ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದ್ದು. ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಇದ್ದರೂ ಸಹ ಸ್ವಾವಲಂಬಿಗಳಾಗದ ಬಹಳಷ್ಟು ಮಂದಿ ಬಾವಿ ಕೊರೆಯುವುದಕ್ಕೆ ಮುಂದೆ ಬಂದಿದ್ದರು. ಈ ಸಮಯದಲ್ಲಿ ಮನೆಯಲ್ಲೇ ಇದ್ದ ಜನರನ್ನು ಉದ್ಯೋಗ ಖಾತರಿ ಯೋಜನೆಯ ತಿಳುವಳಿಕೆ ಮೂಡಿಸಿ ತಮ್ಮ ಜಮೀನುಗಳಲ್ಲಿ ಕುಡಿಯುವ ನೀರಿನ ಬಾವಿ ಕೊರೆಯುವ ಯೋಜನೆಯಡಿ ಅನುದಾನ ನೀಡುವುದಾಗಿ ಗ್ರಾಮ ಪಂಚಾಯತ್ ತಿಳಿಸಿತ್ತು. ಹಾಗಾಗಿ ತಮ್ಮ ತಮ್ಮ ಮನೆಗಳ ಬಳಿ ತೆರೆದ ಬಾವಿಗಳನ್ನು ತೋಡುವ ಕೆಲಸವನ್ನು ಆರಂಭಿಸಿದರು. ಅಂತರ್ಜಲ ವೃದ್ಧಿಗೆ ಯೋಜನೆ ಮೂರನೇ ಹಂತದ ಲಾಕ್‌ಡೌನ್ ಅವಧಿ ಮುಗಿಯುವ ಹೊತ್ತಿಗೆ ಗ್ರಾಮದಲ್ಲಿ 12 ಹೊಸ ಬಾವಿಗಳ ಕೆಲಸ ಪೂರ್ಣಗೊಂಡಿದೆ. ಪ್ರಸ್ತುತ ಗ್ರಾಮಸ್ಥರು ಅದೇ ಬಾವಿಗಳ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ.
ಬಂಟ್ವಾಳ: ಲಾಕ್ ಡೌನ್ ವೇಳೆಯಲ್ಲಿ 12 ಬಾವಿ ನಿರ್ಮಾಣ

Please follow and like us: