ಆಮೆಯ ಮೇಲ್ಮೈ ಚಿಪ್ಪು ಹಾಗೂ ಗ್ರೆನೇಡ್ ಒಂದೇ ರೀತಿ ಇರುತ್ತದೆ. ಹೀಗೆ ತನ್ನ ಕಣ್ಣ ಮುಂದೆ ಕಾಣಿಸಿದ್ದು ಆಮೆ ಎಂದು ಐದು ವರ್ಷದ ಮಗು ಅದನ್ನೆತ್ತಿಕೊಳ್ಳಲು ಹೋದ ಘಟನೆ ನಡೆದಿದೆ. ಅದೃಷ್ಟವಶಾತ್ ಆ ಮಗುವಿನ ತಂದೆ ಮಾಜಿ ಸರ್ಕಸ್ ಪ್ರದರ್ಶಕ ಲೂಯಿ ಲೋಮಸ್ ಅವರು ಅನುಮಾನ ಬಂದು ಅದನ್ನು ತೆಗೆದುಕೊಳ್ಳದಂತೆ ನೋಡಿಕೊಂಡಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿ ಸಹಾಯಕ್ಕೆ ಮೊರೆ ಇಟ್ಟರು. ಪೊಲೀಸರು ಅದನ್ನು ಪರಿಶೀಲಿಸಿದಾಗ ಅದು ಆಮೆಯಲ್ಲ, ಗ್ರೇನೆಡ್ ಎಂದು ಅರಿವಿಗೆ ಬಂದಿದೆ. ಬಾಂಬ್ ಸ್ಕ್ವಾಡ್ ಸಹ ಸ್ಥಳಕ್ಕಾಗಮಿಸಿ ಅದನ್ನು ಸುರಕ್ಷಿತ ಸ್ಥಳದಲ್ಲಿ ಸ್ಪೋಟಿಸಲಾಯಿತು. ಈ ಮೂಲಕ ಸಂಭಾವ್ಯ ಅಪಾಯದಿಂದ ತನ್ನ ಮಗನನ್ನು ನೋಮಸ್ ರಕ್ಷಿಸಿದ್ದಾರೆ. ಅಲ್ಲಿ ಸಿಕ್ಕ ಗ್ರೆನೇಡ್ ಮೊದಲನೇ ಮಹಾಯುದ್ಧದಲ್ಲಿ ಬಳಕೆಯಾಗಿದ್ದು ಎಂದು ಅಭಿಪ್ರಾಯಪಡಲಾಗಿದೆ.
ಗ್ರೇನೆಡ್ ನಿಂದ ಮಗುವನ್ನು ಕಾಪಾಡಿದ ತಂದೆ

Please follow and like us: