ಡಬ್ಲೂಹೆಚ್‌ಓ ದೊಂದಿಗೆ ಅಮೇರಿಕಾ ಜಟಾಪಟಿ

ಕೊರೊನಾ ವೈರಸ್ ಮಾನವ ನಿರ್ಮಿತ. ಅದು ಯಾವುದೋ ಪ್ರಾಣಿಯೋ ಅಥವಾ ಪಕ್ಷಿಗಳಿಂದ ಸೃಷ್ಟಿಯಾದ ವೈರಸ್ ಅಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳನ್ನು ನೇರವಾಗಿ ಗೆಲ್ಲಲಾಗದ ಚೀನಾ ತನ್ನ ಕಪಟ ಬುದ್ಧಿಯಿಂದ ಜೈವಿಕ ಯುದ್ಧದ ಮೊರೆ ಹೋಗಿ, ಈ ಕೊರೊನಾ ವೈರಸ್‌ಅನ್ನು ಸೃಷ್ಟಿಸಿದೆ. ಚೀನಾದ ಪ್ರಯೋಗಾಲಯದಲ್ಲಿ ಈ ವೈರಸ್ ಲೀಕ್ ಆಗಿದೆ. ಇದರಿಂದಾಗಿ ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ಮೊದಲು ತಾನೇ ಬಾಧೆಪಟ್ಟ ಚೀನಾ, ಮತ್ತೆ ಜಗತ್ತಿಗೆ ಸೋಂಕು ಹಬ್ಬಿದೆ. ಹೀಗಾಗಿ ಜಗತ್ತಿನ ಇತರ ರಾಷ್ಟ್ರಗಳು ಈಗ ಸೋಂಕಿನಿಂದ ಒದ್ದಾಡಿ ಸಾಯುತ್ತಿದೆ…. ಇದು ಕೊರೊನಾ ವೈರಸ್ ಹರಡಿರುವ ಬಗ್ಗೆ ಆರಂಭದಿಂದ ಕೇಳಿಬರುತ್ತಿರುವ ಸುದ್ದಿ.ಇದು ನಿಜವಾ? ಈ ವೈರಸ್ ಚೀನಾ ಸೃಷ್ಟಿಸಿದ್ದ? ಇದು ಜೈವಿಕ ಯುದ್ಧದ ಭಾಗವಾ? ಇದರಿಂದ ಜಾಗತಿಕ ನಾಶಕ್ಕೆ ಚೀನಾ ಮುನ್ನುಡಿ ಬರೆದಿದೆಯಾ? ಚೀನಾದಲ್ಲಿ ಇಂತಹ ವೈರಸ್ ಸೃಷ್ಟಿಸೋ ಪ್ರಯೋಗಾಲಯ ಇದೆಯಾ? ವೈರಸ್ ಹರಡಿದಾಗಿನಿಂದ ಇದಕ್ಕೆಲ್ಲಾ ಚೀನಾ ನೇರ ಹೊಣೆ ಎಂದಿದ್ದ ವಿಶ್ವದ ದೊಡ್ಡಣ್ಣನ ಮಾತಲ್ಲಿ ಹುರುಳಿದ್ಯಾ? ಈಗ ಟ್ರಂಪ್ ಹೇಳುತ್ತಿರೋದು ಏನು? ಚೀನಾ ವೈರಸ್ ಸೃಷ್ಟಿಸಿದ್ದಕ್ಕೆ ಟ್ರಂಪ್ ಸಾಕ್ಷಿ ಒದಗಿಸ್ತಾರಾ? ಈ ಎಲ್ಲಾ ಪ್ರಶ್ನೆಗೆ ಉತ್ತರ.
ಕೊರೊನಾ ವೈರಸ್ ಹುಟ್ಟಿದ್ದು ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ. ಕಳೆದ ವರ್ಷದ ಅಂತ್ಯದಲ್ಲಿ ಹುಟ್ಟಿಕೊಂಡ ಈ ವೈರಸ್‌ನಿಂದಾಗಿ ಚೀನಾದಲ್ಲಿ ಇಲ್ಲಿಯವರೆಗೆ ೪೬೩೩ ಜನ ಸಾವನ್ನಪ್ಪಿದ್ದು, ಒಟ್ಟು ೮೨,೮೭೪ ಜನರಿಗೆ ಸೋಂಕು ಹಬ್ಬಿದೆ. ಆದ್ರೆ ಆರಂಭದಲ್ಲಿ ಚೀನಾದಲ್ಲಿ ತೀವ್ರವಾಗಿ ಹಬ್ಬಿದ ಈ ಸೋಂಕು ಈಗ ಪಾಶ್ಚಿಮಾತ್ಯರ ನಾಡಲ್ಲಿ ಭಾರಿ ಹತೋಟಿಯಲ್ಲಿದೆ. ಇದು ಜಗತ್ತಿನ ಅನುಮಾನಕ್ಕೆ ಕಾರಣವಾಗಿರೋ ಒಂದು ಅಂಶ. ಚೀನಾದಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕೇವಲ ೫೯೯. ಉಳಿದೆಲ್ಲಾ ಸೋಂಕಿತರು ಗುಣಮುಖರಾಗಿದ್ದಾರೆ. ಆದ್ರೆ ಜಗತ್ತಿನ ಉಳಿದ ರಾಷ್ಟ್ರಗಳು ಈಗಲೂ  ಸೋಂಕಿನಿಂದ ವಿಲವಿಲ ಒದ್ದಾಡುತ್ತಿವೆ. ಆರಂಭದಲ್ಲೇ ಚೀನಾ ಮೇಲೆ ಆರೋಪಿಸಿದ್ದ ವಿಶ್ವದ ದೊಡ್ಡಣ್ಣ ಹೀಗೊಂದು ಸುದ್ದಿ ಕೊರೊನಾ ವೈರಸ್ ಹಬ್ಬಿದ ಆರಂಭದಿಂದಲೇ  ಕೇಳಿಬರುತ್ತಿದೆ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು ವಿಶ್ವದ ದೊಡ್ಡಣ್ಣನ ಹೇಳಿಕೆ.


ವೈರಸ್ ಹಬ್ಬಿದ ಆರಂಭದಲ್ಲೇ ಚೀನಾ ವಿರುದ್ಧ ರೊಚ್ಚಿಗೆದ್ದಿದ್ದ ಅಮೆರಿಕಾ ಅಧ್ಯಕ್ಷ ಟ್ರಂಪ್, ಈ ವೈರಸ್ ಹರಡಿದ್ದಕ್ಕೆ ಚೀನಾ ನೇರ ಹೊಣೆ. ಇದರಿಂದ ಜಗತ್ತಿಗಾಗುವ ನಷ್ಟವನ್ನು ಚೀನಾವೇ ಭರಿಸಬೇಕು ಎಂದು ರೋಷದಿಂದಾಡಿದ್ದರು. ಅಲ್ಲದೆ ವೈರಸ್ ನಿಗ್ರಹಿಸುವಲ್ಲಿ ಚೀನಾದ ಕ್ರಮವನ್ನು ಬೇರೆ ರಾಷ್ಟ್ರಗಳು ಅನುಸರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದ ಮಾತಿಗೆ ತಿರುಗಿ ಬಿದ್ದಿದ್ದ ಟ್ರಂಪ್, ಚೀನಾ ಸುಳ್ಳು ಅಂಕಿ-ಅಂಶ ನೀಡುತ್ತಿದೆ. ಆದರೂ ವಿಶ್ವಸಂಸ್ಥೆ ಚೀನಾವನ್ನೇ ಬೆಂಬಲಿಸುತ್ತಿದೆ ಎಂದು ದೂರಿದ್ದರು. ಟ್ರಂಪ್ ಚೀನಾದ ಮೇಲೆ ಹೇರಿದ್ದ ಆರೋಪಕ್ಕೆ ಜಗತ್ತಿನ ಹಲವೆಡೆಗಳಿಂದ ಬೆಂಬಲ ವ್ಯಕ್ತವಾಗಿತ್ತು. ಚೀನಾವೇ ವೈರಸ್ ಸೃಷ್ಟಿಸಿದೆ ಎಂದು ಹೇಳದಿದ್ದರೂ, ಚೀನಾದ ಕೈವಾಡವಂತೂ ಇರಬಹುದು ಎಂಬುದು ಭಾಗಶಃ ರಾಷ್ಟ್ರಗಳ ಅಭಿಪ್ರಾಯ. ಇದರಿಂದ ಭಾರತವೂ ಹೊರತಾಗಿಲ್ಲ.
ಕೊರೊನಾ ವೈರಸ್ ಮಾನವ ಸೃಷ್ಟಿಯಲ್ಲ ಎಂದ ಅಮೆರಿಕಾ ಗುಪ್ತಚರ ಸಂಸ್ಥೆ ಕೊರೊನಾ ಸೋಂಕು ಹಬ್ಬಿಸಿ, ಆರಂಭದಲ್ಲಿ ಅದರ ಬಗ್ಗೆ ಎಲ್ಲವೂ ತಿಳಿದಿದ್ದರೂ ಚೀನಾ ಮಾಹಿತಿ ನೀಡಲಿಲ್ಲ. ತ್ವರಿತವಾಗಿ ಕಾರ್ಯಪ್ರವೃತವಾಗುವಲ್ಲಿ ಚೀನಾ ವಿಫಲವಾಗಿದೆ. ಈ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಆರಂಭಿಕ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕೊರೊನಾ ವೈರಸ್ ಮಾನವ ಸೃಷ್ಠಿಯಲ್ಲ, ಅನುವಂಶಿಕವಾಗಿ ನಿರ್ಮಿತವಾಗಿದ್ದಲ್ಲ ಎಂದು ಸ್ಪಷ್ಟನೆ ನೀಡಿದ್ದರೂ, ಅಮೇರಿಕಾ ಅಧ್ಯಕ್ಷ ಒಪ್ಪಕೊಂಡಿರಲಿಲ್ಲ. ನಿನ್ನೆ ಡಬ್ಲೂಹೆಚ್‌ಓ ಕೂಡಾ ಅದರ ಬಗ್ಗೆ ಸ್ಪಷ್ಟನೆ ನೀಡಿದೆ. ವೈರಸ್ ನೈಸರ್ಗಿಕ ಮೂಲದಿಂದ ಹುಟ್ಟಿದೆ ಎಂದ ಡಬ್ಲೂಹೆಚ್‌ಒ. ಕೊರೊನಾ ವೈರಸ್ ಚೀನಾದ ಪ್ರಯೋಗಾಲಯದಲ್ಲಿ ಹುಟ್ಟಿದ್ದು ಎಂಬ ಟ್ರಂಪ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಸ್ಥಿತಿಯ ಮುಖ್ಯಸ್ಥರಾದ ಡಾ. ಮೈಕೆಲ್ ರಯಾನ್, ಈ ವೈರಸ್ ಯಾವುದೋ ನೈಸರ್ಗಿಕ ಮೂಲದಲ್ಲಿ ಹುಟ್ಟಿದ್ದು ಎಂದು ತಿಳಿಸಿದ್ದಾರೆ. ಜೀನ್ ಅನುಕ್ರಮಗಳು ಮತ್ತು ವೈರಸ್ ಅನ್ನು ನೋಡಿದ ಅನೇಕ ವಿಜ್ಞಾನಿಗಳೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಮಾತನಾಡಿದ್ದು, ಈ ವೈರಸ್ ನೈಸರ್ಗಿಕ ಮೂಲದ್ದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ರಯಾನ್ ಹೇಳಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಒಪ್ಪದ ಅಮೇರಿಕಾ.
ಕೊರೊನಾ ವೈರಸ್ ಹರಡುವಿಕೆಯಲ್ಲಿ ಡಬ್ಲ್ಯೂಎಚ್‌ಓ ಪಾತ್ರದ ಕುರಿತು ತನಿಖೆಗೆ ಅಮೆರಿಕ ಸರ್ಕಾರ ಆದೇಶಿಸಿದ್ದು, ಡಬ್ಲ್ಯೂಎಚ್‌ಓ ಗೆ ತಾನು ನೀಡುತ್ತಿದ್ದ ಎಲ್ಲ ರೀತಿಯ ಧನಸಹಾಯವನ್ನು ಅಮಾನತುಗೊಳಿಸಿದೆ. ಕೊರೊನಾ ವೈರಸ್ ಹರಡುವಿಕೆಯಲ್ಲಿ ಚೀನಾದ ಪಾತ್ರ ಕುರಿತಂತೆ ಡಬ್ಲ್ಯೂಎಚ್‌ಓ ಹಾಗೂ ಅಮೆರಿಕದ ಮಧ್ಯೆ ಜಟಾಪಟಿ ಮುಂದುವರೆದಿದ್ದು, ವಿಶ್ವದ ಅನೇಕ ರಾಷ್ಟ್ರಗಳು ಸತತ ಚೀನಾ ಪರ ಹೇಳಿಕೆ ನೀಡುತ್ತಿರುವ ಡಬ್ಲ್ಯೂಎಚ್‌ಓ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ.

