OPPO A16K:ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ ಒಪ್ಪೋ A 16K ಸ್ಮಾರ್ಟ್‌ಫೋನ್‌;

ಒಪ್ಪೋ ಕಂಪೆನಿ ಭಾರತದಲ್ಲಿ ಈಗಾಗಲೇ ಬಜೆಟ್‌ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಒಪ್ಪೋ A ಸರಣಿಯಲ್ಲಿನ ಫೋನ್‌ಗಳು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿವೆ. ಇದರ ಮುಂದುವರಿದ ಭಾಗವಾಗಿ ಒಪ್ಪೋ ಸಂಸ್ಥೆಯು ಒಪ್ಪೋ A 16K ಸ್ಮಾರ್ಟ್‌ ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ.

ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಹೌದು, ಒಪ್ಪೋ ಕಂಪನಿಯು ಭಾರತದಲ್ಲಿ ಒಪ್ಪೋ A 16K ಸ್ಮಾರ್ಟ್‌ಫೋನ್‌ ಅನ್ನು ಜನೆವರಿಯಲ್ಲಿ ಲಾಂಚ್ ಮಾಡಲಿದೆ ಎಂದು ಹೇಳಲಾಗಿದೆ. ಈ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಜೊತೆಗೆ ಈ ಫೋನ್ 4,230mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ ಒಪ್ಪೋ A 16K ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷತೆ ಹೊಂದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ;

ಒಪ್ಪೋ A 16K ಸ್ಮಾರ್ಟ್‌ಫೋನ್‌ 1,600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ HD+ ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇ IPS LCD ಡಿಸ್‌ಪ್ಲೇ ಆಗಿದ್ದು, 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು 269 ಪಿಕ್ಸೆಲ್‌ ಸಾಂದ್ರೆತಯನ್ನು ಒಳಗೊಂಡಿದೆ.

ಪ್ರೊಸೆಸರ್‌ ಬಲ ಯಾವುದು;

ಒಪ್ಪೋ A 16K ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 11 ನಲ್ಲಿ ColorOS 11.1 ಲೈಟ್ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 3GB RAM ಮತ್ತು 32GB ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್‌ ಬೆಂಬಲದೊಂದಿಗೆ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಸಿಂಗಲ್ ಕ್ಯಾಮೆರಾ ಸೆನ್ಸಾರ್;

ಒಪ್ಪೋ A 16K ಸ್ಮಾರ್ಟ್‌ಫೋನ್‌ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಅಲ್ಲದೆ ಇದು 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು;

ಒಪ್ಪೋ A 16K ಸ್ಮಾರ್ಟ್‌ಫೋನ್‌ 4,230mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಇದು 5V/ 2A ಚಾರ್ಜಿಂಗ್‌ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5, 3.5mm ಹೆಡ್‌ಫೋನ್ ಜ್ಯಾಕ್, GPS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಸೂಪರ್ ಪವರ್ ಸೇವಿಂಗ್ ಮೋಡ್, ನೈಟ್ ಫಿಲ್ಟರ್‌ಗಳು ಮತ್ತು ಆಪ್ಟಿಮೈಸ್ಡ್ ನೈಟ್ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ.

ಇನ್ನು ಕೆಲ ತಿಂಗಳುಗಳ ಹಿಂದೆ ಒಪ್ಪೋ ಕಂಪೆನಿ ಭಾರತದಲ್ಲಿ ತನ್ನ ಒಪ್ಪೋ A16 ಫೋನ್‌ ಬಿಡುಗಡೆ ಮಾಡಿತ್ತು. ಇದು 6.52- ಇಂಚಿನ HD + ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ G35SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಒಪ್ಪೋ A16 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡಿಸಿಗಳ ಜೊತೆ ಸಿಎಂ ಬೊಮ್ಮಾಯಿ ಮೀಟಿಂಗ್‌ | Basavaraj Bommai | Cm Meeting | Speed News |

Fri Dec 31 , 2021
ಡಿಸಿಗಳ ಜೊತೆ ಸಿಎಂ ಬೊಮ್ಮಾಯಿ ಮೀಟಿಂಗ್‌ | Basavaraj Bommai | Cm Meeting | Speed New Please follow and like us:

Advertisement

Wordpress Social Share Plugin powered by Ultimatelysocial