ಪ್ರಾಣಿ ಮಾರುಕಟ್ಟೆ ಮುಚ್ಚೋದ ಬೇಡ : WHO

ವಾಷಿಂಗ್ಟನ್: ವುಹಾನ್‌ನಗರದಲ್ಲಿರುವ ಜೀವಂತ ಪ್ರಾಣಿಗಳ ಮಾರುಕಟ್ಟಯಿಂದಲೇ ಕೊರೊನಾ ಹರಡಿದೆ ಎನ್ನುವ ಆರೋಪಗಳು ಕೇಳಿಬಂದ ಬಳಿಕವೂ ಮಾರುಕಟ್ಟೆಯನ್ನು ಮುಚ್ಚದಿರಲು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಪತ್ರಿಕಾಘೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆಹಾರ ಮತ್ತು ಸುರಕ್ಷತಾ ಮತ್ತು ಪ್ರಾಣಿ ರೋಗತಜ್ಞ ಪೀಟನ್ ಬೆನ್ ಮಾತನಾಡಿ , ಜಾಗತಿಕವಾಗಿ ಲಕ್ಷಾಂತರ ಜನರಿಗೆ ಆಹಾರ ಮತ್ತು ಜೀವನೋಪಾಯವನ್ನು ಒದಗಿಸಲು ಪ್ರಾಣಿ ಮಾರುಕಟ್ಟೆಗಳ ಪಾತ್ರ ನಿರ್ಣಾಯಕವಾಗಿದೆ. ಕೆಲವೊಂದು ಸಮಯದಲ್ಲಿ ಮಾನವರಿಗೆ ಸೋಂಕು ಹರಡಿದರೂ ಕೂಡ ಮಾರುಕಟ್ಟೆಗಳನ್ನು ಮುಚ್ಚು ಬದಲು ಆಡಳಿತ ಸಿಬ್ಬಂದಿ ಸುಧಾರಣಾ ಕ್ರಮಗಳ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ. ವುಹಾನ್ ನಗರದ ಮಾರುಕಟ್ಟಯಿಂದಲೇ ವೈರಸ್ ಹರಡಿದೆ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಹುಲಿ, ಬೆಕ್ಕು, ಶ್ವಾನಗಳು ವೈರಸ್‌ನಿಂದ ಸಾವಿಗೀಡಾಗಿದೆ ಎಂದು ಅಧ್ಯಯನ ತಿಳಿಸಿದೆ. ಇನ್ನೂ ತನಿಖೆ, ಅಧ್ಯಯನಗಳು ನಡೆಯುತ್ತಿವೆ. ಆಹಾರ ಸುರಕ್ಷತೆಯೆನ್ನುವುದು ಸುಲಭದ ಮಾತಲ್ಲ, ಮಾರುಕಟ್ಟೆಯ ಒಳಗಡೆಯೇ ಕೆಲವೊಮ್ಮೆ ಇಂತಹ ಅವಘಡಗಳು ನಡೆಯುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಪ್ರಾಣಿ ಹಾಗೂ ಆಹಾರ ಸುರಕ್ಷತಾ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಆಗಾಗ ಕಿಕ್ಕಿರಿದು ತುಂಬಿ ತುಳುಕುವ ಮಾರುಕಟ್ಟೆಗಳಲ್ಲಿ ಪ್ರಾಣಿಗಳಿಂದ ಮಾನವನಿಗೆ ರೋಗ ಹರಡುವುದನ್ನು ನಿಯಂತ್ರಿಸಬಹುದು.

Please follow and like us:

Leave a Reply

Your email address will not be published. Required fields are marked *

Next Post

ನೀರಿನ ಬಾಟಲಿಯನ್ನೇ ಚಪ್ಪಲಿ ಮಾಡಿಕೊಂಡ ಕಾರ್ಮಿಕ

Sat May 9 , 2020
ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕರು ಕಾಲ್ನಡಿಗೆಯಲ್ಲಿ ಊರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದಾರಿ ಮಧ್ಯೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕೆಲ ಕಾರ್ಮಿಕರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಈ ಎಲ್ಲದರ ಮಧ್ಯೆ ಕಾರ್ಮಿಕನ ಚಪ್ಪಲಿ ಸುದ್ದಿಯಲ್ಲಿದೆ. ಪಂಜಾಬ್ ನಿಂದ ಹರಿಯಾಣಕ್ಕೆ ಹೊರಟ ಕಾರ್ಮಿಕರನ್ನು ಅಂಬಾಲಿಯಲ್ಲಿ ಪೊಲೀಸರು ತಡೆದಿದ್ದರು. ಪೊಲೀಸರ ಕೆಲವರ ಚಪ್ಪಲಿ ಪಡೆದಿದ್ದರು. ಆದ್ರೆ ಇದಕ್ಕೆ ಹೆದರದ ಕಾರ್ಮಿಕರು ನೀರಿನ ಬಾಟಲಿಯನ್ನು ಚಪ್ಪಲಿ ಮಾಡಿಕೊಂಡು ರಸ್ತೆಗಿಳಿದಿದ್ದಾರೆ. ಕಾರ್ಮಿಕರು ಹೆದ್ದಾರಿಗೆ ಬರ್ತಿದ್ದಂತೆ ತಡೆದ […]

Advertisement

Wordpress Social Share Plugin powered by Ultimatelysocial