ಏನೇ ಮಾಡಿದರೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇರುವ ಈ ಕೊರೊನಾ ಸೋಂಕು ದೊಡ್ಡ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ವಿಜ್ಞಾನಿಗಳು ಅತ್ಯಂತ ಭಯ ಹುಟ್ಟಿರುವ ವರದಿಯನ್ನು ನೀಡಿದ್ದಾರೆ. ಅದೇನೆಂದರೆ, ಕರೊನಾ ವೈರಸ್ಗಿಂತಲೂ ಭೀಕರ ವೈರಸ್ ಜಗತ್ತನ್ನು ಆವರಿಸಲಿದ್ದು, ಅದು ವಿಶ್ವದ ಅರ್ಧದಷ್ಟು ಜನರ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬ ವರದಿಯನ್ನು ಅವರು ನೀಡಿದ್ದಾರೆ. ವಿಜ್ಞಾನಿಗಳು ಹೇಳಹೊರಟಿರುವ ಈ ವೈರಸ್ ಶುರುವಾಗುವುದು ಕೋಳಿ ಸಾಕಾಣಿಕೆ ಕೇಂದ್ರದಿಂದ ಎಂಬುದು. ಅಂದರೆ ಇತ್ತೀಚೆಗೆ ಕೋಳಿ ಸಾಕಾಣಿಕೆ ಕೇಂದ್ರವು ಎಗ್ಗಿಲ್ಲದೇ ಶುರುವಾಗಿದ್ದು, ಇದೇ ರೀತಿ ಮುಂದುವರೆದರೆ, ವಿಶ್ವಕ್ಕೆ ವಿಶ್ವವೇ ವೈರಸ್ನಿಂದ ನಲುಗಿ ಹೋಗಲಿದೆ ಎಂಬ ಎಚ್ಚರಿಕೆಯನ್ನು ಸಂಶೋಧನೆಗಳ ಮೂಲಕ ಅವರು ತಿಳಿಸಿದ್ದಾರೆ. ಕೋಳಿ ಸಾಕಾಣಿಕೆ ಕೇಂದ್ರದಿಂದ ಅಪೋಕ್ಯಾಲಿಪ್ಸ್ ಎಂಬ ವೈರಸ್ ಹುಟ್ಟಿಕೊಳ್ಳಲಿದ್ದು, ಇದು ಕರೊನಾಕ್ಕಿಂತಲೂ ಅತ್ಯಧಿಕ ಪಟ್ಟು ಅಪಾಯಕಾರಿ ಎಂದಿದ್ದಾರೆ ಸಂಶೋಧಕ ಡಾ.ವೈಕೆಲ್ ಗ್ರೆಗರ್.ಇದನ್ನು ಅವರು ತಮ್ಮ ‘ಹೌ ಟು ಸರ್ವೈವ್ ಎ ಅಪೆಡೆಮಿಕ್ ಎಂಬ ಪುಸ್ತಕದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಏರುಗತಿಯಲ್ಲಿ ಸಾಗುತ್ತಿರುವ ಕೋಳಿ ಸಾಕಾಣಿಕೆ ಕೇಂದ್ರವನ್ನು ಗಮನಿಸಿ ಅವರು ಈ ವಿಷಯ ತಿಳಿಸಿದ್ದಾರೆ. ಮಾಂಸವನ್ನು ತಿನ್ನುವುದರಿಂದ ಇಡೀ ವಿಶ್ವ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದು ಕರೊನಾಕ್ಕಿಂತಲೂ ಅತ್ಯಂತ ಶೀಘ್ರವಾಗಿ ಹರಡಲಿದೆ ಎಂದೂ ಅವರು ಎಚ್ಚರಿಸಿದ್ದಾರೆ. ಕೋಳಿಗಳು ಒಟ್ಟೊಟ್ಟಿಗೆ ಇದ್ದಾಗ ಅವುಗಳಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಆಗ ಶ್ವಾಸಕೋಶದ ಒಳಪದರದಲ್ಲಿ ಅಡಗಿರುವ ಸಾಂಕ್ರಾಮಿಕ ಕಣಗಳು ಹೊರಕ್ಕೆ ಬಂದು ಅವು ಅತಿ ಶೀಘ್ರದಲ್ಲಿ ಎಲ್ಲೆಡೆ ಪಸರಿಸುತ್ತವೆ ಎಂದಿದ್ದಾರೆ.
ಬರಲಿದೆ ಕೊರೊನಾಕ್ಕಿಂತಲು ಭೀಕರ ವೈರಸ್

Please follow and like us: