ಈ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ಆರೊಗ್ಯಕ್ಕೆ ಹಾನಿ

ಈ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ಆರೊಗ್ಯಕ್ಕೆ ಹಾನಿ

ಸಕ್ಕರೆ ಖಾಯಿಲೆ ಇರುವವರಿಗೆ ಸಿಹಿ ಪದಾರ್ಥಗಳು ಒಳ್ಳೆಯದಲ್ಲ. ಬಿಪಿ ತೊಂದರೆ ಇರುವವರು ಉಪ್ಪು ಹೆಚ್ಚು ತಿನ್ನಬಾರದು. ಎಸಿಡಿಟಿ ಸಮಸ್ಯೆ ಇರುವವರು, ಗ್ಯಾಸ್ ಸಮಸ್ಯೆ ಇರುವವರು, ಕೆಲವು ಆಹಾರಗಳನ್ನು ಸೇವಿಸಬಾರದು. ಹಾಗೆಯೇ ನೆಲ್ಲಿಕಾಯಿ ಅನೇಕ ರೋಗಗಳಿಗೆ ರಾಮಬಾಣವಾದರೂ, ಈ ಕೆಳಗಿನ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ವಿಷ ತಿಂದಂತೆಯೇ ಸರಿ.

ಲೋ ಬ್ಲಡ್ ಶುಗರ್ ಸಮಸ್ಯೆ

ವಿಟಮಿನ್ ‘ಸಿ’ಯ ಆಗರವಾಗಿರುವ ಮತ್ತು ಕಬ್ಬಿಣ, ರಂಜಕ, ಕ್ರೋಮಿಯಂ ನಂತಹ ಖನಿಜಗಳನ್ನು ಒಳಗೊಂಡಿರುವ ನೆಲ್ಲಿಕಾಯಿ ತಿನ್ನುವುದರಿಂದ ಹೈ ಬ್ಲಡ್ ಶುಗರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಒಮ್ಮೆ ನಿಮ್ಮ ಬ್ಲಡ್ ಶುಗರ್ ಈಗಾಗಲೇ ಕಡಿಮೆ ಇದ್ದಲ್ಲಿ ಮತ್ತು ನೀವು ಎಂಟಿ ಡಯಾಬಿಟಿಕ್ ಮಾತ್ರೆಗಳನ್ನು ಸೇವಿಸುತ್ತಿದ್ದಲ್ಲಿ ನೆಲ್ಲಿಕಾಯಿಯನ್ನು ತಿನ್ನಲು ಹೋಗಬೇಡಿ.

ಒಮ್ಮೆ ನೀವು ಯಾವುದಾದರೂ ಸರ್ಜರಿಗೆ ಒಳಗಾಗುತ್ತಿದ್ದಲ್ಲಿ ಸರ್ಜರಿಗೆ 2 ವಾರ ಮೊದಲು ನೆಲ್ಲಿಕಾಯಿ ತಿನ್ನಬೇಡಿ. ಏಕೆಂದರೆ ನೆಲ್ಲಿಕಾಯಿ ರಕ್ತವನ್ನು ತೆಳುವಾಗಿಸುತ್ತದೆ. ಇದರಿಂದ ಸರ್ಜರಿಯ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಬಹುದು. ಇದಲ್ಲದೇ ದೀರ್ಘಕಾಲದ ರಕ್ತಸ್ರಾವದಿಂದ ಟಿಶ್ಶೂ ಹೈಪೋಕ್ಸಿಮಿಯಾ, ಸಿವಿಆರ್ ಎಸಿಡೋಸಿಸ್ ಅಥವಾ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಉಂಟಾಗಬಹುದು.

ವಿಟಮಿನ್ ‘ಸಿ’ಯ ಆಗರವಾಗಿರುವ ನೆಲ್ಲಿಕಾಯಿ ಎದೆಯುರಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಹೈಪರ್ ಎಸಿಡಿಟಿ ಸಮಸ್ಯೆ ಇರುವವರು ನೆಲ್ಲಿಕಾಯಿ ತಿಂದರೆ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ ಮತ್ತು ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು.

ನಿಮಗೆ ಡ್ರೈ ಸ್ಕಿನ್ ಮತ್ತು ಡ್ರೈ ಸ್ಕೆಲ್ಫ್ ಸಮಸ್ಯೆ ಇದ್ದರೆ ನೆಲ್ಲಿಕಾಯಿ ತಿನ್ನಬೇಡಿ. ನೆಲ್ಲಿಕಾಯಿ ತಿನ್ನುವುದರಿಂದ ತಲೆಹೊಟ್ಟು, ತುರಿಕೆ ಮತ್ತು ಕೂದಲು ಉದುರುವಿಕೆ ಉಂಟಾಗುತ್ತದೆ. ಇದರಿಂದ ಡಿಹೈಡ್ರೇಶನ್ ಸಮಸ್ಯೆ ಕೂಡ ಆಗಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಕಿತ್ತಾಡಿಕೊಂಡ ಇಬ್ಬರು ಯುವತಿಯರು

Wed Dec 22 , 2021
ವಿಶಾಖಪಟ್ಟಣಂ: ಓರ್ವ ಯುವಕನಿಗಾಗಿ ಯುವತಿಯರಿಬ್ಬರು ನಡು ರಸ್ತೆಯಲ್ಲೇ ಪರಸ್ಪರ ಕೂದಲು ಹಿಡಿದು ಎಳೆದಾಡಿ, ಕಿತ್ತಾಡಿಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳು ವಿಶಾಖಪಟ್ಟಣದ ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಯುವತಿಯರಿಬ್ಬರು ಇದ್ದಕ್ಕಿದ್ದಂತೆ ಒಬ್ಬರನೊಬ್ಬರು ನಿಂದಿಸಲು ಶುರು ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಇಬ್ಬರ ಕೂಗಾಟ ಜೋರಾಗಿದೆ. ಈ ವೇಳೆ ಅಲ್ಲಿದ್ದವರೆಲ್ಲ […]

Advertisement

Wordpress Social Share Plugin powered by Ultimatelysocial