ಕೈಯಲ್ಲಿ ಹಣವಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ಸಾವಿರಾರು ಕಿಲೋಮೀಟರ್ ನಡೆದ ಊರು ತಲುಪಿದ ವಲಸೆ ಕಾರ್ಮಿಕರ ಕರುಣಾಜನಕ ಕಥೆಗಳ ನಡುವೆ ಇಲ್ಲೊಬ್ಬ ರೈತರು 70,000 ಖರ್ಚು ಮಾಡಿ ಕಾರ್ಮಿಕರನ್ನು ವಿಮಾನದಲ್ಲಿ ಊರು ತಲುಪಿಸಲು ಮುಂದಾಗಿದ್ದಾರೆ. ಅಣಬೆ ಬೆಳೆಗಾರ ಪಪ್ಪನ್ ಸಿಂಗ್ ತಮ್ಮ ಬಳಿ ಕೆಲಸಕ್ಕಿದ್ದ ಬಿಹಾರದ 10 ಜನ ಕಾರ್ಮಿಕರನ್ನು ವಿಮಾನದ ಮೂಲಕ ಅವರ ಊರು ತಲುಪಿಸಲು ಏರ್ಪಾಡು ಮಾಡಿದ್ದಾರೆ. ಇದಕ್ಕಾಗಿ ಅವರು 70,000 ರೂಪಾಯಿ ಖರ್ಚು ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುಮಾರು ಎರಡು ತಿಂಗಳ ಕಾಲ ಇದೇ ವಲಸೆ ಕಾರ್ಮಿಕರಿಗೆ ಅವರು ಉಚಿತವಾಗಿಯೇ ಊಟ-ವಸತಿಯನ್ನೂ ನೀಡಿದ್ದಾರೆ.
ಕಾರ್ಮಿಕರನ್ನು ಊರು ಸೇರಿಸುತ್ತಿರುವ ರೈತ

Please follow and like us: