ಬ್ರಿಟನ್​ ಪ್ರಧಾನಿ ರೇಸ್​ನಲ್ಲಿ ರಿಷಿ ಸುನಕ್ ಮುನ್ನಡೆ: ಮೊದಲ ಸುತ್ತಿನಲ್ಲಿ ಹೆಚ್ಚು ಮತ ಪಡೆದ ಇನ್ಫಿ ಮೂರ್ತಿ ಅಳಿಯ

 

ಲಂಡನ್​: ಬೋರಿಸ್​ ಜಾನ್ಸನ್​ ರಾಜೀನಾಮೆ ಬಳಿಕ ಬ್ರಿಟನ್​ ಪ್ರಧಾನಿ ಹುದ್ದೆಗೆ ತೀವ್ರ ಪೈಪೋಟಿ ಶುರುವಾಗಿದೆ. ಮುಂದಿನ ಬ್ರಿಟನ್​ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲದ ನಡುವೆಯೇ ಪ್ರಧಾನಿ ರೇಸ್​ನಲ್ಲಿ ಭಾರತೀಯ ಮೂಲದ ಬ್ರಿಟನ್​ ಸಂಸದ, ಮಾಜಿ ಹಣಕಾಸು ಸಚಿವ ಹಾಗೂ ಇನ್ಫೋಸಿಸ್​ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್​ ಮುಂಚೂಣಿಯಲ್ಲಿದ್ದಾರೆ.

ಬೋರಿಸ್​ ಜಾನ್ಸನ್​ ಅವರ ಉತ್ತರಾಧಿಕಾರಿ ಮತ್ತು ಕನ್ಸರ್ವೇಟಿವ್​ ಪಕ್ಷದ ನಾಯಕ ಹಾಗೂ ಯುನೈಟೆಡ್​ ಕಿಂಗ್​ಡಮ್​ನ ಪ್ರಧಾನಿ ಸ್ಥಾನಕ್ಕೆ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ಹೆಚ್ಚು ಮತ (88)ಗಳನ್ನು ಪಡೆಯುವ ಮೂಲಕ ರಿಷಿ ಸುನಕ್​ ಮೊದಲ ಸ್ಥಾನದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಇಬ್ಬರು ಅಭ್ಯರ್ಥಿಗಳು ಎಲಿಮಿನೇಟ್​ ಆಗಿದ್ದಾರೆ.

ಹೊಸದಾಗಿ ಆಯ್ಕೆಯಾಗಿರುವ ಚಾನ್ಸಲರ್​ ನಧೀಮ್​ ಝಹಾವಿ ಮತ್ತು ಮಾಜಿ ಕ್ಯಾಬಿನೆಟ್​ ಸಚಿವ ಜೆರೆಮಿ ಅವರು ಪ್ರಧಾನಿ ಹುದ್ದೆಯ ರೇಸ್​ನಲ್ಲಿದ್ದರು. ಆದರೆ, ಅವರ ಆಸೆ, ಆಯ್ಕೆ ಪ್ರಕ್ರಿಯೆ ವೇಳೆ ನಿರಾಸೆಯಾಗಿದೆ. ಏಕೆಂದರೆ, ಅಗತ್ಯವಿರುವ ಕನಿಷ್ಠ 30 ಸಂಸದರ ಮತಗಳನ್ನು ಪಡೆಯುವಲ್ಲಿ ಇಬ್ಬರು ವಿಫಲವಾಗಿದ್ದಾರೆ. ಇದೇ ಸಂದರ್ಭದಲ್ಲಿ ಇತರೆ ಪ್ರಮುಖ ಸ್ಪರ್ಧಿಯಾಗಿರುವ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು 50 ಮತಗಳನ್ನು ಪಡೆದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.

ಆಯ್ಕೆ ಪ್ರಕ್ರಿಯೆ ಸ್ಪರ್ಧೆಯ ಆರಂಭಿಕ ಹಂತದಲ್ಲಿ ರಿಷಿ ಸುನಕ್​, ವ್ಯಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್​ ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ನಡುವೆ ತೀವ್ರ ಪೈಪೋಟಿ ಇದ್ದರೂ, ರಿಷಿ ಅವರಿಗೆ ಪ್ರಧಾನಿ ಸ್ಥಾನದ ಬಾಗಿಲು ವಿಶಾಲವಾಗಿ ತೆರೆದಿರುವಂತೆ ಕಾಣುತ್ತಿದೆ. ಏಕೆಂದರೆ ಮೊದಲ ಸುತ್ತಿನಲ್ಲಿ ಹೆಚ್ಚು ಮತಗಳನ್ನು ರಿಷಿ ಪಡೆದುಕೊಂಡಿದ್ದಾರೆ.

ಎಲ್ಲ ಸುತ್ತಿನಲ್ಲಿ ಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿಯು ಸೆಪ್ಟೆಂಬರ್ 5 ರಂದು ಹೊಸ ಕನ್ಸರ್ವೇಟಿವ್ ಪಕ್ಷದ ನಾಯಕ ಹಾಗೂ ಬ್ರಿಟನ್​ ಪ್ರಧಾನ ಮಂತ್ರಿಯಾನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಬೋರಿಸ್​ ಜಾನ್ಸನ್​ ರಾಜೀನಾಮೆ
ಸಮರ್ಪಕ ಆಡಳಿತ ನೀಡುತ್ತಿಲ್ಲ ಎಂದು ಬೋರಿಸ್​​​​ ಜಾನ್ಸನ್​ ವಿರುದ್ಧ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕದಲ್ಲೇ ಭಾರೀ ಅಸಮಾಧಾನವಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದರೂ ಬೋರಿಸ್​ ಮಾತ್ರ ಮಣಿದಿರಲಿಲ್ಲ. ಇವರ ಸಂಪುಟದಲ್ಲೇ ಸ್ಫೋಟಗೊಂಡ ಅಸಮಾಧಾನದ ಪರಿಣಾಮ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ರಾಜೀನಾಮೆ ನೀಡಿದ್ದರು. ಯುಕೆ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ಸುನಕ್​ ಕೂಡ ರಾಜೀನಾಮೆ ನೀಡಿದ್ದರು. ಸರಣಿ ರಾಜೀನಾಮೆಯಿಂದ ಇಕ್ಕಟ್ಟಿಗೆ ಸಿಲುಗಿದ್ದ ಬೋರಿಸ್​​​​ ಜಾನ್ಸನ್​, ಕೊನೆಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿದ್ದೇನೆ ಎಂದು ಗುರುವಾರ (ಜುಲೈ 7) ಮಧ್ಯಾಹ್ನ ಘೋಷಿಸಿದ್ದರು. ಇದಾದ ಕೆಲವೇ ಗಂಟೆಯಲ್ಲೇ ರಾಜೀನಾಮೆ ನೀಡಿದ್ದಾರೆ.

ಬೋರಿಸ್​​​​ ಜಾನ್ಸನ್​ ಅವರ ಬಳಿಕ ನೂತನ ಪ್ರಧಾನಿ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಆರಂಭದಿಂದಲೂ ಭಾರತ ಮೂಲದ ರಿಷಿ ಸುನಾಕ್ ಅವರು ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಮೊದಲ ಸುತ್ತಿನಲ್ಲಿ ಹೆಚ್ಚು ಮತಗಳನ್ನು ಪಡೆದಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.

2020ರ ಫೆಬ್ರವರಿಯಲ್ಲಿ ಬ್ರಿಟನ್​ನ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ರಿಷಿ ಸುನಾಕ್, 2020ರಲ್ಲಿ ಕೋವಿಡ್​ ಭೀತಿಯ ಮಧ್ಯೆಯೂ ಮಂಡಿಸಿದ ಮೊದಲ ಬಜೆಟ್​ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಕೋವಿಡ್​ನಂತಹ ಸಂಕಷ್ಟ ಕಾಲದಲ್ಲಿ ಆರ್ಥಿಕ ಉತ್ತೇಜನಕ್ಕಾಗಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ರಿಷಿ ಸುನಾಕ್ ಜಾರಿಗೆ ತಂದಿದ್ದರು. ಯುವ ನಾಯಕ ರಿಷಿ ಸುನಕ್​ ಅವರಿಗೆ ಕನ್ಸರ್ವೇಟಿವ್ ಪಕ್ಷದಲ್ಲಿ ಒಳ್ಳೆಯ ಬೆಂಬಲವಿದೆ. ಸಾರ್ವಜನಿಕರ ವಲಯದಲ್ಲೂ ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ ಬ್ರಿಟನ್​ನ ಪ್ರಧಾನಿಯಾಗಿ ರಿಷಿ ಸುನಾಕ್​ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಇವರ ಜತೆಗೆ ಇನ್ನೂ ಹಲವರು ಪ್ರಧಾನಿ ರೇಸ್​ನಲ್ಲಿದ್ದು, ಇನ್ನೆ ಕೆಲವೇ ದಿನಗಳಲ್ಲಿ ಸ್ಟಷ್ಟ ಉತ್ತರ ಸಿಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಾಜ್‍ಮಹಲ್ ನಿರ್ಮಿಸಲು ಶಾಜಹಾನ್ ಕೊಟೇಶನ್ ಪಡೆದಿರಲಿಲ್ಲ ಎಂದ ಗೋವಾ ಸಚಿವ!

Thu Jul 14 , 2022
ಪಣಜಿ: ಇಲ್ಲಿನ ಆಕರ್ಷಕ ಕಲಾ ಅಕಾಡೆಮಿ ಕಟ್ಟಡದ ನವೀಕರಣ ಕಾಮಗಾರಿ ಹಂಚಿಕೆಗೆ ಇಲಾಖೆ ಕೈಗೊಂಡ ಕ್ರಮವನ್ನು ಸಮರ್ಥಿಸುವ ಭರದಲ್ಲಿ ಗೋವಾ ಕಲಾ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ್ ಗೌಡೆ ಬುಧವಾರ, “ಶಾಜಹಾನ್ ತಾಜ್‍ಮಹಲ್ ನಿರ್ಮಿಸಲು ಕೊಟೇಶನ್ ಪಡೆದಿದ್ದರೇ” ಎಂದು ಪ್ರಶ್ನಿಸಿದ್ದಾರೆ. ರಾಜ್ಯ ರಾಜಧಾನಿಯ ಕಲಾ ಅಕಾಡೆಮಿ ಕಟ್ಟಡವನ್ನು 49 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲು ಕಾರ್ಯಾದೇಶ ನೀಡುವ ವೇಳೆ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ) […]

Advertisement

Wordpress Social Share Plugin powered by Ultimatelysocial