ದಿನನಿತ್ಯ ನೂರಾರು ಬೆದರಿಕೆ,ಅಶ್ಲೀಲ ಕರೆಗಳು ಬರುತ್ತಿವೆ:ಕರಂದ್ಲಾಜೆ

ದುಬೈ, ಮಸ್ಕತ್ ನಿಂದ ನಿರಂತರ ಬೆದರಿಕೆ ಕರೆಬರುತ್ತಿದೆ  ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, “ಕೇರಳದ ಹಿಂದೂ ಕಾರ್ಯಕರ್ತನಿಗೆ ಮಸ್ಕತ್ ನಲ್ಲಿ ಹಲ್ಲೆ ಮಾಡಿದ್ದರು. ಆ ಘಟನೆಯ ವಿರುದ್ಧ ನಾನು ಸಿಡಿದೆದ್ದಿದ್ದೆ. ಹೀಗಾಗಿ ಈ ಬೆದರಿಕೆ ಕರೆ ಬರುತ್ತಿದೆ”. ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದೆ. ನನಗೆ ದಿನನಿತ್ಯ ನೂರಾರು ಬೆದರಿಕೆ, ಅಶ್ಲೀಲ ಕರೆಗಳು ಬರುತ್ತಿವೆ. ದುರುದ್ದೇಶದಿಂದ ಫೋನಿನ ಮೇಲೆ ಫೋನ್ ಮಾಡುತ್ತಿದ್ದಾರೆ. ಒಂದೂವರೆ ತಿಂಗಳಿಂದ ಒಂದು ದಿನವೂ ನಾನು ವಿಶ್ರಾಂತಿ ಪಡೆದಿಲ್ಲ ನಾನು ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೊರೊನಾ ಸಂದರ್ಭ ಅಕ್ಕಿ ದವಸ ಧಾನ್ಯಗಳನ್ನು ನಿರಂತರವಾಗಿ ವಿತರಿಸಿದ್ದೇನೆ. ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧದ ವಿಚಾರ ಹರಿದಾಡುತ್ತಿದೆ. ನನಗೆ ಈ ಬಗ್ಗೆ ಯಾವುದೇ ಬೇಸರ ಇಲ್ಲ. ದುಬೈ ಮಸ್ಕತ್ ಮಧ್ಯ ಪ್ರಾಚ್ಯ ದೇಶದಿಂದ ನೂರಾರು ಬೆದರಿಕೆ ಕರೆ ಬರುತ್ತಿದೆ. ವಾಯ್ಸ್ ರೆಕಾರ್ಡ್ ಹಿಂದಿರುವ ದುರುದ್ದೇಶವನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಿ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಲಾಕ್ ಡೌನ್ ಸಂದರ್ಭ ನಾನಂತೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಜಿಹಾದಿಗಳು ಎರಡು ಮೂರು ವರ್ಷಗಳಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದೇನೆ. ಆದರೆ ಕರೆ ಮಾಡಿದ ಆರೋಪಿಗಳನ್ನು ಈವರೆಗೆ ಪತ್ತೆ ಹಚ್ಚಿಲ್ಲ. ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಮಾಸ್ಟರ್ ಚಿತ್ರಕ್ಕೆ ರಿಲೀಸ್ ಡೇಟ್ ಫಿಕ್ಸ್ ..!

Tue May 5 , 2020
ಕೊರೊನಾ ವೈರಸ್ ಅಬ್ಬರ ಹೆಚ್ಚಾಗಿರುವುದರಿಂದ ಎಲ್ಲ ಉದ್ಯಮಗಳು ಲಾಕ್‌ಡೌನ್ ಆಗಿವೆ. ಇದರ ಪ್ರಭಾವ ಚಿತ್ರರಂಗದ ಮೇಲೆ ಹೆಚ್ಚಿನ ಹೊಡೆತ ಬಿದ್ದಿದೆ. ರಿಲೀಸ್‌ಗೆ ರೆಡಿ ಇರುವ ಬಿಗ್ ಬಜೆಟ್ ಸಿನಿಮಾಗಳಿಗೆ ತೊಂದರೆ ಆಗಿದೆ. ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗಿದ್ದ ಮಾಸ್ಟರ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಮೊದಲ ಬಾರಿಗೆ ವಿಜಯ್ ಎದುರು ವಿಜಯ್ ಸೇತುಪತಿ ವಿಲನ್ ಆಗಿ ನಟಿಸಲಿದ್ದಾರೆ ಎಂದಾಗಲೇ ದೊಡ್ಡಮಟ್ಟದ ಹೈಪ್ ಸೃಷ್ಟಿಯಾಗಿತ್ತು. ಎಲ್ಲ ಅಂದುಕೊAಡAತೆ […]

Advertisement

Wordpress Social Share Plugin powered by Ultimatelysocial