Please follow and like us:

Leave a Reply

Your email address will not be published. Required fields are marked *

Next Post

2014 ರಲ್ಲೇ ನಡೆದಿತ್ತು ಪ್ರಿಯಂಕಾ ಚೋಪ್ರಾ ಮದುವೆ..

Sun May 3 , 2020
ಹಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ೨೦೧೮ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ಜೋದ್‌ಪುರ್‌ದಲ್ಲಿ ನಿಕ್ ಮತ್ತು ಪ್ರಿಯಾಂಕಾ ಮದುವೆಯಾಗಿದ್ರು, ಆದ್ರೆ ಪ್ರಿಯಾಂಕಾ ಬಗ್ಗೆ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬಾಂಬ್ ಸಿಡಿಸಿದೆ.ಏನಪ್ಪಾ ಅಂತೀರಾ ೨೦೧೪ರಲ್ಲೇ ಅಮೆರಿಕ ಮೂಲದ ವ್ಯಕ್ತಿಯೊಬ್ಬನನ್ನು ಪ್ರಿಯಾಂಕ ಮದುವೆಯಾಗಿದ್ದರಂತೆ ಹಾಗಂತ ಆ ಕೌತುಕದ ವಿಚಾರವನ್ನು ಪ್ರಿಯಾಂಕ ಬಹಿರಂಗಪಡಿಸಿಲ್ಲ. ಬದಲಿಗೆ ಮದುವೆಯಾಗಿದ್ದ ಪತಿ ಮಹಾಶಯನೇ ಆರು ವರ್ಷದ ಹಿಂದಿನ ಆ ಘಟನೆಯನ್ನು ಮತ್ತೆ ನೆನಪಿಸಿಕೊಂಡಿದ್ದು, ಟ್ವಿಟರ್‌ನಲ್ಲಿ ಮದುವೆ […]

Advertisement

Wordpress Social Share Plugin powered by Ultimatelysocial