ಅಧಿಪತಿಗಳಿಂದಲೇ ಕೂಡಿದ ಕಾಂಗ್ರೆಸ್ ಅಧಃಪತನ.

ಭಾರತದ ಸರ್ವಕಾಲಿಕ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ಕಾಂಗ್ರೆಸ್​ ಅಧಿಪತ್ಯದ ಪರ್ವವೇ ಎದುರಿಗೆ ಬರುತ್ತದೆ. ಆದರೆ ಇದೇ ತಿಂಗಳು ನಡೆದ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಪ್ರತಿಯೊಬ್ಬರು ನಿಬ್ಬೆರಗಾಗುವಂತೆ ಮಾಡಿದ್ದಂತೂ ಸುಳ್ಳಲ್ಲ. ಈ ಚುನಾವಣೆಯ ಫಲಿತಾಂಶವನ್ನು ಒಟ್ಟಾರೆಯಾಗಿ ನೋಡಿದಾಗ ಕಾಂಗ್ರೆಸ್​ ನಂಬಿದ ಜನತೆ, ಸಾಮಾನ್ಯ ಕಾರ್ಯಕರ್ತರ ಭವಿಷ್ಯ ಕೊನೆಗಾಣಿಸಿದ್ದಂತೂ ಸುಳ್ಳಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಜಯಭೇರಿ ಬಾರಿಸಿದ್ದರ ಹಿಂದೆ ಅದರ ಒಟ್ಟು 100 ವರ್ಷಗಳ ಶ್ರಮ ಅಡಗಿರುವುದನ್ನು ಕಾಂಗ್ರೆಸ್​ ಮರೆತಂತಿದೆ. ಏಕೆಂದರೆ ಆರ್​ಎಸ್​ಎಸ್​ನ 90 ವರ್ಷದ ಪ್ರತಿಫಲವೇ 2014ರಲ್ಲಿ ಬಿಜೆಪಿ ಐಸಿಹಾಸಿಕ ಗೆಲುವಿಗೆ ಕಾರಣವಾಗಿರುವುದು ಸುಳ್ಳಲ್ಲ. 2014ರ ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ 2011 ರಿಂದಲೇ ತಯಾರಿ ಮಾಡಿಕೊಳ್ಳಲಾರಂಭಿಸಿತು. 2011ರ ಮಾರ್ಚ್​ನಿಂದ ಅಣ್ಣಾ ಆಂದೋಲನ ಆರಂಭವಾಯಿತು. ಭ್ರಷ್ಟಾರದ ವಿರುದ್ಧ ಒಂದು ಪ್ರಬಲವಾದ ಆಂದೋಲನವನ್ನು ಕಟ್ಟಿ ಜನಾಭಿಪ್ರಾಯ ಕ್ರೋಢಿಕರಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿತು. ನಂತರ 2012ರಲ್ಲಿ ಬಾಬಾ ರಾಮ್​ ನೇತೃತ್ವದಲ್ಲಿ ಕಪ್ಪು ಹಣದ ವಿರುದ್ಧ ಸಮರ ಸಾರಲಾಯಿತು. ದೇಶದ ಸಂಸತ್ತು ಅಧಿವೇಶನದಲ್ಲಿಯೇ ಅಂದಿನ ರಾಷ್ಟ್ರಪತಿಯವರ ಮೂಲಕ ‘ಬ್ಲಾಕ್​ ಮನಿ ಆನ್​​ ವೈಟ್​ ಪೇಪರ್​’ ಎನ್ನುವ ಕಂಪ್ಪು ಹಣದ ಅಂದಾಜು ಲೆಕ್ಕಾಚಾರದ ಮಾಹಿತಿ ದಾಖಲೆಯನ್ನು ಹೊರ ಹಾಕಲಾಯಿತು. ಇದು ಕಪ್ಪು ಹಣದ ವಿರುದ್ಧ ನಡೆಯುತ್ತಿದ್ದ ಆಂದೋಲನಕ್ಕೆ ಆನೆ ಬಲ ನೀಡಿದ್ದಂತೂ ಸುಳ್ಳಲ್ಲ. 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಯುವ ಸಮೂಹದಲ್ಲಿ ಆಕ್ರೋಶ ಮೂಡಲ ಕಾರಣವಾದರೆ. 70 ರೂ ಆಸುಪಾಸಿನಲ್ಲಿದ್ದ ಪೆಟ್ರೋಲ್​, ಡೀಸೆಲ್​, 400 ರೂ ಸಿಲಿಂಡರ್​ ಬೆಲೆ ಎಲ್ಲವನ್ನು ತೆಗೆದುಕೊಂಡು ಮೋದಿ ನೆತೃತ್ವದಲ್ಲಿ ಬಿಜೆಪಿ ಜನರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಸುಳ್ಳಲ್ಲ.
