ಮಕ್ಕಳ ಮಾರಾಟ ನಡೆಯುತ್ತಿದೆ. ಆದರೆ ಈ ಪ್ರಕರಣದಲ್ಲಿ ಸ್ವಂತ ತಾಯಿಯೇ ಮಗಳನ್ನು ಮಾರಾಟ ಮಾಡಿದ್ದು

ಚೆನ್ನೈ: ಮಕ್ಕಳ ಮಾರಾಟ ಜಾಲ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳ ಹಿಂದಿನಿಂದಲೂ ಮಕ್ಕಳ ಮಾರಾಟ ನಡೆಯುತ್ತಿದೆ. ಆದರೆ ಈ ಪ್ರಕರಣದಲ್ಲಿ ಸ್ವಂತ ತಾಯಿಯೇ ಮಗಳನ್ನು ಮಾರಾಟ ಮಾಡಿದ್ದು, ಪೊಲೀಸರು ಆಕೆಯನ್ನು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ.ಮಗುವಿನ ತಾಯಿ ಕಲೈಸೆಲ್ವಿ ಆಕೆಯ ಸಹಚರ ಕರುಪ್ಪುಸಾಮಿ, ಮಗುವನ್ನು ಖರೀದಿಸಿದ್ದ ದಂಪತಿ, ಏಜೆಂಟ್​​ಗಳಾದ ಮರಿಯಮ್ಮ, ಮಹೇಶ್ವರಿ ಹಾಗೂ ಇನ್ನು ಮೂವರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.ಸೇವಲ್​ಪಟ್ಟಿ ನಿವಾಸಿ ಕಲೈಸೆಲ್ವಿ ತನ್ನ ಪತಿಯ ಮರಣದ ಬಳಿಕ ಕರುಪ್ಪುಸಾಮಿ ಎಂಬಾತನ ಜತೆಗಿದ್ದಳು. ಇವರು ತಮಿಳುನಾಡು ವಿರುಧುನಗರ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವನ್ನು 2.3 ಲಕ್ಷ ರೂಪಾಯಿಗೆ ಮಾರಿದ್ದರು.ಬುಧವಾರ ರಾತ್ರಿ ವಿರುಧನಗರ ಚೈಲ್ಡ್​ಲೈನ್​ಗೆ ಮಗುವಿನ ಮಾರಾಟವಾಗಿರುವ ಕುರಿತು ಅನಾಮಧೇಯ ಕರೆ ಬಂದಿತ್ತು. ಚೈಲ್ಡ್​ಲೈನ್​ಗೆ ಸಂಬಂಧಪಟ್ಟವರು ಕಲೈಸೆಲ್ವಿ ನೆಲೆಸಿದ್ದ ಪ್ರದೇಶಕ್ಕೆ ಹೋಗಿ ವಿಚಾರಿಸಿದಾಗ ಮಗು ಮಾರಾಟವಾಗಿರುವುದು ದೃಢಪಟ್ಟಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.ಮದುವೆ ದಲ್ಲಾಳಿಗಳ ರೂಪದಲ್ಲಿ ಕೆಲವು ಏಜೆಂಟ್​ಗಳು ಮಕ್ಕಳ ಮಾರಾಟದಲ್ಲಿ ತೊಡಗಿದ್ದು, ಇಂಥ ಪ್ರಕರಣಗಳು ಹಲವು ನಡೆಯುತ್ತಿರುವುದರ ಶಂಕೆ ಮೂಡಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BOLLYWOOD:ನಂದಿತಾ ದಾಸ್ ಅವರ ಮುಂದಿನ ಚಿತ್ರದಲ್ಲಿ ಕಪಿಲ್ ಶರ್ಮಾ ಫುಡ್ ಡೆಲಿವರಿ ರೈಡರ್ ಆಗಿ ನಟಿಸಲಿದ್ದಾರೆ!

Thu Feb 17 , 2022
ಸೀಮೆಸುಣ್ಣ ಮತ್ತು ಚೀಸ್ ನೈಜವಾಗಿ ಒಟ್ಟಿಗೆ ಬರುತ್ತಿದೆ ಮತ್ತು ಅದರ ಇತ್ತೀಚಿನ ಉದಾಹರಣೆಯೆಂದರೆ ಈ ಸುದ್ದಿ -ಕಪಿಲ್ ಶರ್ಮಾ ಮತ್ತು ನಂದಿತಾ ದಾಸ್ ಚಿತ್ರವೊಂದಕ್ಕೆ ಜೊತೆಯಾಗಿದ್ದಾರೆ. ತುಂಬಾ ವಿಚಿತ್ರವೆನಿಸುತ್ತದೆ ಸರಿ? ಪರಿಗಣಿಸಿ, ಅವರು ತಮ್ಮ ಕೆಲಸದ ದೇಹದಲ್ಲಿ ಅಂತಹ ವೈವಿಧ್ಯಮಯ ಪ್ರಕಾರಗಳಿಗೆ ಸೇರಿದ್ದಾರೆ. ಆದರೆ ನಟ ನಂದಿತಾ ಅವರ ಮುಂದಿನ ಸಾಹಸದೊಂದಿಗೆ ಮತ್ತೆ ಚಲನಚಿತ್ರಗಳಿಗೆ ಮರಳಲಿದ್ದಾರೆ. ಅವರು ಫುಡ್ ಡೆಲಿವರಿ ರೈಡರ್ ಆಗಿ ನಟಿಸಿದ್ದಾರೆ. ನಂದಿತಾ ದಾಸ್ ಇನಿಶಿಯೇಟಿವ್ಸ್ ಜೊತೆಗೆ […]

Advertisement

Wordpress Social Share Plugin powered by Ultimatelysocial