ಕೋವಿಡ್-೧೯ ಹಿನ್ನಲೆ ವಲಸೆ ಕಾರ್ಮಿಕರು ಕೆಲಸಕ್ಕೆ ಹೋಗಿ ಅಲ್ಲೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಅದಕ್ಕೆ ಪರಿಹಾರ ಸಿಕ್ಕಿದ್ದು ಸುಮಾರು ೧೮ ಸಾವಿರ ಜನರನ್ನು ಮರಳಿ ಕರೆಸಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷö್ಮಣ ಸವದಿ ತಿಳಿಸಿದ್ದಾರೆ. ರಾಯಚೂರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-೧೯ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೆ ಜಿಲ್ಲೆಯಿಂದ ೬೨೯೨ ಕೊರೊನಾ ಮಾದರಿಗಳನ್ನು ಪರೀಕ್ಷೆ ಗೆ ಕಳುಹಿಸಲಾಗಿದ್ದು, ೪೮೦೦ ನೆಗೆಟಿವ್ ೧೬ ಪಾಸಿಟಿವ್ ಕೇಸ್ ಬಂದಿದ್ದು, ೨೨೭೩ ಸ್ಯಾಂಪಲ್ ಪರೀಕ್ಷಾ ವರದಿಗಳು ಬರಬೇಕಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ರಸ್ತೆ ಸಾರಿಗೆ ಸಂಸ್ಥೆಗೆ ಹಾನಿಯಾಗುತ್ತಿದ್ದು, ರಾಜ್ಯ ಸರಕಾರ ಸೇವಾ ಭಾವನೆ ಬಸ್ ಓಡಿಸುತ್ತಿದೆ. ಇನ್ನೆರಡು ದಿನಗಳಲ್ಲಿ ಖಾಸಗಿ ವಾಹನಗಳ ಸಂಚಾರ ಆರಂಭವಾಗಲಿದೆ ಎಂದರು. ಈ ಸಭೆಯಲ್ಲಿ ಸಂಸದ ಅಮರೇಶ್ವರ ನಾಯಕ್, ಎಂಎಲ್ ಸಿ ಎನ್. ಬೋಸರಾಜು, ಶಾಸಕರಾದ ಬಸನಗೌಡ, ವೆಂಕಟರಾವ್ ನಾಡಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಖಾಸಗಿ ವಾಹನಗಳ ಸಂಚಾರ ಆರಂಭ

Please follow and like us: