ನಾನ್ಯಾಕೆ ಮಾಸ್ಕ್ ಧರಿಸಲಿ: ಟ್ರಂಪ್

ವಾಷಿಂಗ್ಟನ್: ಸುಮಾರು ೧.೨೩ ದಶಲಕ್ಷ ಕರೊನಾ ಸೋಂಕಿತರು, ೭೨ ಸಾವಿರಕ್ಕೂ ಅಧಿಕ ಮಂದಿಯ ಸಾವು… ಇದು ಅಮೆರಿಕದ ಇಂದಿನ ಸ್ಥಿತಿ. ದಿನದಿಂದ ದಿನಕ್ಕೆ ಅಮೆರಿಕ ಕರೊನಾ ಸೋಂಕಿನ ಮೃತ್ಯುಕೂಪವಾಗುತ್ತಿದ್ದರೂ, ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿರುವ ಅಲ್ಲಿಯ ಅಧ್ಯಕ್ಷ ಈಗ ತೆಗೆದುಕೊಳ್ಳುತ್ತಿರುವ  ಒಂದೊಂದು ಕ್ರಮವೂ, ಹೇಳುತ್ತಿರುವ ಒಂದೊಂದು ಮಾತೂ ಇಡೀ ವಿಶ್ವದಲ್ಲಿಯೇ ಚರ್ಚೆಯಾಗುತ್ತಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರು. ಲಾಕ್‌ಡೌನ್ ಸ್ಥಗಿತಗೊಳಿಸುವ ಬಗ್ಗೆ ಘೋಷಣೆ ನೀಡುವ ಮೂಲಕ ಇದಾಗಲೇ ವಿವಾದಕ್ಕೂ ಒಳಗಾಗಿದ್ದಾರೆ ಟ್ರಂಪ್. ಇದರ ಬೆನ್ನಲ್ಲೇ ಇದೀಗ ನಾನ್ಯಾಕೆ ಮಾಸ್ಕ್ ಧರಿಸಲಿ ಎಂದು ಹೇಳಿ ಮತ್ತೊಂದು ಚರ್ಚೆಗೆ ಗ್ರಾಸವಾಗಿದ್ದಾರೆ.
ಅಮೆರಿಕದ ಅರಿಝೋನಾದಲ್ಲಿರುವ ಹನಿವೆಲ್ ಇಂಟರ್ ನ್ಯಾಷನಲ್ ಮಾಸ್ಕ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದ್ದ ಟ್ರಂಪ್, ತಾನು ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಎನ್ ೯೫ ಮಾಸ್ಕ್ ತಯಾರಿಕಾ ಕಂಪನಿಗೆ ಇಂದು ಭೇಟಿ ನೀಡಿದ್ದರು ಅವರು. ಪಿಪಿಇ (ಪ್ರೊಟೆಕ್ಟಿವ್ ಎಕ್ವಿಪ್ ಮೆಂಟ್) ಮತ್ತು ಮಾಸ್ಕ್ ಕೊರತೆಯಾಗಿದ್ದು, ಐದು ವಾರಗಳಲ್ಲಿ ಹೆಚ್ಚಿನ ಮಾಸ್ಕ್ ತಯಾರಿಸುವ  ಸಂಬಂಧ ಕಾರ್ಖಾನೆಯಲ್ಲಿ ಕೆಲಸ ನಡೆಯುತ್ತಿದೆ. ಈ ಕಾರ್ಖಾನೆಯ ಎಲ್ಲೆಡೆಯೂ ‘ಎಚ್ಚರಿಕೆ. ಈ ಪ್ರದೇಶದಲ್ಲಿ ಮಾಸ್ಕ್ ಅತ್ಯಗತ್ಯ. ಧನ್ಯವಾದಗಳು’ ಎಂಬ ಫಲಕ ಹಾಕಲಾಗಿದೆ. ಅದರ ಹತ್ತಿರವೇ ನಿಂತು ನಾನು ಮಾಸ್ಕ್ ಧರಿಸುವುದಿಲ್ಲ ಎಂದ ಟ್ರಂಪ್, ತಮ್ಮ ಜತೆ ಕಾರ್ಖಾನೆ ವೀಕ್ಷಣೆಗೆ ಬಂದಿದ್ದ ಅಧಿಕಾರಿಗಳಿಗೂ ಮಾಸ್ಕ್ ಕಡ್ಡಾಯ ಮಾಡಿರಲಿಲ್ಲ! ಅವರು ಕೂಡ ಮಾಸ್ಕ್ ಧರಿಸದೇ ಬಂದಿದ್ದು  ಕಂಡುಬಂದಿದೆ ಎಂದು ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ದೇಶದ ಜನರ ಸಾವಿಗಿಂತ ಆರ್ಥಿಕ ಚಟುವಟಿಕೆಯ ಮೇಲೆ ಗಮನವಿಟ್ಟಿರುವ ಟ್ರಂಪ್, ಸದ್ಯ ದೇಶದ ಆರ್ಥಿಕತೆ ಹೆಚ್ಚಿಸುವ ಅಗತ್ಯವಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ, ಮಾಸ್ಕ್ ಧರಿಸದೇ ಕಾರ್ಯ ನಿರ್ವಹಿಸಿದರೆ ಸಾವಿನ ಸಂಖ್ಯೆ ಹೆಚ್ಚಾಗುತ್ತದೆಯಲ್ಲವೆ ಎಂಬ ಪತ್ರಕರ್ತರ ಪ್ರಶ್ನೆಗೆ ಹೌದು ಎಂಬ ಉತ್ತರ ನೀಡಿ ತಣ್ಣಗಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಮರ ಕಲೆ ಕಲಿಕೆಯಲ್ಲಿ ದಿಗ್ಗಿ -  ಆಂಡಿ

Wed May 6 , 2020
ನಟ ದಿಗಂತ್ ಮಂಚಾಲೆ, ನಟಿ ಐದ್ರಿಂತಾ ದಂಪತಿ ಸೋಷಿಯಾಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರ್ತಾರೆ. ಇದೀಗ ಲಾಕ್ ಡೌನ್ ಟೈಂನಲ್ಲಿ ನಾವೇನು ಮಾಡ್ತೀದ್ದೀವಿ ಅನ್ನೋದನ್ನ ಅಭಿಮಾನಿಗಳ ಜೊತೆ ಶೇರ್ ಮಾಡ್ಕೊಂಡಿದ್ದಾರೆ. ದಿಗಂತ್ ಸದಾ ಆಕ್ಟೀವ್ ಪರ್ಸನಾಲಿಟಿ. ಇದೀಗ ದಿಗಂತ್ ತಮ್ಮ ಮನೆಯ ಟೆರೆಸ್ ನಲ್ಲೇ ರೋಪ್ಡ್ ಆರ್ಟ್ ನ ಪ್ರೈಮರಿ ಪಟ್ಟುಗಳನ್ನ ಕಲಿಯುತ್ತಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಪತ್ನಿ ಬೇಬಿ ಡಾಲ್ ಆಂಡಿ ಸಹ ನನ್ ಚೆಕ್ […]

Advertisement

Wordpress Social Share Plugin powered by Ultimatelysocial