ಶಿಡ್ಲಘಟ್ಟ : ಕೊರೋನಾ ವಿರುದ್ದ ರಾತ್ರಿ –ಹಗಲು ಹೋರಾಡುತ್ತಿರುವ ವಾರಿಯರ್ಸ್ ಮಕ್ಕಳಿಗೆ ತಾಲ್ಲೂಕಿನಾದ್ಯಂತ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ಭೋದನಾ ಶುಲ್ಕದಲ್ಲಿ 500-1000 ರೂಪಾಯಿಗಳವರೆಗೆ ರಿಯಾಯಿತಿ ನೀಡಲಾಗುವುದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ವಿಸ್ಡಮ್ ನಾಗರಾಜ್ ತಿಳಿಸಿದರು. ಖಾಸಗಿ ಶಾಲೆಗಳಿಗೆ ಬರಬೇಕಾಗಿರುವ 2019-20 ನೇ ಸಾಲಿನ RTE ಹಣ ಮರುಪಾವತಿ ಮಾಡು ಬಗ್ಗೆ ಹಾಗೂ ಕೊರೊನಾದಂತಹ ಸಂದಿಗ್ದ ಪರಿಸ್ತಿತಿಯಲ್ಲಿ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಶ್ರೀನಿವಾಸ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ನಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರಾತ್ರಿ ಹಗಲು ಸೈನಿಕರಂತೆ ಕೆಲಸ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಾದ ಪೊಲೀಸ್ ಇಲಾಖೆಯ ಸಿಬ್ಬಂದಿ, ನಗರಸಭೆ ಪೌರಕಾರ್ಮಿಕರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆಯ ನೌಕರರು ಸೇರಿದಂತೆ ಪತ್ರಕರ್ತರ ಮಕ್ಕಳಿಗೂ ಸಹ ಪ್ರಸ್ತುತ ಸಾಲಿನ ಭೋಧನ ಶುಲ್ಕವನ್ನು 500 ರಿಂದ 1000 ರವರೆಗೆ ರಿಯಾಯಿತಿ ನೀಡುವುದರ ಮೂಲಕ ವಾರಿಯರ್ಸ್ ಗೆ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ರವಾನಿಸಿ ಎಂದು ತಿಳಿಸಿದ್ದಾರೆ.
ಕೊರೊನಾ ವಾರಿಯರ್ಸ್ ಮಕ್ಕಳಿಗೆ ಭೋದನಾ ಶುಲ್ಕದಲ್ಲಿ ರಿಯಾಯಿತಿ

Please follow and like us: