ಮುಂಬೈ: ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಅಥವಾ ಗೃಹ ಸಾಲ ಪಡೆದು ಕೆಲವೇ ದಿನಗಳಾಗಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಉದ್ಯೋಗ ನಷ್ಟಕ್ಕೆ ಒಳಗಾದವರಿಗೆ ಬ್ಯಾಂಕ್ಗಳೂ ಶಾಕ್ ನೀಡುತ್ತಿದೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಹಲವು ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದು, ಹಲವರ ವೇತನದಲ್ಲಿ ಗಣನೀಯ ಕಡಿತಗಳನ್ನು ಮಾಡಿರುವುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಬ್ಯಾಂಕ್ಗಳು ಗೃಹ ಸಾಲ ಕೇಳಿ ಅರ್ಜಿ ಸಲ್ಲಿಸಿದ್ದರೆ ಅಥವಾ ಹೊಸದಾಗಿ ಗೃಹ ಸಾಲ ಮಂಜೂರಾತಿ ಪಡೆದುಕೊಂಡವರಿಗೆ ಪ್ರಸಕ್ತ ತಿಂಗಳಿಣ ವೇತನಚೀಟಿ (ಸ್ಯಾಲರಿ ಸ್ಲಿಪ್) ನಕಲುಗಳನ್ನು ತಕ್ಷಣವೇ ಸಲ್ಲಿಸುವಂತೆ ಸೂಚಿಸುತ್ತಿವೆ. ಉದ್ಯೋಗ ನಷ್ಟಕ್ಕೆ ಒಳಗಾಗಿದ್ದರೆ ಸಾಲ ಮರುಪಾವತಿ ಸಾಮರ್ಥ್ಯ ಇರುವುದಿಲ್ಲವಾದ್ದರಿಂದ, ಅಂಥವರ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಸಮಸ್ಯೆ ಮುಂಬೈನಲ್ಲಿ ಸ್ವಲ್ಪ ಹೆಚ್ಚಾಗಿದೆ. ಗೃಹ ಸಾಲ ಪಡೆಯಲು ಬಯಸಿ ಅರ್ಜಿ ಸಲ್ಲಿಸಿದ್ದರೆ, ಅಂಥವರಿಗೆ ಬ್ಯಾಂಕ್ಗಳು ಸಾಲ ಕೊಡುವುದನ್ನೇ ನಿಲ್ಲಿಸಿವೆ. ಇದು ಕಳೆದೆರಡು ತಿಂಗಳಿನಿಂದ ಇರುವ ಪರಿಸ್ಥಿತಿ. ಇದರಿಂದಾಗಿ ಒಂದು ಕಡೆ ಗ್ರಾಹಕರು ಇನ್ನೊಂದು ಕಡೆ ಬಿಲ್ಡರ್ಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ.
ಗೃಹ ಸಾಲ ಪಡೆದವರಿಗೆ ಶಾಕಿಂಗ್ ನ್ಯೂಸ್

Please follow and like us: