸಂಚಾರ ದಿನೇ ದಿನೇ ಜಾಸ್ತಿಯಾಗ್ತಿದೆ.ಲಾಕ್ ಡೌನ್ ಏರಿಯಾಗಳಲ್ಲಿ ಟ್ರಾಫಿಕ್ ಪೊಲೀಸರು ಏನ್‌ ಕೆಲಸ ಮಾಡ್ತಿದ್ದಾರೆ..ಲಾಕ್ ಡೌನ್ ಏರಿಯಾಗಳಲ್ಲಿ ಇರೋ ಬ್ಯಾರಿಗೇಡ್ ಸಡನ್ ಆಗಿ ತೆಗೆದಿದ್ದಾರೆ.ಹಲವಾರು ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಪಾಸ್ ಗಳನ್ನ ಚೆಕ್ ಮಾಡ್ತಿಲ್ಲ.ಟ್ರಾಪಿಕ್ ಅಧಿಕಾರಿಗಳು ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತೆ ಆಗ್ತಿಲ್ಲ..ಬೇರೆ ಜಿಲ್ಲೆಯ ಪಾಸ್ ಒಂದಿರುವ ವಾಹನಗಳು ಸಿಟಿಯಲ್ಲಿ ಓಡಾಡೋ ಹಾಗಿಲ್ಲ .ಜಿಲ್ಲಾ ಎಸ್ ಪಿ, ಜಿಲ್ಲಾಧಿಕಾರಿ ಕೊಟ್ಟಿರೋ ಪಾಸ್ ಇರೋ ವಾಹನಗಳು ನಗರದಲ್ಲಿ ಓಡಾಡೋ ಹಾಗಿಲ್ಲ.ಅಂತಹ ವಾಹನಗಳನ್ನು ಕೂಡಲೇ ಸೀಜ್ ಮಾಡುವಂತೆ ಡಿಜಿ ಆದೇಶಿಸಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಗೆ ಪತ್ರ ಬರೆದಿದ್ದಾರೆ..ಸೂಕ್ತ ಕಾರಣ ಇಲ್ಲದೆ ಪಾಸ್ ಗಳನ್ನು ವಿತರಣೆ ಮಾಡೋ ಹಾಗಿಲ್ಲ.ತುರ್ತು ಕಾರ್ಯಗಳಿಗೆ ಮಾತ್ರ ಪೊಲೀಸ್ ಠಾಣೆಯಲ್ಲಿ ಪಾಸ್ ನೀಡಬೇಕು.ಲಾಕ್ ಡೌನ್ ಏರಿಯಾಗಳಲ್ಲಿ ಬ್ಯಾರಿಗೇಡ್ ಗಳನ್ನು ಹೆಚ್ಚು ಮಾಡಬೇಕು.ಮುಂಜಾನೆ ಹಾಗೂ ಸಂಜೆ ಅತಿ ಹೆಚ್ಚಾಗಿ ಓಡಾಡುತ್ತಿರೋ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಬೇಕು ಎಂದು ಡಿಜಿಪಿ ಪ್ರವೀಣ್ ಸೂದ್ ಸೂಚಿಸಿದ್ದಾರೆ..ಊಟ ವಿತರಿಸೋ ಎನ್ ಜಿ ಒ ಗಳಿಗೂ ಪಾಸ್ ಕಡ್ಡಾಯ ಇರಬೇಕು..ವೈದ್ಯರು, ಸರ್ಕಾರಿ ಅಧಿಕಾರಿಗಳು, ತುರ್ತು ಅಗತ್ಯ ಸೇವೆಗೆ ಮಾತ್ರ ಪಾಸ್ ಇಲ್ಲದೆ ಓಡಾಟ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ಇಷ್ಟೆಲ್ಲಾ  ಸೂಚನೆ ಕೊಟ್ಟು ಮಹಾ ನಿರ್ದದೇಶಕ   ಪ್ರವೀಣ್ ಸೂದ್ ರಿಂದ ಪತ್ರ ಬರೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮುಖ್ಯಮಂತ್ರಿಗಳು ರವರಿಂದ "ಹೋಮ್ ಡಿಲಿವರಿ ಸಹಾಯವಾಣಿ"ಗೆ ಚಾಲನೆ:

Tue Apr 21 , 2020
ಕೋವಿಡ್-19 ಹಿನ್ನೆಲೆ ನಾಗರೀಕರಿಗೆ ಅಗತ್ಯ ಸೇವೆಗಳನ್ನು ಮನೆಗಳಿಗೆ ತಲುಪಿಸುವ ಉದ್ದೇಶದಿಂದ ನಗರಾದ್ಯಂತ “ಹೋಮ್ ಡಿಲಿವೆರಿ ಸಹಾಯವಾಣಿ”ಗೆ ಸನ್ಮಾನ್ಯ ಮುಖ್ಯಮಂತ್ರಿಗಳು, ಪೂಜ್ಯ ಮಹಾಪೌರರು ಮುಖ್ಯಮಂತ್ರಿ ರವರ ಗೃಹ ಕಛೇರಿ ಕೃಷ್ಣದಲ್ಲಿ ಚಾಲನೆ ನೀಡಿದರು. ಈ ವೇಳೆ ಉಪಮುಖ್ಯಮಂತ್ರಿಗಳು ಡಾ. ಸಿ.ಎನ್.ಅಶ್ವತ್ಥ ನಾರಾಯಣ್, ಸಂಸದರಾದ ಶ್ರೀ ಪಿ.ಸಿ.ಮೋಹನ್, ಶ್ರೀ ತೇಜಸ್ವಿ ಸೂರ್ಯ, ಕಂದಾಯ ಸಚಿವರು ಶ್ರೀ ಆರ್.ಅಶೋಕ್,  ರಾಜ್ಯ ಸಭಾ ಸದಸ್ಯರು ರಾಜೀವ್ ಚಂದ್ರಶೇಖರ್, ಉಪಮಹಾಪೌರರು ಶ್ರೀ ರಾಮಮೋಹನ ರಾಜು, ಆಡಳಿತ ಪಕ್ಷದ […]

Advertisement

Wordpress Social Share Plugin powered by Ultimatelysocial