ಕ್ವಾರಂಟೈನ್ ನಲ್ಲಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಬೆಳಿಗ್ಗನ ಜಾವ ಔರಾದ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ. ಬೀದರ ಜಿಲ್ಲೆ ಔರಾದ ತಾಲೂಕಿನ ನಾರಾಯಣಪೂರ ಗ್ರಾಮದ 22 ವರ್ಷದ ಯುವಕ ಮುಂಬೈನಿಂದ ವಾಪಸ್ ಬಂದು ಮರಪಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತನ್ನ ಹೆಂಡತಿಯೊಂದಿಗೆ ಕಳೆದ ಎಂಟು ದಿನಗಳಿಂದ ಕ್ವಾರಂಟೈನ್ ನಲ್ಲಿದ್ದ. ಇಂದು ಮುಂಜಾನೆ ಪತ್ನಿ ಸ್ನಾನಕ್ಕೆಂದು ತೆರಳಿದಾಗ ಈತ ನೇಣಿಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆಯಷ್ಟೇ ಇವರ ಮದುವೆ ನೆರವೇರಿತ್ತು. ದುರಾದ್ರುಷ್ಟ ವಶಾತ್ ಈ ದುರ್ಘಟನೆ ನಡೆದಿರುವುದು ನಿಜಕ್ಕು ಬೇಸರದ ಸಂಗತಿಯೇ ಸರಿ. ಘಟನೆ ನಡೆದ ಸ್ಥಳಕ್ಕೆ ಔರಾದ ಪೊಲೀಸ್ ರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಸಾವಿಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ ತನಿಖೆ ನಂತರವೇ ಕಾರಣ ತಿಳುದು ಬರಲಿದೆ ಎಂದು ಔರಾದ ಪೊಲೀಸ್ ರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕ್ವಾರಂಟೈನ್ ನಲ್ಲಿದ್ದ ಯುವಕ ಆತ್ಮಹತ್ಯೆ

Please follow and like us: