ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ರ್ಮಾ ಜೋಡಿ ಅಸ್ಸಾಂ ಹಾಗೂ ಬಿಹಾರ ಪ್ರವಾಹ ಸಂತ್ರಸ್ತರಿಗಾಗಿ ಮಿಡಿದಿದೆ. ಪ್ರಮುಖ ಮೂರು ಸಂಘ ಸಂಸ್ಥೆಗಳ ಮೂಲಕ ಪ್ರವಾಹದಲ್ಲಿ ಮನೆ, ಮಠ ಕಳೆದುಕೊಂಡ ಜನರಿಗೆ ನೆರವಾಗಲು ವಿರುಷ್ಕಾ ಮುಂದಾಗಿದ್ದಾರೆ. ಈ ಬಗ್ಗೆ ಕೊಹ್ಲಿ ತಮ್ಮ ಟ್ವಿರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿದೆ. ಅಸ್ಸಾಂ ಹಾಗೂ ಬಿಹಾರದಲ್ಲಿ ಜನರು ಭೀಕರ ಪ್ರವಾಹಕ್ಕೆ ತುತ್ತಾಗಿದ್ದಾರೆ. ಪ್ರವಾಹದಿಂದಾಗಿ ಹಲವರು ಬಲಿಯಾಗಿದ್ದಾರೆ. ಅನೇಕರು ತಮ್ಮ ಕೆಲಸ, ಕರ್ಯ ಕಳೆದುಕೊಂಡಿದ್ದಾರೆ. ನಾವು ಅಸ್ಸಾಂ ಹಾಗೂ ಬಿಹಾರದ ಜನರಿಗಾಗಿ ಪ್ರರ್ಥಿಸುತ್ತಿದ್ದೇವೆ. ನಾನು ಹಾಗೂ ಅನುಷ್ಕಾ ಮೂರು ಸಂಸ್ಥೆಗಳ ಮೂಲಕ ಜನರಿಗೆ ನೆರವಾಗುವ ವಾಗ್ಧಾನ ಮಾಡಿದ್ದೇವೆ. ಎಂದು ಕೊಹ್ಲಿ ಪೋಸ್ಟ್ ಅಲ್ಲಿ ತಿಳಿಸಿದ್ದಾರೆ. ಆದ್ರೆ, ತಾವು ನೀಡಿದ ಮೊತ್ತವನ್ನ ಈ ಜೋಡಿ ಬಹಿರಂಗಪಡಿಸಿಲ್ಲ.