ಪ್ರಭಾ ಮಟಮಾರಿ ಅವರು ಬರಹಗಾರತಿ.

ಪ್ರಭಾ ಮಟಮಾರಿ ಅವರು ಬರಹಗಾರರಾಗಿ, ಕನ್ನಡ ನಾಡಿನ ಹೊರಗಿನ ಹೈದರಾಬಾದಿನಲ್ಲಿ ಸಕ್ರಿಯ ಕನ್ನಡ ರಾಯಭಾರಿಯಾಗಿ ಮತ್ತು ಬಹುಭಾಷಾ ಸಂಸ್ಕೃತಿಗಳ ಸಕ್ರಿಯ ಸೇತುವೆಯಾಗಿ ಮಹತ್ವದ ಕಾರ್ಯಾಮಾಡುತ್ತಾ ಬಂದಿದ್ದಾರೆ.ಪ್ರಭಾ ಅವರು 1943ರ ಫೆಬ್ರವರಿ 6ರಂದು ನವಲಗುಂದದಲ್ಲಿ‌ ಜನಿಸಿದರು. ತಂದೆ ಧಾರವಾಡದ ಸುಪ್ರಸಿದ್ಧ ವಕೀಲರಾದ ಬಿ.ಜಿ. ವೈದ್ಯರು. ಮನೆಯ ಸುಸಂಪನ್ನ ಮತ್ತು ಸಾಹಿತ್ಯಿಕ ವಾತಾವರಣ ಅವರ ಬೆಳವಣಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿತು. ತಂದೆ ಬಿ.ಜಿ.ವೈದ್ಯರು “ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ” ಸಕ್ರಿಯರಾಗಿದ್ದರು. ಹೀಗಾಗಿ ಹೆಸರಾಂತ ಸಾಹಿತಿ ಗಳೆಲ್ಲ ಮನೆಗೆ ಬರುತ್ತಿದ್ದರು. ಬೇಂದ್ರೆ, ಗೋಕಾಕ, ಮುಗಳಿ, ಬೆಟಗೇರಿ ಕೃಷ್ಣಶರ್ಮಾ ಮುಂತಾದವರೆಲ್ಲ ತಂದೆಯವರ ಅಪ್ತ ಸ್ನೇಹಿತರು. ಸುಪ್ರಸಿದ್ಧ ಕನ್ನಡ ಸಾಹಿತಿಗಳಾದ ಶ್ರೀನಿವಾಸ ವೈದ್ಯರು ಪ್ರಭಾ ಅವರ ಅಣ್ಣ. ಪ್ರಭಾ ಅವರ ವಿದ್ಯಾಭ್ಯಾಸ ಹಾಗೂ ವಿವಾಹ ಪೂರ್ವದ ಜೀವನವೆಲ್ಲ ಧಾರವಾಡಲ್ಲಿ ನಡೆಯಿತು. 1949ಕ್ಕೆ ಇವರ ಪ್ರಾಥಮಿಕ ಶಿಕ್ಷಣ ಆರಂಭವಾಯಿತು. ರೊದ್ದ ಶ್ರೀನಿವಾಸರಾಯರ ಮನೆಗಂಟಿದಂತಿದ್ದ ಇವರ ಶಾಲೆಯ ಮೊದಲ ಹೆಸರು “ಕನ್ನಡ ಒಂದನೇ ನಂ ಪ್ರಾಥಮಿಕ ಶಾಲೆ” ಎಂದಾಗಿತ್ತು. ನಂತರದಲ್ಲಿ ಅದರ ಹೆಸರು ಕನ್ನಡ ವೀರಾಗ್ರಣಿ ಪ್ರಾಥಮಿಕ ಶಾಲೆ ಎಂದು ಬದಲಾಯಿತು. ಮಾಧ್ಯಮಿಕ ಶಾಲೆ “ಆಂಗ್ಲೋ ಕನ್ನಡ ಗರ್ಲ್ಸ್ ಹೈಸ್ಕೂಲ” ಎಂದೇ ಇತ್ತು. ಇನ್ನೂ ಅಂಗ್ರೇಜಿಗಳ ಪ್ರಭಾವ ಆ ಪರಿಸರದಲ್ಲೆಲ್ಲ ಎದ್ದು ಕಾಣುತ್ತಿತ್ತು. ಸ್ಕೂಲಿನ ಎದುರುಗಡೆಯೇ ವಿಶಾಲವಾದ ಕಲೆಕ್ಟರ್ಸ್ ಬಂಗಲೋ, ಸ್ಕೂಲಿನ ಪಕ್ಕಕ್ಕೇ “ಕಾನ್ವೆಂಟ್” ಶಾಲೆ ಇದ್ದುದರಿಂದ ಆ ಪರಿಸರವೆಲ್ಲಾ ಅಂಗ್ರೇಜಿಗಳದೇ ಆಗಿತ್ತು. ಹೀಗಾಗಿ ಎರಡೂ ದೇಶಗಳ ರೀತಿ ನೀತಿಗಳನ್ನು ಅಂದಿನ ದಿನಗಳಲ್ಲಿ ಅನುಸರಿಸ ಬೇಕಾಗುತ್ತಿತ್ತು. ಕ್ರಮೇಣ ಭಾರತೀಯ ಪದ್ದತಿಗಳ ಶಾಲೆ ಕಾಲೇಜುಗಳು ಬಂದವು. ಮುಂದೆ ಪ್ರಭಾ ಅವರು ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.ಪ್ರಭಾ ಮಟಮಾರಿ ಅವರ ಅಣ್ಣ ಶ್ರೀನಿವಾಸ ವೈದ್ಯರ ಸಾಹಿತ್ಯಿಕ ಅಭಿರುಚಿ‌ ಬೆಳೆಯಲು ಮನೋಹರ ಗ್ರಂಥಮಾಲಾ ಮೂಲವಾಗಿತ್ತು. ಶ್ರೀನಿವಾಸ ವೈದ್ಯರಿಗೆ ಗಿರೀಶ್ ಕಾನಾಡ್, ಕೀರ್ತಿನಾಥ ಕುರ್ತಕೋಟಿ ಅವರೊಡನೆ ಆಪ್ತ ಸ್ನೇಹವಿತ್ತು. ಹೀಗಾಗಿ ಶ್ರೀಮತಿ ಪ್ರಭಾ ಅವರಿಗೆ ಪುಸ್ತಕ ಓದುವ ಗೀಳು ಜೊತೆಗೂಡಿತು. ಇವರ ತಾಯಿಯ ತಂದೆಯವರು “ಕರ್ನಾಟಕ ಏಕೀಕರಣ‌ ” ಚಳುವಳಿಕಾರ ಶ್ರೀ ರಾಮರಾವ್ ನರಗುಂದಕರ ಅವರು ದ.ರಾ.ಬೇಂದ್ರೆ ಅವರ ಸ್ನೇಹಿತರಾದರೆ, ಆಲೂರ ವೆಂಕಟರಾಯರು ಅವರ ಗುರುಗಳು. ಪ್ರಭಾ ಅವರ ತಾಯಿ ಕೂಡ ಓದುವ ಗೀಳಿದ್ದವರು. ಹೀಗಾಗಿ ಪ್ರಭಾ ಅವರ ಬರಹಗಳು ಹಲವಾರು ಮಾಸಪತ್ರಿಕೆ, ಮತ್ತು ವಾರಪತ್ರಿಕೆಗಳಲ್ಲಿ ಮೂಡುತ್ತಿತ್ತು. ಜೊತೆಗೆ ತಾವು ಓದಿದ ಲೇಖನಗಳ ಕುರಿತು ತಮ್ಮದೇ ಆದ ಅಭಿಪ್ರಾಯ ಬರೆದಿಡುವದೂ ಇವರ ನಿತ್ಯದ ರೂಢಿಯಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

*ಚಾಂಗಲೇರಾ, ಉಡಮನಳ್ಳಿ ಗ್ರಾಮ ಸಂಚಾರ ನಡೆಸಿದ ಶಾಸಕ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ,

Mon Feb 6 , 2023
*ಚಾಂಗಲೇರಾ, ಉಡಮನಳ್ಳಿ ಗ್ರಾಮ ಸಂಚಾರ ನಡೆಸಿದ ಶಾಸಕ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ಸಂತ್ರಸ್ತ ಕುಟುಂಬಗಳಿಗೆ ವೈಯಕ್ತಿಕ ಪರಿಹಾರ ವಿತರಣೆ ಮಾಡಿದ ಬಂಡೆಪ್ಪ ಖಾಶೆಂಪುರ್ * ಬೀದರನ ದಕ್ಷಿಣ ವಿಧಾನಸಭಾ ಕ್ಷೇತ್ರದ ಚಾಂಗಲೇರಾದ ವಿರಭದ್ರೆಶ್ವ ದೇವಸ್ಥಾನದಲ್ಲಿ ಹುಣ್ಣುಮೆ ನಿಮಿತ್ತ ವಿಶೇಷ ಪೂಜೆಯನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಚಾಂಗಲೇರಾ ಮತ್ತು […]

Advertisement

Wordpress Social Share Plugin powered by Ultimatelysocial