ಖಾರವಾದ ಚಿಕನ್ ಮಂಚೂರಿಯನ್

ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ.
ನಾನ್ವೆಜ್ ಅಡುಗೆಯಲ್ಲಿ ಬಗೆ ಬಗೆಯ ತಿನಿಸುಗಳಿವೆ.
ಚಿಕನ್ ಮಂಚೂರಿಯನ್ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಚಿಕನ್ ಮಂಚೂರಿಯನ್ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ.
ಬೇಕಾಗುವ ಸಾಮಗ್ರಿಗಳು
* ಕೋಳಿ ಮಾಂಸ (ಮೂಳೆ ಇಲ್ಲದ್ದು) – 1/2 ಕೆಜಿ
* ಕಾರ್ನ್ ಫ್ಲೋರ್ – 1 ಕಪ್ *ಮೊಟ್ಟೆಗಳು – 2
* ಹಸಿ ಮೆಣಸಿನ ಕಾಯಿ -4
* ಸೋಯಾ ಸಾಸ್ – 3 ಚಮಚ
* ಟೊಮೆಟೋ ಸಾಸ್ – 2 ಚಮಚ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಬೆಳ್ಳುಳ್ಳಿ – 4 ತುಂಡು
* ಶುಂಠಿ – ಸ್ವಲ್ಪ
* ದಪ್ಪ ಮೆಣಸಿನಕಾಯಿ –
* ಅಡುಗೆಎಣ್ಣೆ – 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್, ಮೊಟ್ಟೆ, ಹಸಿ ಮೆಣಸಿನ ಕಾಯಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿಗಳ ಪೇಸ್ಟನ್ನು ಹಾಕಿ ಅದಕ್ಕೆ 1/2 ಲೋಟ ಬಿಸಿ ನೀರನ್ನು ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಬೇಕು.
* ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಕೋಳಿ ಮಾಂಸದ ತುಂಡುಗಳನ್ನು ಈ ಮೊದಲು ತಯಾರಿಸಿದ ಮಿಶ್ರಣದಲ್ಲಿ ಚೆನ್ನಾಗಿ ನೆನೆಸಿ ಎಣ್ಣೆಯಲ್ಲಿ ಅವುಗಳನ್ನು ಬಿಡಿ. ಈಗ ಕೋಳಿ ಮಾಂಸದ ತುಂಡುಗಳನ್ನು ಡೀಪ್ ಫ್ರೈ ಮಾಡಿ.
* ತದನಂತರ ಅಡುಗೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಬಿಸಿಯಾಗಲು ಬಿಡಿ, ಇದರ ಮೇಲೆ ಶುಂಠಿ ಮತ್ತು ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಸೋಯಾ ಸಾಸ್, ಟೊಮೆಟೋ ಸಾಸ್, 1 ಕಪ್ ನೀರು ಹಾಕಿ ಮತ್ತು ನಂತರ ಫ್ರೈ ಮಾಡಿದ ಕೋಳಿ ಮಾಂಸದ ತುಂಡುಗಳನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ರುಚಿಯಾದ ಚಿಕನ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ಆರೊಗ್ಯಕ್ಕೆ ಹಾನಿ

Wed Dec 22 , 2021
ಸಕ್ಕರೆ ಖಾಯಿಲೆ ಇರುವವರಿಗೆ ಸಿಹಿ ಪದಾರ್ಥಗಳು ಒಳ್ಳೆಯದಲ್ಲ. ಬಿಪಿ ತೊಂದರೆ ಇರುವವರು ಉಪ್ಪು ಹೆಚ್ಚು ತಿನ್ನಬಾರದು. ಎಸಿಡಿಟಿ ಸಮಸ್ಯೆ ಇರುವವರು, ಗ್ಯಾಸ್ ಸಮಸ್ಯೆ ಇರುವವರು, ಕೆಲವು ಆಹಾರಗಳನ್ನು ಸೇವಿಸಬಾರದು. ಹಾಗೆಯೇ ನೆಲ್ಲಿಕಾಯಿ ಅನೇಕ ರೋಗಗಳಿಗೆ ರಾಮಬಾಣವಾದರೂ, ಈ ಕೆಳಗಿನ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ವಿಷ ತಿಂದಂತೆಯೇ ಸರಿ. ಲೋ ಬ್ಲಡ್ ಶುಗರ್ ಸಮಸ್ಯೆ ವಿಟಮಿನ್ ‘ಸಿ’ಯ ಆಗರವಾಗಿರುವ ಮತ್ತು ಕಬ್ಬಿಣ, ರಂಜಕ, ಕ್ರೋಮಿಯಂ ನಂತಹ ಖನಿಜಗಳನ್ನು ಒಳಗೊಂಡಿರುವ ನೆಲ್ಲಿಕಾಯಿ […]

Advertisement

Wordpress Social Share Plugin powered by Ultimatelysocial