ಕಾಂಗ್ರೆಸ್ ವಿರುದ್ಧ ಸಚಿವ ಡಾ.ಸುಧಾಕರ್ ಕಿಡಿ

ಬೆಂಗಳೂರು : ಕೊರೊನಾ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಟ್ವೀಟ್  ಮಾಡಿರುವ ಅವರು, “ಕಾಂಗ್ರೆಸ್ ನವು ಕಾರ್ಮಿಕರ ಬಸ್ ಚಾರ್ಜ್ , ಟ್ರೈನ್ ಚಾರ್ಜ್ ಕೊಡ್ತೀವಿ ಎಂದು ರಾಜಕೀಯ ಮಾಡುತ್ತಿದ್ದಾರೆ.

ಈ ಬಗ್ಗೆ ಜಾಹೀರಾತನ್ನೂ ಸಹ ಕೊಟ್ಟಿದ್ದಾರೆ. ಜಾಹೀರಾತು ನೋಡಿದ್ರೆ ಇದು ಬಯಲುನಾಟಕ ಎಂದೆನಿಸುತ್ತದೆ. ಯಾರಿಗೆ ಕೊಡಬೇಕೋ ಅವರಿಗೆ ಹಣ ಕೊಡಲಿ. ಅದು ಬಿಟ್ಟು ಊರೆಲ್ಲಾ ಓಡಾಟ, ಚೀರಾಟ ಬೇಡ. ಕೊರೊನಾ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ” ಎಂದು ಟ್ವೀಟರ್ ನಲ್ಲಿ ಸಚಿವ ಡಾ.ಸುಧಾಕರ್ ಕಿಡಿಕಾರಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯ ಸೇತು ಆ್ಯಪ್ ಕಡ್ಡಾಯ..!

Tue May 5 , 2020
ನವದೆಹಲಿ: ಕೊರೊನಾ ವೈರಸ್‌ನಿಂದ ದೂರವಿರಲು ಆರೋಗ್ಯ ಸೇತು ಆ್ಯಪ್ ಬಳಸಿ ಎಂದು ಕೇಂದ್ರ ಸರ್ಕಾರ ಈ ಮೊದಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿತ್ತು. ಬಳಿಕ ಇದನ್ನು ಸರ್ಕಾರಿ ನೌಕರರಿಗೆ ಕಡ್ಡಾಯಗೊಳಿಸಿ ಆದೇಶಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲಸಕ್ಕೆ ಆರೋಗ್ಯ ತೆರಳಬೇಕೆಂದರೆ ಆರೋಗ್ಯ ಸೇತು ಆ್ಯಪ್ ಹೊಂದಿರಲೇಬೇಕು. ಅದರಲ್ಲಿ ವಿವರಗಳನ್ನು ದಾಖಲಿಸಿದ ಬಳಿಕ ಅದು ನೀವು ಸುರಕ್ಷಿತವೋ ಇಲ್ಲವೋ ಎಂಬುದನ್ನು ತಿಳಿಸುತ್ತದೆ. ಸುರಕ್ಷಿತ ಅಥವಾ ಅಪಾಯ ಕಡಿಮೆ ಎಂದು ತೋರಿಸಿದರಷ್ಟೇ ಕೆಲಸಕ್ಕೆ ತೆರಳಬೇಕು […]

Advertisement

Wordpress Social Share Plugin powered by Ultimatelysocial