ಕೊಹ್ಲಿ ಸಚಿನ್ ಸಾಧನೆಯನ್ನು ಮೀರಿಸುತ್ತಾರೆ: ಬ್ರೆಟ್ ಲೀ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ಬೃಹತ್ ಕ್ರಿಕೆಟಿಂಗ್ ಸಾಧನೆಯನ್ನು ಮೀರಿಸಬಹುದು ಎಂದು ಆಸ್ಟೆಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರು ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸಚಿನ್ ೪೯ ಏಕದಿನ ಸರಣಿ ಮತ್ತು ೫೧ ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ, ಮತ್ತು ಇಂದಿಗೂ ೧೦೦ ಅಂತಾರಾಷ್ಟಿಯ ಶತಕಗಳನ್ನು ಗಳಿಸಿದ ಏಕೈಕ ಆಟಗಾರ. ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ ೪೪ ಏಕದಿನ ಶತಕಗಳನ್ನು ಮತ್ತು ೨೭ ಟೆಸ್ಟ್ ಪಂದ್ಯ ಗಳಿಸಿದ್ದಾರೆ. ಕೊಹ್ಲಿ ಸಚಿನ್ ಅವರ ಸಾಧನೆಗೆ ಸಮನಾಗಿ ಕೇವಲ ೨೯ ಶತಕಗಳಷ್ಟು ದೂರದಲ್ಲಿದ್ದಾರೆ ಎಂದರು.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರ ನೇಮಿಸಿದ ಸಮಿತಿಯಿಂದಲೇ ಯುಜಿಸಿಗೆ ಶಿಫಾರಸು

Sat Apr 25 , 2020
ನವದೆಹಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ.೧೬ರಿಂದಲೇ ದೇಶಾದ್ಯಂತ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಇದು ೨೦೨೦-೨೧ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಮೇಲೆ ಗಂಭಿರ ಪರಿಣಾಮ ಬೀರಲಿದೆ. ಹೀಗಾಗಿ ಕಾಲೇಜುಗಳಲ್ಲಿ ನೂತನ ಶೈಕ್ಷಣಿಕ ವರ್ಷಾರಂಭವನ್ನು ಜುಲೈ ಮಧ್ಯಾವಧಿಯಲ್ಲಿ ಆರಂಭದ ಬದಲು, ಸೆಪ್ಟಂಬರ್‌ನಲ್ಲಿ ಆರಂಭಿಸಲಿದೆ. ಸರ್ಕಾರ ನೇಮಿಸಿದ ಸಮಿತಿಯೊಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗಕ್ಕೆ (ಯುಜಿಸಿ) ಶಿಫಾರಸು ಮಾಡಿದೆ. ಕಾಲೇಜುಗಳನ್ನು ಮುಚ್ಚಿದ್ದರಿಂದ ವಾರ್ಷಿಕ ಹಾಗೂ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗಿಲ್ಲ. ಆ ಪರೀಕ್ಷೆಗಳನ್ನು ಜುಲೈನಲ್ಲಿ ನಡೆಸುವಂತೆ ಸಮಿತಿ ಸಲಹೆ […]

Advertisement

Wordpress Social Share Plugin powered by Ultimatelysocial