ಉದ್ಯೋಗಿಗಳಿಗೆ ಪ್ರತಿವರ್ಷ ಹತ್ತಿಪ್ಪತ್ತು ಸಾವಿರ ರೂಪಾಯಿ ಬೋನಸ್‌ ಕೊಡೋದು ಮಾಮೂಲು.

ದ್ಯೋಗಿಗಳಿಗೆ ಪ್ರತಿವರ್ಷ ಹತ್ತಿಪ್ಪತ್ತು ಸಾವಿರ ರೂಪಾಯಿ ಬೋನಸ್‌ ಕೊಡೋದು ಮಾಮೂಲು. ಕೆಲವು ಕಡೆ ಬೆಲೆ ಬಾಳುವ ಉಡುಗೊರೆಗಳನ್ನೂ ಕೊಡುತ್ತಾರೆ. ಆದ್ರೆ ಚೀನಾದ ಕಂಪನಿಯೊಂದು ಉದ್ಯೋಗಿಗಳಿಗೆ ಕೊಟ್ಟಿರೋ ಬೋನಸ್‌ ಎಲ್ಲರಿಗೂ ಆಘಾತ ಉಂಟು ಮಾಡಿದೆ. ಈ ಕಂಪನಿಯಲ್ಲಿರುವ 40 ಉದ್ಯೋಗಿಗಳಿಗೆ ಮಾಲೀಕ 61 ಮಿಲಿಯನ್ ಯುವಾನ್ ಅಂದರೆ ಸುಮಾರು 70 ಕೋಟಿ ರೂಪಾಯಿಗಳ ಬ್ಯಾಂಕ್ ನೋಟುಗಳನ್ನೇ ವಿತರಿಸಿದ್ದಾರೆ.

ಈ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಂಪನಿಯ ವಾರ್ಷಿಕ ಪಾರ್ಟಿಯಲ್ಲಿ ವೇದಿಕೆ ಮೇಲೆ ಸುಮಾರು ಎರಡು ಮೀಟರ್ ಎತ್ತರದಲ್ಲಿ ನೋಟುಗಳ ಬಂಡಲ್ ಅನ್ನು ಜೋಡಿಸಿ ಇಡಲಾಗಿತ್ತು. ಪಾರ್ಟಿ ಮುಗಿಯುತ್ತಿದ್ದಂತೆ ಕಂಪನಿಯ ಉದ್ಯೋಗಿಗಳೆಲ್ಲ ನೋಟುಗಳ ಕಟ್ಟುಗಳೊಂದಿಗೆ ಮನೆಗೆ ತೆರಳಿದ್ದಾರೆ. ಮೂವರು ಅತ್ಯುತ್ತಮ ನೌಕರರಿಗೆ 6 ಕೋಟಿ ರೂಪಾಯಿ ಬೋನಸ್‌ ಸಿಕ್ಕಿದೆಯಂತೆ. ಉಳಿದ 30ಕ್ಕೂ ಹೆಚ್ಚು ಮಂದಿಗೆ ತಲಾ 20 ಲಕ್ಷ ರೂಪಾಯಿಗೂ ಅಧಿಕ ಹಣ ದಕ್ಕಿದೆ.

ಈ ವೇಳೆ ನೋಟುಗಳನ್ನು ಎಣಿಸುವ ಸ್ಪರ್ಧೆಯೂ ಇತ್ತು. ಇದಕ್ಕಾಗಿಯೇ ಕಂಪನಿ 12 ಮಿಲಿಯನ್ ಯುವಾನ್ ಹಣವನ್ನು ಖರ್ಚು ಮಾಡಿದೆ. ಹೆನಾನ್ ಮೈನ್ ಹೆಸರಿನ ಕಂಪನಿ ಈ ರೀತಿ ಬಂಪರ್‌ ಬೋನಸ್‌ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಂಪನಿಯ ಆದಾಯ ಕಳೆದ ವರ್ಷಕ್ಕಿಂತ ಶೇ.23ರಷ್ಟು ಹೆಚ್ಚಾಗಿದೆಯಂತೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊಡವೆಗಳು ಕಾಡುತ್ತಿವೆಯೇ?.

Tue Jan 31 , 2023
ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಚರ್ಮದ ಮೇಲೆ ಮೊಡವೆ ಮಾಡುವುದು ತುಂಬಾ ಸಾಮಾನ್ಯ ವಿಷಯ. ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ. ಆದರೆ ಇದು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಚರ್ಮದ ಮೇಲೆ ತೈಲ ಗ್ರಂಥಿಗಳಿಂದ ಸ್ರವಿಸುವ ತೈಲಗಳು. ಚರ್ಮವು ಸತ್ತ ಜೀವಕೋಶಗಳೊಂದಿಗೆ ಬೆರೆಯುತ್ತದೆ. ಪರಿಣಾಮವಾಗಿ, ಚರ್ಮದ ರಂಧ್ರಗಳು ಮುಚ್ಚಿಹೋಗುತ್ತವೆ. ಈ ಕಾರಣದಿಂದಾಗಿ, ಮೊಡವೆಗಳು ರೂಪುಗೊಳ್ಳುತ್ತವೆ. ಮೊಡವೆ ಕೆಲವೊಮ್ಮೆ ತೊಂದರೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ಸೆಬಮ್ […]

Advertisement

Wordpress Social Share Plugin powered by Ultimatelysocial