ಆದರೆ ಇಂದು ಇದೇ ವಿಷಯಗಳನ್ನು ತೆಗೆದುಕೊಳ್ಳುವುದಾದರೆ ಕಾಂಗ್ರೆಸ್​ ಏಕೆ ವಿಫಲವಾಗುತ್ತಿದೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಇಂದು ಉತ್ತರವಿಲ್ಲ. ಅಲ್ಲದೆ ಕಳೆದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ಸಿನ ಸೋಲುಗಳ ಬಳಿಕವೂ ಕಾಂಗ್ರೆಸ್​ ಕಲಿತಿರುವ ಪಾಠ ಶೂನ್ಯ. ಈಗಲೂ ಅಷ್ಟೇ ಈ ಸೋಲಿನಿಂದ ಕಾಂಗ್ರೆಸ್​ ಏನಾದರೂ ಪಾಠ ಕಲಿಯಿತೇ..? ಇಲ್ಲ.. ಸದ್ಯದ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಹಾಗೆ ಕಾಣುತ್ತಿಲ್ಲ.
ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಚುನಾವಣಾ ಸಿದ್ದತೆಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಕಾಂಗ್ರೆಸ್ಸಿನದ್ದು ಒಂದು ಸಮಯದ ಹೂಡಿಕೆಯ ರಾಜಕೀಯವಾದರೆ. ಬಿಜೆಪಿಯದ್ದು ನಿರಂತರವಾದ ಹೂಡಿಕೆ, ತಂತ್ರಗಾರಿಕೆ ಕೆಲಸ ಮಾಡುತ್ತಿದೆ. ಸದ್ಯ ಕಾಂಗ್ರೆಸ್​ನಲ್ಲಿ ಕೇವಲ ಅಧಿಪತಿಗಳು ಮಾತ್ರವೇ ಉಳಿದುಕೊಂಡಿರುವುದರಿಂದ ಅಧಿಪತ್ಯ ಸಾಧಿಸಲು ಸಾಧ್ಯವಾಗದೆ ಮೇಲಿಂದ ಮೇಲೆ ಸೋಲನ್ನಪ್ಪುತ್ತಿದೆ. ಏಕೆಂದರೆ ಕಾಂಗ್ರೆಸ್ಸಿನಲ್ಲಿ ಜನಾಭಿಪ್ರಾಯ ಕ್ರೋಢಿಕರಿಸುವ, ಸರ್ಕಾರದ ವಿಫಲತೆಗಳ ವಿರುದ್ಧ ಜನರ ಆಕ್ರೋಶ ಹೊರಗೆಳೆಯಬಲ್ಲ ಯಶಸ್ವಿ ಜನನಾಯಕರಿಲ್ಲ. ಇದ್ದರೂ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಶಕ್ತಿ ಕಾಂಗ್ರೆಸ್ಸಿಗಿಲ್ಲ. ಎಡಪಂಥೀಯ ಪಕ್ಷದಲ್ಲಿದ್ದು ಜನರ ನಡುವಿದ್ದ ಕನ್ಹಯ್ಯ ಕುಮಾರ್​, ದಲಿತ ನಾಯಕ ಜಿಗನೇಶ್​ ಮೇವಾನಿ, ಹಾರ್ದಿಕ್ ಪಟೇಲ್ ಇವರೆಲ್ಲ ಎಲ್ಲಿ ಕಳೆದು ಹೋದರು ಎನ್ನುವುದೇ ಗೊತ್ತಾಗಲಿಲ್ಲ.

ಅಸಲಿಗೆ ಖುದ್ದು ಕಾಂಗ್ರೆಸ್ಸಿನ ಹಿರಿಯ ನಾಯಕರಿಗೇ ಬಿಜೆಪಿಯನ್ನು ಹೇಗೆ ಎದುರಿವುದು ಎನ್ನುವುದು ತಿಳಿಯುತ್ತಿಲ್ಲ. ಕೆಲವರಿಗೆ ತಿಳಿದಿದ್ದರೂ ಏನೂ ಮಾಡಲಾಗುತ್ತಿಲ್ಲ. ಏಕೆಂದರೆ ಪ್ರತಿ ಚುನಾವಣೆಗಳು ಕ್ರಾಂತಿಕಾರಿ ಬದಲಾವಣೆ ತರಬಲ್ಲ ನಾಯಕರಿಗಾಗಿ ಎದುರು ನೋಡುತ್ತದೆ ಆದರೆ ಅಂತಹ ನಾಯಕರನ್ನು ನೀಡುವುದರಲ್ಲಿ ಕಾಂಗ್ರೆಸ್​ ವಿಫಲವಾಗುತ್ತಿದೆ. ಕಾಂಗ್ರೆಸ್ಸಿಗೂ ಇದೆಲ್ಲ ಗೊತ್ತಿದೆ ಆದರೆ ಮಹತ್ತರವಾದ ಈ ಬದಲಾವಣೆಗಳಿಗೆ ಅನೇಕ ಹೂಡಿಕೆ ಮಾಡುವ ಧನಿಕ ನಾಯಕರನ್ನು ಕಳೆದುಕೊಳ್ಳ ಬೇಕಾಗುತ್ತದೆ. ಅದಕ್ಕೆ ಕಾಂಗ್ರೆಸ್​ ಸದ್ಯ ತಯಾರಿಲ್ಲ, ಇದಕ್ಕಾಗಿ ಕಾಂಗ್ರೆಸ್​ ನಂಬಿದ ಅನೇಕ ಯುವ ನಾಯಕರ ಭವಿಷ್ಯ ಅತಂತ್ರವಾದರೆ. ಕಾಂಗ್ರೆಸ್​ ಕಾರ್ಯಕರ್ತರ ಭವಿಷ್ಯವೂ ಅಧಿಪತಿಗಳಿಂದ ಅಧಃಪತನದತ್ತ ಸಾಗುತ್ತಿದೆ. ಏಕೆಂದರೆ ಪಂಜಾಬ್​ ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ಸಿಗೆ ಐತಿಹಾಸಿಕ ಪಾಠವಾಗಿದೆ. ಒಂದೆಡೆ ಬಂಜಾಬ್​ನ ಹಾಲಿ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್​ ಚನ್ನಿ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಸೋಲನ್ನಪ್ಪಿದರೆ, ಮಾಜಿ ಮುಖ್ಯಮಂತ್ರಿ, ರಾಜ್ಯ ಅಧ್ಯಕ್ಷರು ಎಲ್ಲರೂ ಸೋಲನ್ನಪ್ಪಿರುವುದು ಕಾಂಗ್ರೆಸ್​ ಅಳಿವಿನತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ. ಆದಾಗ್ಯೂ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರ ಆಮ್​ಆದ್ಮಿ ಪಕ್ಷ 2024ರ ಲೋಕಸಭಾ ಚುನಾವಣೆಗೆ ಪ್ರಬಲ ವಿರೋಧ ಪಕ್ಷವಾಗಿ ಹೊರ ಹೊಮ್ಮುವತ್ತ ಸಾಗುತ್ತಿದ್ದು ಹೊಸತನ ಚಿಗುರೊಡೆಯುವ ಸಾದ್ಯತೆ ಪ್ರಬಲವಾಗಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಬ್ರಹ್ಮಾಸ್ತ್ರ' ಚಿತ್ರದ ಆಲಿಯಾ ಭಟ್ ಪಾತ್ರದ ಫಸ್ಟ್ ಲುಕ್ ಹೊರಬಿದ್ದಿದೆ!

Tue Mar 15 , 2022
ಮಂಗಳವಾರ ಆಲಿಯಾ ಭಟ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಮುಂಬರುವ ಚಿತ್ರ ‘ಬ್ರಹ್ಮಾಸ್ತ್ರ’ ನಿರ್ಮಾಪಕರು ಚಿತ್ರದ ನಟಿಯ ಫಸ್ಟ್ ಲುಕ್ ಅನ್ನು ಪ್ರಸ್ತುತಪಡಿಸಿದ್ದಾರೆ. 2012 ರಲ್ಲಿ ಆಲಿಯಾ ಅವರನ್ನು ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಿಡುಗಡೆ ಮಾಡಿದ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು Instagram ಗೆ ಕರೆದೊಯ್ದರು, ಅಲ್ಲಿ ಅವರು ಆಲಿಯಾ ಪಾತ್ರದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಜೊತೆಗೆ ಅವರು ಸುದೀರ್ಘ ಪೋಸ್ಟ್ ಅನ್ನು ಬರೆದಿದ್ದಾರೆ. ಅವರು […]

Advertisement

Wordpress Social Share Plugin powered by Ultimatelysocial