ಜಮುನಾ ಖ್ಯಾತ ಚಲನಚಿತ್ರತಾರೆ ದೈವಾಧೀನರಾಗಿದ್ದಾರೆ

ಇಂದಿನ ಕರ್ನಾಟಕದ ಹಂಪಿಯಲ್ಲಿ ನಿಪ್ಪಾಣಿ ಶ್ರೀನಿವಾಸ ರಾವ್ ಮತ್ತು ಕೌಸಲ್ಯ ದೇವಿ ದಂಪತಿಗಳ ಮಗಳಾಗಿ ಜನಿಸಿದರು. ಜಮುನಾ ಅವರನ್ನು ಜನಾ ಬಾಯಿ ಎಂದು ಹೆಸರಿಸಲಾಯಿತು.ಇವರ ತಂದೆ ಮಾಧ್ವ ಬ್ರಾಹ್ಮಣರು , ವೃತ್ತಿಯಲ್ಲಿ ತಂದೆ ಅರಿಶಿನ ಮತ್ತು ತಂಬಾಕು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು
ಮತ್ತು ಜಮುನಾ ಏಳು ವರ್ಷದವಳಿದ್ದಾಗ ಅವರ ಕುಟುಂಬವು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದುಗ್ಗಿರಾಲಾಗೆ ಸ್ಥಳಾಂತರಗೊಂಡಿತು . ಜಮುನಾ ದುಗ್ಗಿರಾಲದಲ್ಲಿ ಬೆಳೆದರು.
ಖ್ಯಾತ ನಟಿ ಸಾವಿತ್ರಿ ದುಗ್ಗಿರಾಳದಲ್ಲಿ ನಾಟಕವಾಡುತ್ತಿದ್ದರು, ಜಮುನಾಳ ಮನೆಯಲ್ಲಿ ತಂಗುತ್ತಿದ್ದ ಸಾವಿತ್ರಿ ಜಮುನಾ ಅವರನ್ನು ಚಿತ್ರಗಳಲ್ಲಿ ನಟಿಸಲು ಆಹ್ವಾನಿಸಿದರು. ಅವರು 15 ನೇ ವಯಸ್ಸಿನಲ್ಲಿ ಚಲನಚಿತ್ರಗಳಲ್ಲಿ ನಾಯಕಿಯಾಗಿ ಪ್ರವೇಶಿಸಿದರು. ಜಮುನಾ ಅವರ ಮಾತೃಭಾಷೆ ಕನ್ನಡವಾಗಿತ್ತು ಜಮುನಾ ಶಾಲೆಯಲ್ಲಿ ರಂಗ ಕಲಾವಿದೆ. ಅವಳ ತಾಯಿ ಅವಳಿಗೆ ಗಾಯನ ಸಂಗೀತ ಮತ್ತು ಹಾರ್ಮೋನಿಯಂ ಕಲಿಸಿದರು.
ಡಾ. ಗರಿಕಿಪತಿ ರಾಜಾ ರಾವ್ ಜಮುನಾ ಅವರ ಸ್ಟೇಜ್ ಶೋ ನೋಡಿ ಮೆಚ್ಚಿಕೊಂಡು 1952 ರಲ್ಲಿ “ಪುತ್ತಿಲು” ಚಿತ್ರದಲ್ಲಿ ನಟಿಸಲು ಅವರಿಗೆ ಅವಕಾಶ ನೀಡಿದರು. ಜಮುನಾ
ಅವರು ತೆಲುಗು,ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದರು, ಮಿಲನ್ (1967) ಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಸಹ ಪಡೆದರು,ಕನ್ನಡದಲ್ಲಿ 1) ಆದರ್ಶಸತಿ , 2) ತೆನಾಲಿ ರಾಮಕೃಷ್ಣ,3) ಭೂಕೈಲಾಸ, 4) ರತ್ನಗಿರಿ ರಹಸ್ಯ, 5) ಸಾಕ್ಷಾತ್ಕಾರ, 6) ಮಾಯೆಯ ಮುಸುಕು, 7) ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ, 8) ಪೊಲೀಸ್ ಮತ್ತು ದಾದ , ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ , ತೆಲುಗಿನಲ್ಲಿ 88 ತಮಿಳಿನಲ್ಲಿ 27 ಹಿಂದಿ ಭಾಷೆಯ 11 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ
1968 ಫಿಲ್ಮ್ ಫೇರ್ ಪ್ರಶಸ್ತಿ – ಮಿಲನ್
1972 ಫಿಲ್ಮ್ ಫೇರ್ ಪ್ರಶಸ್ತಿ-ಪಾಂಡಂಟಿ ಕಪುರಂ
1999 ತಮಿಳು ನಾಡಿನ ಎಂ.ಜಿ.ಆರ್ ಪ್ರಶಸ್ತಿ
2008 ಎನ್.ಟಿ.ಆರ್.ರಾಷ್ಟ್ರೀಯ ಪ್ರಶಸ್ತಿ
2010 ಪದ್ಮಭೂಷಣ ಡಾ.ಬಿ.ಸರೋಜಾದೇವಿ ಪ್ರಶಸ್ತಿ
ಸಂತೋಷಂ ಜೀವಮಾನ ಸಾಧನೆ ಪ್ರಶಸ್ತಿ
ಪಡೆದವರು ಜಮುನಾ ಕಲಾವಿದರ ಸಂಘ ಸ್ಥಾಪಿಸಿದರು ಕೆಲದಿನಗಳ ಕಾಲ ರಾಜಕೀಯದಲ್ಲೂ ಸಕ್ರಿಯವಾಗಿದ್ದ ಜಮುನಾ ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

‘ನಾನು ಯಾರ ಬೆಡ್ರೂಂನಲ್ಲೂ ಇರಲಿಲ್ಲ.

Fri Jan 27 , 2023
‘ನಾನು ಯಾರ ಬೆಡ್ರೂಂನಲ್ಲೂ ಇರಲಿಲ್ಲ. ಯಾರಿದ್ದರೋ ಅವರನ್ನೇ ಕೇಳಿಕೊಳ್ಳಲಿ’ ಎಂದು ಹೇಳಿದರು. ಬೇರೆ ಯಾರಾದರೂ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದರೆ ಉತ್ತರ ಕೊಡಬಹುದು. ಬೆಂಗಳೂರು: ಕಾಂಗ್ರೆಸ್ನಲ್ಲಿ, ತಮ್ಮ ಬೆಡ್ರೂಂನಲ್ಲೇ ಇದ್ದವರು ಈಗ ಬಿಜೆಪಿಗೆ ಹೋಗಿ ಆರೋಪ ಮಾಡುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಟೀಕೆಗೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ. ಗುರುವಾರ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಯಾರ ಬೆಡ್ರೂಂನಲ್ಲೂ ಇರಲಿಲ್ಲ. ಯಾರಿದ್ದರೋ ಅವರನ್ನೇ ಕೇಳಿಕೊಳ್ಳಲಿ’ ಎಂದು ಹೇಳಿದರು. ಬೇರೆ ಯಾರಾದರೂ […]

Advertisement

Wordpress Social Share Plugin powered by Ultimatelysocial