ಸಾಮಾಜಿಕ ಭದ್ರತಾ ಯೋಜನೆಯಡಿ ೨೫ ಲಕ್ಷ ಫಲಾನುಭವಿಗಳಿಗೆ ೧೮ ಲಕ್ಷ ರ‍್ಚು ಮಾಡಲಾಗಿದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ತಿಳಿಸಿದ್ದಾರೆ. ಇಂದು ವಿಧಾನಸೌದದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ೧೯ ಸಾವಿರ ಕೋಟಿ, ಪರಿಶಿಷ್ಟ ಪಂಗಡಕ್ಕೆ ೮ ಸಾವಿರ ಕೋಟಿ ಅನುದಾನ ನೀಡಲಾಗಿದೆ. ಕಳೆದ ರ‍್ಷ ೨೭೫೫೯ ಕೋಡಿ ಹಂಚಿಕೆಯಾಗಿದ್ದು, ೯೨ ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ೨೭ ಲಕ್ಷ ಮಕ್ಕಳಿಗೆ ಸಮವಸ್ತ್ರ, ಭೋಜನಕ್ಕೆ ಅನುದಾನ ನೀಡಲಾಗಿದೆ. ಕೃಷಿ, ಪಶುಸಂಗೋಪನಾ ಇಲಾಖೆಯಲ್ಲಿ ಪರಿಶಿಷ್ಟರಿಗೆ ಕಲ್ಯಾಣ ಕರ‍್ಯಕ್ರಮ. ಈ ರ‍್ಷವೂ ಪರಿಶಿಷ್ಟರಿಗೆ ಕಲ್ಯಾಣಕ್ಕೆ ಹೆಚ್ಚಿನ ಆಧ್ಯತೆ. ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕೆ ಒತ್ತು. ವಸತಿ ಶಾಲೆಗಳಲ್ಲಿ ೪೨ ಸಾವಿರ ಜನರಿಗೆ ಕ್ವಾರಂಟೈನ್ ಮಾಡಲಾಗಿದ್ದು, ಊಟ,ವಸತಿಯನ್ನು ಅವರಿಗೆ ನೀಡಿದ್ದೇವೆ. ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲೇ ಇದನೆಲ್ಲಾ ಒದಗಿಸಿದ್ದೇವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅನುದಾನ: ಡಿಸಿಎಂ

Please follow and like us: