ನಟ ಸೋನು ಸೂದ್ ಅನೇಕ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸೋನು ಸೂದ್ ಅನೇಕ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೋನು ಸೂದ್ ನೆರವಿನ ಹಸ್ತ ಚಾಚುವುದಾಗಿ ಹೇಳಿದ್ದರು. ಅವ್ರ ಈ ಹೇಳಿಕೆ ನಂತ್ರ ಚಿತ್ರವಿಚಿತ್ರ ವಿನಂತಿಗಳು ಬರ್ತಿವೆ. ಈಗ ಮಹಿಳೆಯೊಬ್ಬಳು ಸೋನು ಸೂದ್ ಗೆ ಸಹಾಯ ಮಾಡುವಂತೆ ಕೇಳಿದ್ದಾಳೆ. ಲಾಕ್ ಡೌನ್ 4 ಮುಗಿಯುವವರೆಗೂ ನಾನು ಗಂಡನ ಜೊತೆಗಿದ್ದೆ. ಇನ್ನು ಇರಲು ಸಾಧ್ಯವಿಲ್ಲ. ನನ್ನನ್ನು ನನ್ನ ತಾಯಿ ಮನೆಗೆ ಕಳುಹಿಸುತ್ತೀರಾ ಎಂದು ಕೇಳಿದ್ದಾಳೆ. ಇದಕ್ಕೆ ತಮಾಷೆ ಉತ್ತರ ನೀಡಿದ ಸೋನು, ನನ್ನ ಬಳಿ ಒಂದು ಒಳ್ಳೆ ಉಪಾಯವಿದೆ. ನಾನು ನಿಮ್ಮಿಬ್ಬರನ್ನೂ ಗೋವಾಕ್ಕೆ ಕಳುಹಿಸುತ್ತೇನೆ ಎಂದು ಸೋನು ಸೂದ್ ಹೇಳಿದ್ದಾರೆ. ಸೋನು ಸೂದ್ ಗೆ ತಮಾಷೆ ಬೇಡಿಕೆ ಬಂದಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ನೋಡದೆ ತುಂಬಾ ದಿನವಾಯ್ತು. ಭೇಟಿಗೆ ಅವಕಾಶ ಮಾಡಿಕೊಡಿ ಎಂದಿದ್ದ.
ನಾನು ನಿಮ್ಮಿಬ್ಬರನ್ನೂ ಗೋವಾಕ್ಕೆ ಕಳುಹಿಸುತ್ತೇನೆ : ಸೋನು

Please follow and like us: