ಇಂದಿನಿಂದ ಪ್ರಾರಂಭಗೊಂಡ ಪುಲಿಗೆರೆ ಉತ್ಸವ.

ಲಕ್ಷೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಪುಲಿಗೆರೆ ಉತ್ಸವಕ್ಕೆ ಸಿದ್ಧವಾಗಿರುವ ವೇದಿಕೆ,ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಹಾಗೂ ದೇವಾಲಯದ ಶ್ರೀ ಸೋಮೇಶ್ವರ ಸಹಯೋಗದಲ್ಲಿ ಮೂರು ದಿನ ನಡೆಯಲಿರುವ ಪುಲಿಗೆರೆ ಉತ್ಸವಕ್ಕೆ ಪಟ್ಟಣದಲ್ಲಿ ಇಂದು ಚಾಲನೆ ದೊರೆಯಿತು.ಇನ್ಫೋಸಿಸ್ ಫೌಂಡೇಶನ್ಹಣಕಾಸು ವ್ಯವಸ್ಥಾಪಕ ಪ್ರಶಾಂತ ಹೆಗಡೆ ಅವರು ಡಿ.16 ರಂದು ಬೆಳಗ್ಗೆ 6ಕ್ಕೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಬೆಳಗ್ಗೆ 6.30ಕ್ಕೆ ಮಾರುತಿ ಅವರಿಂದ ಶಹನಾಯಿ ವಾದನದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು, ಇವರಿಗೆ ಮಲ್ಲೇಶ ಹೂಗಾರ ತಬಲಾ ಸಾಥ್ ನೀಡಿದರು.ಬೆಳಗ್ಗೆ 7.30ಕ್ಕೆ ಅಂಕುಶ ನಾಯಕ್ ಅವರು ಸಿತಾರ ವಾದನ ನುಡಿಸಿ, ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡಿದರು. ಸಂಜೆ 4ಕ್ಕೆ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಬಾಗಲಕೋಟೆ ಮಹಾದೇವ ಕಲ್ಯಾಣಿ ಮತ್ತು ತಂಡದಿಂದ ಕರಡಿ ಮಜಲು ವಾದ್ಯ ವೈಭವಗಳೊಂದಿಗೆ ಉತ್ಸವ ನಡೆಯುವುದು.ಲಕ್ಷ್ಮೀಶರ ಪಟ್ಟಣದ ಪುಲಿಗೆರೆ ಸೋಮೇಶ್ವರ ದೇವಸ್ಥಾನ.3 ದಿನ ವೈವಿಧ್ಯಮಯ ಕಾರ್ಯಕ್ರಮನಾಳೆ ಸಂಜೆ 7.30ಕ್ಕೆ ವೀಣಾ ಮಣಿ ನಿರ್ದೇಶನದಲ್ಲಿ ಕೂಚಿಪುಡಿ ನೃತ್ಯ ರೂಪಕ ಶಿವಾರ್ಪಣಂ ಪ್ರಸ್ತುತಪಡಿಸಲಿದ್ದು, ಸಂಜೆ 8.30 ಕ್ಕೆಸಮುದ್ಯತ ಭಟ್ ನಿರ್ದೇಶನದಲ್ಲಿ ನಾಟ್ಯತರಂಗ ಕಲಾವಿದರಿಂದ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. ಇದರೊಂದಿಗೆ ಅಂದಿನ ಉದಯರಾಗ-1 ಸಂಪನ್ನಗೊಳ್ಳಲಿದೆ.ಸಕಲ ಸಿದ್ಧತೆ:ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಉತ್ಸವದ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಮತ್ತೆ ಈಗ ಆರನೇ ವರ್ಷದ ಉತ್ಸವ ನಡೆಯತಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಉತ್ಸವದಲ್ಲಿ ದೇಶ, ವಿದೇಶ, ರಾಜ್ಯದ ಪ್ರಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಲಗ್ ಸಮಯಕ್ಕೆ ಸರಿಯಾಗಿ ಬಾರದ ಬಸ್ಸು :ವಿದ್ಯಾರ್ಥಿಗಳ ಪರದಾಟ

Fri Dec 16 , 2022
ಪದೇ-ಪದೇ KSRTC ಅಧಿಕಾರಗಳು ಮಾಡುತ್ತಿರುವ ತಪ್ಪು ಅವರಿಗೆ ಕೇಳುವವರು ಇಲ್ಲ ಹೇಳುವವರು ಇಲ್ಲ. ಬಸ್ಸಿಗಾಗಿ ಪರದಾಟ ಸ್ಥಳಕ್ಕೆ ಪೊಲೀಸ್ 112 ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚೀಲಮೂರ ಗ್ರಾಮದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಗೋಳು ಬೇರೆ ಗ್ರಾಮದ ಬಸ್ಸುಗಳಿಗೆ ಹತ್ತಿದ್ರೆ ಕಂಡೆಕ್ಟರಗಳಿಂದ್ ವಿದ್ಯಾರ್ಥಿಗಳಿಗೆ ಅಪಮಾನ. ರಾಮದುರ್ಗ ಬಸ್ಸನಿಲ್ದಾಣದಲ್ಲಿ ಬಸ್ಸಿಗಾಗಿ KSRTC ಡಿಪೋ ಮ್ಯಾನೇಜರ ಜೊತೆ ಕೆಲಕಾಲ ಮಾತಿನ ಚಕಮಕಿ ಗೊಂದಲದ ವಾತಾವರಣ. ರಾಮದುರ್ಗಕ್ಕೇ ದಿನ ನಿತ್ಯ ಸಮಯಕ್ಕೆ ಸರಿಯಾಗಿ ಬಸ್ […]

Advertisement

Wordpress Social Share Plugin powered by Ultimatelysocial