ಪುರ್ನಬಳಕೆ ಪಿಪಿಇ ಕಿಟ್ ಅಭಿವೃದ್ಧಿ

ವಡೋದರಾ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಸೋಂಕು ತಗುಲುವ ರಿಸ್ಕ್ನಲ್ಲೇ ಕೆಲಸ ಮಾಡುವಂತಾಗಿದೆ. ಈಗಾಗಲೇ ದೇಶದ ಹಲವೆಡೆ ಪಿಪಿಇ ಕಿಟ್‌ಗಳು ಅಗತ್ಯ ಪ್ರಮಾಣದಲ್ಲಿ ಸಿಗುವುದು ಕಡಿಮೆಯಾಗಿದೆ. ಇದಕ್ಕೆ ಪರಿಹಾರವಾಗಿ ಈಗ ಶ್ಯೂರ್ ಸೇಫ್ಟಿ ಎಂಬ ಕಂಪನಿ ಮರುಬಳಕೆ ಮಾಡಲು ಸಾಧ್ಯವಾಗುವ ಪಿಪಿಇ ಕಿಟ್ ಅಭಿವೃದ್ಧಿಪಡಿಸಿದೆ. ಈ ವೇಳೆ ಪುರ್ನಬಳಕೆ ಮಾಡಲು ಸಾಧ್ಯವಾಗುವ ಪಿಪಿಇ ಕಿಟ್ ಅಭಿವೃದ್ಧಿಯಾಗಿರೋದ್ರಿಂದ ಇದು ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗಲಿದೆ.
ಈ ಮಧ್ಯೆ ಕೆಲವೆಡೆ ವೈದ್ಯರು ಬಳಸಬೇಕಾದ ಸುರಕ್ಷತಾ ಸೂಟ್‌ಗಳ ಕೊರತೆ ಕೂಡ ಉಂಟಾಗ್ತಿದೆ. ಈ ಕುರಿತು ಶ್ಯೂರ್ ಸೇಫ್ಟಿ ಕಂಪನಿ ಎಂ.ಡಿ ನಿಶಿತ್ ದಂಡ್ ಮಾತನಾಡಿ, ನಾವು ಭಾರತೀಯ ಸೇನೆ, ಕೇಂದ್ರ ಹಾಗೂ ಗುಜರಾತ್ ಸರ್ಕಾರಕ್ಕೆ ಕೊರೊನಾ ಸೇಫ್ಟಿ ಕಿಟ್ ಪೂರೈಸುತ್ತೇವೆ ಎಂದು ತಿಳಿಸಿದ್ದಾರೆ. ಈ ಸೂಟ್ ಧರಿಸಿದಾಗ ವೈದ್ಯರು ಶೇಕಡ ನೂರಕ್ಕೆ ನೂರು ಸುರಕ್ಷಿತರಾಗಿರುತ್ತಾರೆ. ಇದು ಪಾಸಿಟಿವ್ ಏರ್ ಪ್ರೆಶರ್‌ನಿಂದ ಕೆಲಸ ಮಾಡುತ್ತದೆ. ಸೂಟ್ ಒಳಗಿನ ಗಾಳಿಯ ಗುಣಮಟ್ಟವನ್ನ ಅಳೆಯಬಹುದು. ಇದರಿಂದ ಬಯೋಮೆಡಿಕಲ್ ತ್ಯಾಜ್ಯ ಉಂಟಾಗಲ್ಲ ಎಂದು ಅವರು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪ್ರವಾಸಿಗರನ್ನೇ ಕಾಯುತ್ತಿದೆ ಕೊರೊನಾ ಮುಕ್ತ ರಾಜ್ಯ

Sun Apr 26 , 2020
ಪಣಜಿ: ದೇಶದಲ್ಲಿಯೇ ಕರೊನಾ ಮುಕ್ತ ಮೊದಲ ರಾಜ್ಯವೆನಿಸಿದೆ ಗೋವಾ. ಇಲ್ಲಿದ್ದ ಏಳು ಸೋಂಕಿತರ ಪೈಕಿ ಎಲ್ಲರೂ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದರೆ, ಎಲ್ಲ ರಾಜ್ಯಗಳಂತೆ ಇಲ್ಲಿಯೂ ಲಾಕ್‌ಡೌನ್ ನಿಯಮಗಳು ಅನ್ವಯಿಸುತ್ತವೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಈ ರಾಜ್ಯ ಹೊರಗಿನ ಜನರೇ ಇಲ್ಲದಂತಾಗಿ ಆದಾಯದ ಮೂಲವನ್ನೇ ಕಳೆದುಕೊಂಡಿದೆ. ಇನ್ನೊಂದೆಡೆ ಗೋವಾ ಪ್ರಸಿದ್ಧವಾಗಿರುವುದು ಜೂಜಾಟಕ್ಕೆ. ಕ್ಯಾಸಿನೋಗಳು ಕಾನೂನುಬದ್ಧ ಜೂಜಾಟ ನಡೆಸಿದರೆ, ಅಕ್ರಮವಾಗಿ ನಡೆಯುವ ಮಟ್ಕಾ ಸಾವಿರಾರು ಜನರಿಗೆ ಉದ್ಯೋಗ ಮೂಲ. ಪ್ರತಿದಿನ ೧೦-೧೨ […]

Advertisement

Wordpress Social Share Plugin powered by Ultimatelysocial