ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ವೈರಸ್ಗೆ ಔಷಧ ಕಂಡು ಹಿಡಿಯಲು ಇನ್ನು ಸಾಧ್ಯವಾಗದಿರುವುದರಿಂದ ವಿಶ್ವಸಂಸ್ಥೆಯು ಕೈಚೆಲ್ಲಿ ಕುತಿದೆ. ಈಗಿರುವ ಸ್ಥಿತಿಯಲ್ಲಿ ಕೊರೊನಾದಿಂದ ಎಚ್ಚರಿಕೆಯಿಂದಿರುವುದೊAದೆ ದಾರಿ. ಇಂತ ಸಂದರ್ಭದಲ್ಲಿ ಜೀವ ಮತ್ತು ಜೀವನ ಎರಡೂ ಮುಖ್ಯ ಆಗಿರೋದ್ರಿಂದ, ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಹಾಡೊಂದನ್ನ ನಿರ್ಮಿಸುತ್ತಿದ್ದು, ಸ್ಯಾಂಡಲ್ವುಡ್ ನಟ-ನಟಿಯರನ್ನು ಸೇರಿಸಿಕೊಂಡು ಈ ಹಾಡನ್ನು ನಿರ್ಮಿಸುತ್ತಿದ್ದು, ನಿರ್ದೇಶಕ ಪವನ್ ಒಡೆಯರ್ ಇದರ ಸಾರಥ್ಯವನ್ನು ವಹಿಸಿದ್ದಾರೆ. ಮೈ ಹೀರೋ ಕಾನ್ಸೆಪ್ಟ್ನಲ್ಲಿ ಸಿದ್ಧವಾಗ್ತಿರೋ ಈ ಹಾಡಿಗೆ ವಿ. ಹರಿಕೃಷ್ಣ ಸಂಗೀತವಿದ್ದು, ಶಿವಣ್ಣ, ಪುನೀತ್, ರವಿಚಂದ್ರನ್, ದರ್ಶನ್, ರಕ್ಷಿತ್ ಶೆಟ್ಟಿ, ಗಣೇಶ್, ಉಪೇಂದ್ರ, ಸುಮಲತಾ, ಅನಿಲ ಕುಂಬ್ಳೆ, ಮಾನ್ವಿತಾ, ರಮೇಶ್ ಅರವಿಂದ್ ಮತ್ತಿರರರು ಕಾಣಿಸಿಕೊಳ್ಳಲಿದ್ದಾರೆ.
ಕೊರೊನಾ ಜಾಗೃತಿ ಹಾಡಿನಲ್ಲಿ ಹಲವು ನಟರು

Please follow and like us: