ನವದೆಹಲಿ: ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ ಚಂದ್ರಕಾಂತ ಗೋಯಲ್ ಇಂದು ಸಾವನ್ನಪ್ಪಿದ್ದು, ಈ ಕುರಿತು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಸಚಿವ ಗೋಯಲ್, ನನಗೆ ಇಷ್ಟು ಪ್ರೀತಿ, ವಾತ್ಸಲ್ಯದ ದಾರಿ ತೋರಿಸಿದ ತಾಯಿ ಇಂದು ಮುಂಜಾನೆ ನಿಧನರಾಗಿದ್ದಾರೆ. ತಾಯಿ ತೋರಿದ ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರು ತಮ್ಮ ಇಡೀ ಜೀವನವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದರು. ಇತರರ ಸೇವೆ ಸಲ್ಲಿಸುವ ಮೂಲಕ ಹೇಗೆ ಜೀವನ ಸಾಗಿಸಬಹುದು ಎಂಬುದಕ್ಕೆ ಪ್ರೇರಣೆಯಾಗಿದ್ದರು. ದೇವರು ಅವರನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ. ಚಂದ್ರಕಾಂತ ಗೋಯಲ್ ಅವರು ಮೂರು ಬಾರಿ ಮಹಾರಾಷ್ಟ್ರದ ಶಾಸಕಿಯಾಗಿದ್ದರು. ಇವರ ನಿಧನಕ್ಕೆ ದೇಶದ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪಿಯೂಷ್ ಗೋಯಲ್ ತಾಯಿ ನಿಧನ

Please follow and like us: