ಪಾದರಾಯನಪುರ ಜಮೀರ್ ಅಹಮದ್ ಫಾದರ್ ಪ್ರಾಪರ್ಟಿ ಅಲ್ಲ

ಪಾದರಾಯನಪುರಕ್ಕೆ ಅನುಮತಿ ಪಡೆದು ಹೋಗಲು ಅದು ಜಮೀರ್ ಅಹಮದ್ ಫಾದರ್ ಪ್ರಾಪರ್ಟಿ ಅಲ್ಲ ಎಂದು ಸಚಿವ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಚಿಕ್ಕಮಗಳೂರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವಾಗ ವಿಧಾನಸಭೆಗೆ ಆಯ್ಕೆಯಾಗಿ ಬಂದಿದ್ದೇನೆಯೋ ಅವಾಗಲೇ ಜಮೀರ್ ಕೂಡ ಆಯ್ಕೆಯಾಗಿ ಬಂದಿದ್ದಾರೆ. ಹೀಗಾಗಿ ಜಮೀರ್ ಅವರಿಗೆ ಒಂದು ಕಾನೂನು ನನಗೊಂದು ಕಾನೂನು ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ. ಈಗಾಗಲೇ ಮುಖ್ಯಮಂತ್ರಿಗಳು ಅವನು ಯಾವ ಸೀಮೆಯ ತೋತಪ್ಪ ನಾಯಕ ಎಂದು ಹೇಳಿದ್ದಾರೆ. ನಾನು ಅದೇ ಪ್ರಶ್ನೆ ಕೇಳಬೇಕಾಗುತ್ತದೆ. ನೀನು ನನ್ನಂತೆಯೇ ಓರ್ವ ಶಾಸಕ ಎಂದು ಜಮೀರ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು. ಅಲ್ಲದೇ, 224 ಮಂದಿ ಶಾಸಕರಲ್ಲಿ ನೀನೂ ಒಬ್ಬ. ಈ 224 ಜನರಲ್ಲಿ ಅನಮತಿ ಪಡೆದು ಹೋಗಬೇಕು ಅಂದರೆ ಅಲ್ಲಿಗೆ ನೀನೇನು ಮಹಮ್ಮದ್ ಆಲಿ ಜಿನ್ನಾ ಎಂದು ಅಂದುಕೊಂಡಿದ್ದೀಯಾ..?. ಪಾದರಾಯನ ಪುರ ಜಮೀರ್ ಫಾದರ್ ಪ್ರಾಪರ್ಟಿ ಅಲ್ವಲ್ಲ. ಫಾದರ್ ಪ್ರಾಪರ್ಟಿ ಆದರೂ ದೇಶದೊಳಕ್ಕೆ ಬಂದರೆ ಅದು ದೇಶದ ನಿಯಮಕ್ಕೆ ಬದ್ಧನಾಗಿರಬೇಕು ಎಂದು ಹರಿಹಾಯ್ದರು.

Please follow and like us:

Leave a Reply

Your email address will not be published. Required fields are marked *

Next Post

ಕೊರೋನಾ ಪೀಡಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ..!

Wed Apr 22 , 2020
ಕೊರೋನಾ ಪೀಡಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮತಿ ನೀಡಿದ್ದು, ರಾಜ್ಯದಲ್ಲಿ ಈ ಮಾದರಿಯ ಚಿಕಿತ್ಸೆ ಮುಂದುವರೆಸಬಹುದು ಎಂದು ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.  ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರೋನಾದಿಂದ ಗುಣಮುಖರಾದ ವ್ಯಕ್ತಿಯ ದೇಹದಿಂದ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡುವ ರಕ್ತದ ಕಣಗಳನ್ನು ರೋಗ ಪೀಡಿತ ವ್ಯಕ್ತಿಗೆ ನೀಡುವ ಮೂಲಕ ಆತನನ್ನೂ ಈ ಕಾಯಿಲೆಯಿಂದ ಗುಣಪಡಿಸಬಹುದು. ಡಾ. ವಿಶಾಲ್ ರಾವ್ ಅವರಿಗೆ […]

Advertisement

Wordpress Social Share Plugin powered by Ultimatelysocial