ಕಾಂಗ್ರೆಸ್‌ ಕುರಿತು ಚರ್ಚೆ ನಡೆಸಲು ‘ಚಿಂತನ ಶಿಬಿರ’ ಆಯೋಜನೆ ಮಾಡಿದೆ.

ನವದೆಹಲಿ, ಏಪ್ರಿಲ್ 27; ಪಕ್ಷ ಸಂಘಟನೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿರುವ ಕಾಂಗ್ರೆಸ್‌  ಪಕ್ಷ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲು ‘ಚಿಂತನ ಶಿಬಿರ’ ಆಯೋಜನೆ ಮಾಡಿದೆ.

ರಾಜಸ್ಥಾನದ ಉದಯಪುರದಲ್ಲಿ ಈ ಶಿಬಿರ ನಡೆಯಲಿದೆ. When you deposit using one of these methods you will receive the agreed on bonus clickmiamibeach.com code.

ಮೇ 13, 14, 15 ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಚಿಂತನ ಶಿಬಿರದಲ್ಲಿ ವಿವಿಧ ವಿಚಾರಗಳನ್ನು ಮಂಡಿಸಲು ಪಕ್ಷ ಸಮಿತಿಗಳನ್ನು ರಚನೆ ಮಾಡಿದೆ. ಆಯಾ ವಿಚಾರಗಳಲ್ಲಿ ಪ್ರಬಂಧ ಮಂಡಿಸುವುದು, ಚರ್ಚೆಗಳನ್ನು ನಡೆಸಲು ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ.

ಕರ್ನಾಟಕದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರಿಗೆ ವಿವಿಧ ವಿಷಯಗಳಲ್ಲಿ ಪ್ರಬಂಧಗಳನ್ನು ಸಿದ್ಧಪಡಿಸಲು ಮತ್ತು ಚರ್ಚೆ ಮುನ್ನಡೆಸಲು ಸಮಿತಿಗಳನ್ನು ರಚಿಸಿದ್ದಾರೆ.

ದೇಶದ ಆರ್ಥಿಕತೆ ಬಗ್ಗೆ ಪ್ರಬಂಧ, ಚರ್ಚೆಗೆ ರಚನೆ ಮಾಡಿರುವ ಸಮಿತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಹಣಕಾಸು ಖಾತೆಯ ಮಾಜಿ ಸಚಿವ ಪಿ. ಚಿದಂಬರಂ ಈ ಸಮಿತಿಯ ಮುಖ್ಯಸ್ಥರು.

ಸಚಿನ್ ಪೈಲೆಟ್, ಪ್ರೊ. ರಾಜೀವ್ ಗೌಡ, ಮನೀಶ್ ತಿವಾರಿ, ಆನಂದ್ ಶರ್ಮಾ ಸೇರಿದಂತೆ ವಿವಿಧ ನಾಯಕರು ಆರ್ಥಿಕತೆ ವಿಷಯದ ಕುರಿತು ರಚನೆ ಮಾಡಿರುವ ಸಮಿತಿಯಲ್ಲಿದ್ದಾರೆ.

ರಾಜಕೀಯ ವಿಷಯದ ಕುರಿತು ರಚನೆ ಮಾಡಿರುವ ಸಮಿತಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಸ್ಥರು. ಗುಲಾಂ ನಬಿ ಆಜಾದ್, ಶಶಿ ತರೂರ್, ಅಶೋಕ್‌ ಚೌವ್ಹಾಣ್ ಈ ಸಮಿತಿಯ ಸದಸ್ಯರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗ್ರಾಮ ಪಂಚಾಯಿತಿಗಳು ಎಲ್ಲಾ ಅರ್ಹ ರೈತರಿಗೆ ಕಿಸಾನ್​ ಕ್ರೆಡಿಟ್​

Wed Apr 27 , 2022
ಬೆಂಗಳೂರು: ಗ್ರಾಮ ಪಂಚಾಯಿತಿಗಳು ಎಲ್ಲಾ ಅರ್ಹ ರೈತರಿಗೆ ಕಿಸಾನ್​ ಕ್ರೆಡಿಟ್​ ವಿತರಣೆಗೆ ಕ್ರಮವಹಿಸಲು ಮೇ 1ರ ವರೆಗೂ ಗ್ರಾಮಗಳಲ್ಲಿ ಆಂದೋಲನ ನಡೆಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಕೇಂದ್ರದ ಸೂಚನೆಯಂತೆ ಗ್ರಾಮಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯ ಸೇರ್ಪಡೆ ಮಾಡಿ, ರೈತರಿಗೆ ಕಿಸಾನ್​ ಕ್ರೆಡಿಟ್​ ಕಾರ್ಡ್​ನಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಎಲ್ಲಾ ರೈತರು ಕಾರ್ಡ್​ ಪಡೆಯಲು ಕ್ರಮಕೈಗೊಳ್ಳುವಂತೆ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ, ಕಂದಾಯ […]

Advertisement

Wordpress Social Share Plugin powered by Ultimatelysocial