ದಾವಣಗೆರೆ: ಕೊರೊನಾ ವಾರಿಯರ್ಸ್ ಗೆ ಒಳ್ಳೆಯದಾಗಲಿ ಹಾಗೂ ಕೊರೊನಾ ವೈರಸ್ ನಿವಾರಣೆಗೆ ಪ್ರಾರ್ಥಿಸಿ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿತ್ತು.ಹೊನ್ನಾಳಿ ಮತ್ತು ನ್ಯಾಮತಿಯ ಅವಳಿ ತಾಲ್ಲೂಕಿನಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದವರಿಗೆ ಇಂದು ಹೊನ್ನಾಳಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪುಷ್ಪವೃಷ್ಟಿ ಹಾಗೂ ಮಾಲಾರ್ಪಣೆಯ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಸರ್ವರಿಗೂ ಒಳ್ಳೆಯದಾಗಲಿ, ಕಾಲಕಾಲಕ್ಕೆ ಮಳೆ-ಬೆಳೆ ಉತ್ತಮವಾಗಲಿ ಎಂದು ಪ್ರಾರ್ಥಿಸಲಾಯಿತು. ಈ ವೇಳೆ ಹಿರೇಕಲ್ಮಠದ ಶ್ರೀಗಳು, ಶಾಸಕರಾದ ರೇಣುಕಾಚಾರ್ಯ ದಂಪತಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಘವೇಂದ್ರ, ಅವಳಿ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಇದ್ದರು.
ಕೊರೊನಾ ವಾರಿಯರ್ಸ್ ಗಾಗಿ ಮೃತ್ಯುಂಜಯ ಹೋಮ

Please follow and like us: