ನೀರಿನಲ್ಲೂ ಕೋವಿಡ್ ಸೋಂಕು

ಫ್ರಾನ್ಸ್ ಕರೊನಾ ಸಂಕಷ್ಟಕ್ಕೆ ತತ್ತರಿಸಿದೆ. ಈವರೆಗೆ ಅಲ್ಲಿ ೧,೫೪,೦೯೮ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ೧೯,೭೭೮ ಜನರು ಮೃತಪಟ್ಟಿದ್ದಾರೆ. ಕೋವಿಡ್-೧೯ ನಿಯಂತ್ರಣಕ್ಕೆ ಸಿಗದ ಕಾರಣ ಅಲ್ಲಿ ದೇಶಾದ್ಯಂತ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಇದೀಗ ಆಘಾತಕಾರಿ ಸುದ್ದಿಯೊಂದು ಪ್ಯಾರಿಸ್ ನಗರದಿಂದ ವರದಿಯಾಗಿದೆ. ಅಲ್ಲಿನ ನೀರಿನಲ್ಲೂ ಕರೊನಾ ವೈರಸ್ ಪತ್ತೆಯಾಗಿದೆ. ನೀರಿನಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ವೈರಸ್ ಕಣಗಳಿರುವುದು ಪರೀಕ್ಷೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಪ್ರಮಾಣ ತೀರಾ ಕಡಿಮೆಯಿದ್ದು, ನಗರದಲ್ಲಿ ಸ್ವಚ್ಛತಾ ಕಾರ್ಯಗಳೀಗೆ ಬಳಸಲಾಗುವ ನೀರಿನಲ್ಲಿ ಕಂಡು ಬಂದಿದೆ. ಕುಡಿಯುವ ನೀರು ಅತ್ಯಂತ ಶುದ್ಧವಾಗಿದೆ ಎಂದು ಪ್ಯಾರಿಸ್ ನೀರು ಪ್ರಾಧಿಕಾರದ ಪ್ರಯೋಗಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಈ ನೀರಿನ ಪೂರೈಕೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕಾರ್ಟೂನ್ ನಿರ್ದೇಶಕ ಜೆನಿ ಡಿಚ್ ಇನ್ನಿಲ್ಲ

Mon Apr 20 , 2020
ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತುಂಬ ಖುಷಿ ಖುಷಿಯಿಂದ ನೋಡುತ್ತಿದ್ದ ಟಾಮ್ ಅಂಡ್ ಜರ‍್ರಿ ಕಾಮಿಡಿ ಸಿರೀಸ್  ನಿರ್ದೇಶಕ ಜೆನಿ ಡಿಚ್,  ಅಮೆರಿಕಾದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಪತ್ನಿಯರು, ಮೂರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇವರು ಆನಿಮೇಶನ್‌ನಲ್ಲಿ ಡಿಚ್ ಆಸ್ಕರ್ ಪ್ರಶಸ್ತಿ ಪಡೆದಿದ್ದರು.   Please follow and like us:

Advertisement

Wordpress Social Share Plugin powered by Ultimatelysocial