ದೇವದುರ್ಗ: ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ಕ್ವಾರಂಟೈನ್ ಇದ್ದ ಬಾಲಕ ಸಾವನಪ್ಪಿದ್ದಾನೆ. ಮಹಾರಾಷ್ಟ್ರದಿಂದ ಬಂದಿದ್ದ ಬಾಲಕ ಹಾಗೂ ಅವನ ಸೋದರ ಅತ್ತೆಯನ್ನು ಪಟ್ಟಣದ ಡಿಗ್ರಿ ಕಾಲೇಜು ಪಕ್ಕದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 16 ರಂದು ಮಹಾರಾಷ್ಟ್ರದಿಂದ ಬಂದಿದ್ದ ಬಾಲಕನನ್ನು ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಬಾಲಕ ಮತ್ತು ಅವರ ಅತ್ತೆಯನ್ನು ಇಂದಿಗೆ ಕ್ವಾರಂಟೈನ್ ನಲ್ಲಿ ಇರಿಸಿ 20 ದಿನಗಳಾದ್ರೂ ಇವರನ್ನು ಮನೆಗೆ ಕಳುಹಿಸಿರಲಿಲ್ಲ. ಜೂನ್ 1ಕ್ಕೆ ಬಾಲಕನ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೂರು ದಿನದ ಹಿಂದೆ ಮೊಳಕಾಲು ನೋವು ಎಂದು ವೈದ್ಯರು ನೀಡಿದ್ದ ಮಾತ್ರೆಗಳನ್ನು ಬಾಲಕ ಸೇವಿಸಿದ್ದ. ನಿನ್ನೆ ರಾತ್ರಿ 11 ಗಂಟೆಯಿಂದ ಹೊಟ್ಟೆ ನೋವು ತಾಳಲಾಗದೆ ಬಾಲಕ ಯಾತನೆ ಅನುಭವಿಸುತ್ತಿದ್ದ. ಬೆಳಿಗ್ಗೆ ಬಂದ ಆಂಬುಲೆನ್ಸ್ ನಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗಿನಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಹಿತಿ ನೀಡಿದ್ರೂ ಸ್ಪಂದಿಸಿಲ್ಲ ಎಂದು ಮೃತ ಬಾಲಕನ ಅತ್ತೆ ಆರೋಪಿಸಿದ್ದಾರೆ.
ಕ್ವಾರಂಟೈನಲ್ಲಿದ್ದ ಬಾಲಕ ಸಾವು

Please follow and like us: