ಜೂಮ್ ವಿಡಿಯೋ ಕಾಲಿಂಗ್ ಆ್ಯಪ್ ನಿಷೇಧಿಸುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಯನ್ನು ಸುಪ್ರೀಕೋರ್ಟ್ ಇಂದು ನಡೆಸಿತು.ವಿಚಾರಣೆ ನಡೆಸಿದ ನ್ಯಾಯಾಲಯ, ಈ ವಿಚಾರವಾಗಿ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲ ಸಮಯಾವಕಾಶವನ್ನು ನೀಡಿದೆ. ನವದೆಹಲಿಯ ಹರ್ಷಾ ಚಾಗ್ ಎನ್ನುವ ಟ್ಯೂಟೊರ್ ಒಬ್ಬರು, ‘ಜೂಮ್ ಆ್ಯಪ್ ಸುರಕ್ಷಿತವಲ್ಲ, ಹಾಗಾಗಿ ಈ ಅ್ಯಪ್‌ನ್ನು ನಿಷೇಧಿಸಬೇಕು’ ಎಂದು ಅವರು ಕಳೆದ ವಾರ ಸುಪ್ರೀಕೋರ್ಟ್ ಗೆ ಪಿಟಿಷನ್ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಪೀಠ ಅರ್ಜಿಯನ್ನು ವಿಚಾರಣೆ ನಡೆಸಿತು. ಜೂಮ್ ಆಪ್ ಬಳಕೆದಾರರ ದತ್ತಾಂಶಗಳನ್ನು ಕಾಪಾಡುವಲ್ಲಿ ಸಮರ್ಥವಾಗಿಲ್ಲ ಎಂಬುದಕ್ಕೆ ಕೇಂದ್ರದ ಪ್ರತಿಕ್ರಿಯೆ ಕೇಳಿದ್ದಾರೆ. ಜೂಮ್ ವಿಡಿಯೋ ಕಾಲಿಂಗ್ ಆ್ಯಪ್ ನ್ನು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಬಳಸಬಾರದು, ಅದು ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಜೂಮ್ ಕಾಲಿಂಗ್ ಆ್ಯಪ್ ಬಂದಾಗಬಹುದು..?

Please follow and like us: