*ಚಾಂಗಲೇರಾ, ಉಡಮನಳ್ಳಿ ಗ್ರಾಮ ಸಂಚಾರ ನಡೆಸಿದ ಶಾಸಕ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ,

*ಚಾಂಗಲೇರಾ, ಉಡಮನಳ್ಳಿ ಗ್ರಾಮ ಸಂಚಾರ ನಡೆಸಿದ ಶಾಸಕ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ಸಂತ್ರಸ್ತ ಕುಟುಂಬಗಳಿಗೆ ವೈಯಕ್ತಿಕ ಪರಿಹಾರ ವಿತರಣೆ ಮಾಡಿದ ಬಂಡೆಪ್ಪ ಖಾಶೆಂಪುರ್

* ಬೀದರನ ದಕ್ಷಿಣ ವಿಧಾನಸಭಾ ಕ್ಷೇತ್ರದ ಚಾಂಗಲೇರಾದ ವಿರಭದ್ರೆಶ್ವ ದೇವಸ್ಥಾನದಲ್ಲಿ ಹುಣ್ಣುಮೆ ನಿಮಿತ್ತ ವಿಶೇಷ ಪೂಜೆಯನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಚಾಂಗಲೇರಾ ಮತ್ತು ಉಡಮನಳ್ಳಿ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿದ ಅವರು, ಮೊದಲಿಗೆ ಸುಕ್ಷೇತ್ರ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ಕೆಕೆಆರ್ಡಿಬಿ ಯೋಜನೆಯಡಿಯಲ್ಲಿ ಸುಮಾರು 1.25 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಲಿರುವ ಯಾತ್ರಿ ನಿವಾಸಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಕೆಕೆಆರ್ಡಿಬಿಯ ಮೈಕ್ರೋ ಯೋಜನೆಯಡಿಯಲ್ಲಿ ಸುಮಾರು 50 ಲಕ್ಷ ರೂ.ಗಳಲ್ಲಿ ನಿರ್ಮಾಣವಾದ ಮಂದಿರದ ಕೂಡು ರಸ್ತೆ ಅಗಲೀಕರಣ ಮತ್ತು ಸುಧಾರಣೆ ಕಾಮಗಾರಿಯನ್ನು ಉದ್ಘಾಟಿಸಿದರು. ನಂತರ ಚಾಂಗಲೇರಾದ ಅಂಬೇಡ್ಕರ್ ಸರ್ಕಲ್ ನಿಂದ ನೆಹರು ಸರ್ಕಲ್ ಹಾಗೂ ನೆಹರು ಸರ್ಕಲ್ ನಿಂದ ಹೊಸ ಗ್ರಾಮ ಪಂಚಾಯತಿ ಕಾರ್ಯಾಲಯದವರೆಗೆ ಕೆಕೆಆರ್ಡಿಬಿ ಯೋಜನೆಯಡಿಯಲ್ಲಿ ಸುಮಾರು 16.13 ಲಕ್ಷ ರೂ.ಗಳಲ್ಲಿ ನಿರ್ಮಾಣವಾದ ಸಿಸಿ ರಸ್ತೆ ಉದ್ಘಾಟಿಸಿದರು. ಬಳಿಕ ಚಾಂಗಲೇರಾ ಮತ್ತು ಇತರೆ 15 ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುಮಾರು 100.50 ಹಾಗೂ 104.35 ಲಕ್ಷ ರೂ. ಗಳಲ್ಲಿ ನಿರ್ಮಾಣವಾದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಉದ್ಘಾಟಿಸಿದರು.
ಇದೇ ವೇಳೆ ಚಾಂಗಲೇರಾದ ಮುಸ್ಲಿಂ ಸಮುದಾಯದ ಮುಖಂಡ ಸಭೆಯಲ್ಲಿ ಪಾಲ್ಗೊಂಡು, ಗ್ರಾಮದಲ್ಲಿನ ಚರ್ಚ್ ಗಳಿಗೆ ಭೇಟಿ ನೀಡಿದರು. ಇದೇ ವೇಳೆ ವಿವಿಧ ಘಟನೆಗಳಲ್ಲಿ ಮೃತಪಟ್ಟ ಅನೇಕರ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ಧನಸಹಾಯ ಮಾಡಿ ಸಾಂತ್ವನ ಹೇಳಿದರು.. ಇದೇ ವೇಳೆ ಎರಡು ಗ್ರಾಮಗಳಲ್ಲಿ ಅನೇಕರು ವಿವಿಧ ಪಕ್ಷಗಳನ್ನು ತೊರೆದು ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಸಮಂಧಪಟ್ಟ ಅಧಿಕಾರಿಗಳು ಉಪಸ್ಥಿತ್ತಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲತಾ ಮಂಗೇಶ್ಕರ್ ‘ಗಾನಕೋಗಿಲೆ’

Mon Feb 6 , 2023
‘ಗಾನಕೋಗಿಲೆ’ ಎಂಬ ಮಾತನ್ನು ಬಹಳಷ್ಟು ಗಾಯಕರ ಬಗ್ಗೆ ಹೇಳುತ್ತೇವೆ. ನಮ್ಮ ದೇಶದ ನರನಾಡಿಗಳಲ್ಲಿ ಗಾನದ ಹೃದಯನಾದವನ್ನು ಮಿಡಿದ ಮಹಾನ್ ಗಾಯಕಿ ಲತಾಮಂಗೇಶ್ಕರ್ ಅವರು ಕೋಗಿಲೆಯ ಸರ್ವಶ್ರೇಷ್ಠತೆಗೆ ಅನುರೂಪವಾಗಿದ್ದವರು. ಲತಾ ಮಂಗೇಶ್ಕರ್ ಜನಿಸಿದ್ದು 1929ರ ಸೆಪ್ಟೆಂಬರ್ 28ರಂದು. ಶಾಸ್ತ್ರೀಯ ಸಂಗೀತಕಾರ ಮತ್ತು ರಂಗನಟ ಪಂಡಿತ್ ದೀನನಾಥ ಮಂಗೇಶ್ಕರ್ ಅವರ ಪುತ್ರಿಯಾದ ಲತಾ ಅವರ ಮೊದಲ ಹೆಸರು ‘ಹೇಮಾ’ ಎಂದಿತ್ತು. ತಂದೆಯವರಿಗೆ ತಮ್ಮ ಮಗಳ ಬಹುಮುಖ ಪ್ರತಿಭೆಯ ಕುರಿತು ಅತ್ಯಂತ ಹೆಮ್ಮೆ ತುಂಬಿತ್ತು. […]

Advertisement

Wordpress Social Share Plugin powered by Ultimatelysocial